ಗುಂಡಿಗೆ ಗಟ್ಟಿ ಇರುವ ನಿರ್ಮಾಪಕರಿಂದ ಮಾತ್ರ ಇಂಥಾ ಸಿನಿಮಾಗೆ ಬಂಡವಾಳ ಹೂಡಲು ಸಾಧ್ಯ. ಅದನ್ನು ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಸಾಧ್ಯವಾಗಿಸಿರುವವರು ನಿಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ!
ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯ ಮುಂಚೆ ಮೂರು ಕೋಟಿ ರುಪಾಯಿಗಳಲ್ಲಿ ನಿರ್ಮಿಸಲು ಪ್ಲಾನು ಮಾಡಿದ್ದ ಸಿನಿಮಾ ಅವನೇ ಶ್ರೀಮನ್ನಾರಾಯಣ. ಆ ನಂತರ ಕಿರಿಕ್ ಪಾರ್ಟಿಯ ಗೆಲುವು ನಿರೀಕ್ಷೆ ಹೆಚ್ಚಿಸಿದೆ ಕಡೇಪಕ್ಷ ಎಂಟು ಕೋಟಿ ಆದರೂ ಖರ್ಚು ಮಾಡಬೇಕು ಅಂದುಕೊಂಡರು. ಸಿನಿಮಾ ಕೂಡಾ ಶುರುವಾಯಿತು. ಹಾಗೇ ಬಜೆಟ್ಟು ಹದಿನಾಲ್ಕು, ಇಪ್ಪತ್ನಾಲ್ಕು… ಹೀಗೆ ಏನಿಲ್ಲವೆಂದರೂ ಅಂದುಕೊಂಡಿದ್ದಕ್ಕಿಂತಾ ಹತ್ತು ಪಟ್ಟು ಜಾಸ್ತಿ ಖರ್ಚಾಗಿದೆ. ಮೂರು ಸೆಟ್ ಹಾಕಬೇಕು ಅಂದುಕೊಂಡಿದ್ದವರು ಹಡೆಗೆ ಹತ್ತೊಂಭತ್ತು ಸೆಟ್ಟುಗಳನ್ನು ನಿರ್ಮಿಸಿದ್ದರು. ಹೀಗೆ ಕನಸು ವಿಸ್ತಾರವಾಗುತ್ತಾ ಸಾಗಿ ಕಡೆಗೆ ಈಗ ಅದ್ಭುತವಾದ ಔಟ್ ಪುಟ್ ಹೊರಬಂದಿದೆ.
ಅವನೇ ಶ್ರೀಮನ್ನಾರಾಯಣ ಚಿತ್ರ ಡಿಸೆಂಬರ್ ನಲ್ಲಿ ತೆರೆಗೆ ಬರಲಿದ್ದು, ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗ ಐದೂ ಭಾಷೆಗಳಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ.
ಈ ಸಮಾರಂಭದಲ್ಲಿ ರಕ್ಷಿತ್ ಶೆಟ್ಟಿ ಕಳೆದ ಮೂರು ವರ್ಷಗಳ ಪರಿಶ್ರಮ, ಅದಕ್ಕೆ ಸಹಕರಿಸಿದ ನಿರ್ಮಾಪಕ ಪುಷ್ಕರ್ ಮತ್ತು ಶಂಕರ್, ನಿರ್ದೇಶಕ ಸಚಿನ್ ಮತ್ತು ಇಡೀ ಚಿತ್ರತಂಡದ ಕಷ್ಟವನ್ನು ನೆನೆದು ಕಣ್ಣೀರಿಟ್ಟರು. ದಕ್ಷಿಣ ಭಾರತದ ಎಲ್ಲ ಚಿತ್ರರಂಗದ ಪತ್ರಕರ್ತರು ಹಾಜರಿದ್ದ ಈ ಸಮಾರಂಭ ಕನ್ನಡದ ಮಟ್ಟಿಗೆ ಮತ್ತೊಂದು ಮೈಲಿಗಲ್ಲಾಗಿದ್ದು ಮಾತ್ರ ಸತ್ಯ.
ಕೆ.ಜಿ.ಎಫ್ ನಂತರ ಭಾರತೀಯ ಚಿತ್ರರಂಗದಲ್ಲಿ ಸೌಂಡು ಮಾಡುತ್ತಿರುವ ಕನ್ನಡ ಚಿತ್ರರಂಗ ಅವನೇ ಶ್ರೀಮನ್ನಾರಾಯಣನ ಮೂಲಕ ಮತ್ತೊಂದು ಹೆಜ್ಜೆ ಮುನ್ನಡೆದಿದೆ.
ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನ ಚಿತ್ರೀಕರಣಗೊಂಡ ಸಿನಿಮಾ ಆಗಿ ಕೂಡಾ ಅವನೇ ಶ್ರೀಮನ್ನಾರಾಯಣ ದಾಖಲೆ ನಿರ್ಮಿಸಿದೆ. ಸದ್ಯ ಬಿಡುಗಡೆಯಾಗಿರುವ ಟ್ರೇಲರು ಯಾವುದೇ ಹಾಲಿವುಡ್ ಸಿನಿಮಾಗೆ ಕಮ್ಮಿಯಿಲ್ಲದಂತೆ ಮೂಡಿಬಂದಿದೆ. ಈ ಟ್ರೇಲರು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಕನ್ನಡ ಮತ್ತು ಹಿಂದಿಯಲ್ಲಿ ಮಾತ್ರ ಸ್ವತಃ ರಕ್ಷಿತ್ ಡಬ್ಬಿಂಗ್ ಮಾಡಿದ್ದು ಉಳಿದ ಭಾಷೆಗಳಲ್ಲಿ ಬೇರೆ ಕಲಾವಿದರ ದನಿ ನೀಡಲಾಗಿದೆ. ಕರಮ್ ಚಾವ್ಲಾ ಕ್ಯಾಮೆರಾ ಕೈಚಳಕವಂತೂ ಈ ಚಿತ್ರದ ಹೈಲೇಟ್!
No Comment! Be the first one.