ವರ್ಷಗಳ ಹಿಂದೆ ಗಾಯಿತ್ರಿ ಅಂತೊಂದು ಚಿತ್ರ ತೆರೆ ಕಂಡಿತ್ತು. ಹಾರರ್ ಟೈಪಿನ ಈ ಚಿತ್ರನೋಡಿ ಅದ್ಯಾರೋ ರಕ್ತ ಕಾರಿಕೊಂಡು ಬಿದ್ದ ಎಂಬಂಥಾ ಚೀಪ್ ಗಿಮಿಕ್ಕು ನಡೆಸಿದರೂ ಈ ಚಿತ್ರ ಬರಖತ್ತಾಗಿರಲಿಲ್ಲ. ಆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ರೋಹಿತ್ ಶೆಟ್ಟಿ ಎಂಬಾತ ಇದೀಗ ಆರೋಹಣ ಎಂಬ ಚಿತ್ರದಲ್ಲಿಯೂ ಹೀರೋ. ಈತ ಈಗ ಸಂಭಾವನೆ ಹಣ ಕೊಡದೆ ಮೋಸ ಮಾಡಿದ್ದಾನೆಂದು ಈ ಚಿತ್ರದ ನಿರ್ಮಾಪಕ ಸುಶೀಲ್ ಕುಮಾರ್ ಮೇಲೆ ಆರೋಪ ಮಾಡಿದ್ದಾನೆ!
ಓಲಾ ಕ್ಯಾಬ್ ಡ್ರೈವರ್ ಆಗಿದ್ದುಕೊಂಡೇ ಸಿನಿಮಾ ಹೀರೋ ಕೂಡಾ ಆಗಿರುವಾತ ರೋಹಿತ್ ಶೆಟ್ಟಿ. ಈತ ನಟಿಸಿರೋ ಆರೋಹಣ ಚಿತ್ರದ ಹಾಡುಗಳೂ ಕೂಡಾ ಇತ್ತೀಚೆಗೆ ಬಿಡುಗಡೆಯಾಗಿವೆ. ಆದರೆ ಆ ಪೋಸ್ಟರುಗಳು ಮತ್ತು ಹಾಡುಗಳಲ್ಲಿ ತನ್ನ ಭಾಗದ ದೃಷ್ಯಾವಳಿಗಳನ್ನು ಕತ್ತರಿಸಿ ಕೊಂದು ಹಾಕಲಾಗಿದೆ ಎಂಬುದು ರೋಹಿತ್ ಅಳಲು. ಈತ ಆರೋಹಣ ಚಿತ್ರದ ನಾಯಕ. ಈ ಚಿತ್ರದ ನಿರ್ಮಾಪಕನೂ ಆಗಿರುವ ಸುಶೀಲ್ ಕುಮಾರ್ ಮತ್ತೋರ್ವ ನಾಯಕ. ಆದರೆ ತನ್ನ ಭಾಗವನ್ನೆಲ್ಲ ಕತ್ತರಸಿ ತಾನೇ ಹೀರೋ ಅಂತ ಸುಶೀಲ್ ಮೆರೆಯುತ್ತಿರೋದಕ್ಕೆ ಕಾರಣ ತಾನು ಕಾಸು ಕೇಳಿ ಗಲಾಟೆ ಮಾಡಿದ್ದು ಅನ್ನೋದು ರೋಹಿತ್ ಆರೋಪ.
