ದಕ್ಷಿಣ ಭಾರತದ ತಾರೆಯರಾದ ಆರ್ಯ ಮತ್ತು ಸಯೇಶಾ ನಿನ್ನೆ ದಾಂಪತ್ಯ ಬದುಕು ಪ್ರವೇಶಿಸಿದ್ದಾರೆ. ಹೈದರಾಬಾದ್ನ ಫಲಕ್ನುಮಾ ಪ್ಯಾಲೇಸ್ನಲ್ಲಿ ಕುಟುಂಬದವರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಇವರ ವಿವಾಹ ನೆರವೇರಿದೆ. ಮೊನ್ನೆ ವಿವಾಹ ಪೂರ್ವದಲ್ಲಿ ಆಯೋಜನೆಗೊಂಡಿದ್ದ ಸಂಗೀತ್ ಸಮಾರಂಭದಲ್ಲಿ ಅಲ್ಲು ಅರ್ಜುನ್ ಸೇರಿದಂತೆ ದಕ್ಷಿಣ ಭಾರತದ ಕೆಲವು ತಾರೆಯರು ಪಾಲ್ಗೊಂಡಿದ್ದರು. ನಿನ್ನೆ ಮದುವೆಯಲ್ಲಿಯೂ ಹತ್ತಾರು ನಟ-ನಟಿಯರು ಪಾಲ್ಗೊಂಡು ನವದಂಪತಿಗೆ ಶುಭಹಾರೈಸಿದ್ದಾರೆ.
ಆರ್ಯ ಮತ್ತು ಸಯೇಶಾ ಕಳೆದ ವರ್ಷ ತೆರೆಕಂಡ ‘ಘಜನೀಕಾಂತ’ ತಮಿಳು ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದ ನಂತರ ಇಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ವದಂತಿ ಇದ್ದೇ ಇತ್ತು. ಕಳೆದ ತಿಂಗಳು ವ್ಯಾಲೆಂಟೇನ್ ದಿನ ನಟ ಆರ್ಯ ಮತ್ತು ಸಯೇಶಾ ಟ್ವಿಟರ್ನಲ್ಲಿ ತಾವು ಪ್ರೀತಿಸುತ್ತಿರುವ ಸುದ್ದಿಯನ್ನು ಖಚಿತಪಡಿಸಿದ್ದರು. “ಹಿರಿಯರು ಹಾಗೂ ಹಿತೈಷಿಗಳ ಶುಭಹಾರೈಕೆಗಳೊಂದಿಗೆ ನಾವು ಮಾರ್ಚ್ ತಿಂಗಳಲ್ಲಿ ವಿವಾಹವಾಗುತ್ತಿದ್ದೇವೆ. ನಮ್ಮ ಹೊಸ ಬದುಕಿಗೆ ಎಲ್ಲರ ಹಾರೈಕೆ ಇರಲಿ” ಎಂದು ಟ್ವೀಟಿಸಿದ್ದರು. ಅದರಂತೆ ಈಗ ತಾರೆಯರು ಸತಿ-ಪತಿಯಾಗಿದ್ದಾರೆ. ತೆರೆಗೆ ಸಿದ್ಧವಾಗುತ್ತಿರುವ ಸೂರ್ಯ ಅಭಿನಯದ ‘ಕಾಪ್ಪಾನ್’ ತಮಿಳು ಚಿತ್ರದಲ್ಲಿ ಆರ್ಯ ಮತ್ತು ಸಯೇಶಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ತೆರೆಕಂಡ ‘ರಾಜರಥ’ ಕನ್ನಡ ಚಿತ್ರದಲ್ಲಿ ಆರ್ಯ ನಟಿಸಿದ್ದರು.
No Comment! Be the first one.