ಕನ್ನಡವೂ ಸೇರಿದಂತೆ ಭಾರತೀಯ ಚಿತ್ರರಂಗದ ಸ್ಟಾರ್ ನಟರು ತಮ್ಮ ಸಿನಿಮಾಗಳ ಬಗ್ಗೆ ಹೇಗೆ ಚಿಂತಿಸಲು ಸಧ್ಯ? ನಾಲ್ಕರಿಂದ ಐದು ಫೈಟು, ನಾಲ್ಕು ಬಗೆಯ ಸಾಂಗು, ಒಂದಿಷ್ಟು ಸೆಂಟಿಮೆಂಟು, ಬಿಲ್ಡಪ್ಪು, ಶಿಳ್ಳೆ ಬೀಳುವ ಡೈಲಾಗು… ಇವಿಷ್ಟಿದ್ದರೆ ಸಾಕು ಒಂದು ಹಿಟ್ ಸಿನಿಮಾ ಕೊಡಬಹುದು ಅಂತಾ ಥಿಂಕ್ ಮಾಡುತ್ತಾರೆ. ಆದರೆ ತಮಿಳಿನ ಕೆಲವು ಸ್ಟಾರ್ ಗಳು ಅದಕ್ಕೆ ಅಪವಾದದಂತಾ ನಿಲುವುಗಳನ್ನು ತಾಳುತ್ತಿರುತ್ತಾರೆ. ನಮ್ಮ ಕನ್ನಡದಲ್ಲಿ ಯಾವುದನ್ನು ಆರ್ಟ್ ಫಿಲಮ್ಮು ಅಂತಾ ಬ್ರಾಂಡ್ ಮಾಡಿಟ್ಟಿದ್ದಾರೋ, ಜನ ನೋಡದ ಸಿನಿಮಾಗಳು, ಅವಾರ್ಡು ಪಡೆಯಲಷ್ಟೇ ಸೀಮಿತವಾಗಿಸಿದ್ದಾರೋ ಅದೇ ಸಬ್ಜೆಕ್ಟುಗಳು ಅಲ್ಲಿ ಕಮರ್ಷಿಯಲ್ ಚಿತ್ರಗಳನ್ನಾಗಿ ರೂಪಿಸುತ್ತಾರೆ. ಅದನ್ನು ಜನ ಕಾತರದಿಂದ ಕಾದಿದ್ದು ನೋಡುತ್ತಾರೆ; ನೋಡಿ ಗೆಲ್ಲಿಸುತ್ತಾರೆ.

ರಜನೀಕಾಂತ್ ಅಳಿಯ ಧನುಷ್ ನಟನೆಯ ಸಿನಿಮಾವೊಂದು ರಿಲೀಸಾಗಿದೆ. ಹೆಸರು ಅಸುರನ್. ಧನುಷ್ ಪಕ್ಕಾ ಮಾಸ್ ಇಮೇಜಿರೋ ನಟ. ಅಸದರೆ ಈ ಸಿನಿಮದಲ್ಲಿ ಧನುಷ್ ತನ್ನ ಈ ವರೆಗಿನ ಎಲ್ಲಡ ಇಮೇಜ್ ಗಳನ್ನು ಪಕ್ಕಕ್ಕೆಸೆದು ಹಳ್ಳಿ ಹೈದನ ಪಾತ್ರದಲ್ಲಿ, ಅದೂ ವಯಸ್ಸಿಗೆ ಮೀರಿದ ಪಾತ್ರದಲ್ಲಿ ನಟಿಸಿ ಎಲ್ಲರನ್ನೂ ಅಚ್ಚರಿಗೀಡುಮಾಡಿದ್ದಾರೆ.

ಒಂದು ಹಳ್ಳಿ. ಅದರ ಸುತ್ತ ನೂರಾರು ಎಕರೆ ಸಿಮೆಂಟ್ ಉದ್ಯಮದವರ ಜಾಗ. ಆದರೆ ಅವರಿಗೆ ಬೇಕಿರೋದೇ ಈ ಮೂರು ಎಕರೆ ನೆಲ. ಈ ಜಾಗವನ್ನು ಪಡೆಯಲು ಏನೆಲ್ಲಾ ಮಾಡಬೇಕೋ ಅಷ್ಟೂ ತಂತ್ರಗಳನ್ನು ರೂಪಿಸುತ್ತಾರೆ. ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುತ್ತಾರೆ. ಅದನ್ನು ವಿರೋಧಿಸಲು ನಿಂತವರನ್ನು ಕತ್ತರಿಸಿಬಿಸಾಡುತ್ತಾರೆ. ಇಲ್ಲಿ ಜಾತಿ ಪ್ರಧಾನ ಪಾತ್ರ ವಹಿಸುತ್ತದೆ.

ಇದು ಬರೀ ತಮಿಳು ಚಿತ್ರವಲ್ಲ, ಭಾರತದ ಚಿತ್ರ. ಈ ನೆಲದ ಶೋಷಿತರ ದನಿಯಂತಾಗಿರುವ ಸಿನಿಮಾ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿವೆ. ಅಸುರನ್ ಸಿನಿಮಾದ ಬಗ್ಗೆ ನಾಡಿನ ವಿವಿಧ ಲೇಖಕರ ಅಭಿಪ್ರಾಯವನ್ನು ಸರಣಿಯಲ್ಲಿ ಪ್ರಕಟಿಸಲಾಗುವುದು…

CG ARUN

ನಿರ್ದೇಶಕ ಜೇಕಬ್ ವರ್ಗೀಸ್ ನಗುವಿನ ಸವಾರಿ!

Previous article

ಪ್ರೀತಿ – ದ್ವೇಷಗಳ ಭರಾಟೆ!

Next article

You may also like

Comments

Leave a reply

Your email address will not be published. Required fields are marked *