ಮುದ್ದು ಮನಸೇ, ಮೂರು ಘಂಟೆ, ೩೦ ದಿನ ೩೦ ಸೆಕೆಂಡ್ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ನಟ ಅರುಣ್ ಗೌಡ. ನೆನ್ನೆ ದಿನದ ಒರಾಯನ್ ಮಾಲ್ಗೆ ನಟಿ ಐಶೂ ಜೊತೆ ಸಿನಿಮಾ ನೋಡಲು ಹೋಗಿದ್ದರಂತೆ. ಸಿನಿಮಾ ಆರಂಭಕ್ಕೂ ಮುಂಚೆ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಯಾರೋ ಮೂವರು ಮಹಿಳೆಯರು ಎದ್ದು ನಿಲ್ಲದೇ ಸುಮ್ಮನೇ ಕುಳಿತಿದ್ದರಂತೆ.
ಇದನ್ನು ಪ್ರಶ್ನಿಸಿದಾಗ ‘ಬೇಕಿದ್ದರೆ ಹೋಗಿ ಕೇಸು ಹಾಕಿಕೊಳ್ಳಿ ಅಂತಾ ಅವರು ಉಡಾಫೆ ಮಾತಾಡಿದ್ದಾರೆ. ಅವರ ಮಾತುಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ ಅರುಣ್ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ರಾಷ್ಟ್ರಗೀತೆಗೆ ಅಗೌರವ ಸೂಚಿಸುವಂತೆ ನಡೆದುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಈಗ ಆ ಮೂವರು ಮಂದಿ ಕತೆ ಏನಾಗುತ್ತದೋ ಗೊತ್ತಿಲ್ಲ
ನಿಜಕ್ಕೂ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರೆ ಆ ಮೂವರು ದ್ರೋಹಿಗಳನ್ನು ಹಿಡಿಯುವುದು ಕಷ್ಟದ ವಿಚಾರವೇನಲ್ಲ. ಪಿ.ವಿ.ಆರ್.ನಲ್ಲಿ ಅವರು ಆನ್ಲೈನ್ ಮೂಲಕವೇ ಟಿಕೇಟು ಬುಕ್ ಮಾಡಿರಬಹುದು ಅಥವಾ ಕೌಂಟರ್ನಲ್ಲಿ ಟಿಕೇಟು ಪಡೆದಿದ್ದರೂ ಅವರ ಮೊಬೈಲ್ ನಂಬರ್, ಇತ್ಯಾದಿ ವಿವರಗಳು ದಾಖಲಾಗಿರುತ್ತವೆ. ಮೇಲಾಗಿ ಅರುಣ್ ಗೌಡ ರೆಕಾರ್ಡು ಮಾಡಿರುವ ವಿಡಿಯೋದಲ್ಲಿ ಇವರ ಚಹರೆ ಕೂಡಾ ಸ್ಪಷ್ಟವಾಗಿ ಕಾಣುತ್ತಿದೆ.
ಕಾನೂನು ಇವರನ್ನು ಶಿಕ್ಷಿಸುತ್ತದೋ ಇಲ್ಲವೋ, ಸದ್ಯ ಫೇಸ್ ಬುಕ್ಕು ವಾಟ್ಸಾಪುಗಳಲ್ಲಿ ಇದೇ ವಿಡಿಯೋ ಓಡಾಡುತ್ತಾ, ವೈರಲ್ ಆಗಿರೋದರಿಂದ ‘ಯಾಕಾದರೂ ಯಡವಟ್ಟು ಮಾಡಿಕೊಂಡೆವೋ ಅಂತಾ ಅಂದುಕೊಳ್ಳೋ ರೇಂಜಿಗೆ ಆ ಮೂವರ ಮಾನ ಹರಾಜಾಗೋದು ಗ್ಯಾರೆಂಟಿ. ತಮ್ಮ ಕಣ್ಣೆದುರು ಇಂಥದ್ದೊಂದು ದೇಶದ್ರೋಹದ ಕೆಲಸ ನಡೆದಾಗ ತಕ್ಷಣ ಅದನ್ನು ವಿರೋಧಿಸಿದ ಅರುಣ್ ಗೌಡ ಮತ್ತು ಐಶು ಅವರನ್ನು ನಿಜಕ್ಕೂ ಅಭಿನಂದಿಸಬೇಕು.