ಈ ಚಿತ್ರ ಆರಂಭವಾಗುವಾಗ ನಿರ್ಮಾಪಕ ಸುಶೀಲ್ ಕುಮಾರ್ ರೋಹಿತನಿಗೆ ಎರಡು ಲಕ್ಷ ಸಂಭಾವನೆ ಕೊಡೋದಾಗಿ ಹೇಳಿದ್ದ. ಆ ನಂತರ ಅಡ್ವಾನ್ಸ್ ಆಗಿ ಐವತ್ತು ಸಾವಿರ ಕೊಟ್ಟಿದ್ದನಂತೆ. ಆದರೆ ಚಿತ್ರೀಕರಣ ಮುಕ್ತಾಯವಾಗುತ್ತಾ ಬಂದರೂ ಉಳಿದ ಒಂದೂವರೆ ಲಕ್ಷ ಕೊಡುವ ಬಗ್ಗೆ ಸುಶೀಲ್ ಮಾತೇ ಆಡಿರಲಿಲ್ಲ. ಈ ಬಗ್ಗೆ ಕೇಳಿದಾಗ ಆತ ಒಂದು ಲಕ್ಷದ ಚೆಕ್ ಕೊಟ್ಟಿದ್ದಾನೆ. ಆದರೆ ಈಗ ಅಕೌಂಟಲ್ಲಿ ಕಾಸಿಲ್ಲದಿರೋದರಿಂದ ತಾನು ಹೇಳಿದ ಮೇಲೆ ಡ್ರಾ ಮಾಡಿಕೊಳ್ಳುವಂತೆಯೂ ಹೇಳಿದ್ದನಂತೆ. ಆದರೆ ಆ ಬಗ್ಗೆ ಯಾವ ಬೆಳವಣಿಗೆಯೂ ಆಗದ್ದರಿಂದ ರೋಹಿತ್ ಮತ್ತೆ ಕೇಳಿದಾಗ ಸುಸೀಲ್ `ನೀನೊಬ್ಬ ಜುಜುಬಿ ಓಲಾ ಕ್ಯಾಬ್ ಡ್ರೈವರ್. ನಿಂಗೆ ನಾನು ಯಾವ ಕಾಸನ್ನೂ ಕೊಡಬೇಕಿಲ್ಲ’ ಅಂತ ಅವಾಜು ಹಾಕಿದ್ದಾರಂತೆ. ಅದೇನೇ ಇರಲಿ ಚಿತ್ರರಂಗ ಇವತ್ತಿರುವ ಪರಿಸ್ಥಿತಿಯಲ್ಲಿ ಹೊಸ ಹುಡುಗರು ಅವಕಾಶ ಪಡೆಯೋದೇ ಹೆಚ್ಚು. ಅಂಥಾದ್ದರಲ್ಲಿ ರೋಹಿತ್ ಎರಡು ಲಕ್ಷ ಸಂಭಾವನೆ ಪಡೆಯುವಷ್ಟು ಬೆಳೆದಿರೋ ನಟನಾ? ಅನ್ನೋದು ಕೆಲವರ ವಾದ. ಹಣದ ಮೊತ್ತ ಎಷ್ಟಾದರಾಗಲಿ, ಒಪ್ಪಿಕೊಳ್ಳುವ ಮುಂಚೆ ಸುಶೀಲ್ ಯೋಚಿಸಬೇಕಿತ್ತು. ಅದು ಬಿಟ್ಟು ಈಗ ಒಪ್ಪಿಕೊಂಡ ದುಡ್ಡು ಕೊಡದೇ ಆಟಾಡಿಸಿರೋದು ಮಾತ್ರ ತಪ್ಪೇ.
ಈ ಬಗ್ಗೆ ಭಾರೀ ಗಲಾಟೆ ನಡೆದೇಟಿಗೆ ಸುಶೀಲ್ ರೋಹಿತ್ ಭಾಗದ ದೃಷ್ಯಾವಳಿಗಳಿಗೆ ಕತ್ತರಿ ಹಾಕಿದ್ದಾರೆ. ಈಗ ಈ ಚಿತ್ರಕ್ಕೆ ತಾನೇ ಹೀರೋ ಅಂತಲೂ ಪೋಸು ಕೊಡುತ್ತಿದ್ದಾರೆಂಬುದು ಸದ್ಯದ ನ್ಯೂಸು!
#
No Comment! Be the first one.