ರಾಮಚಂದ್ರ ಕಥೆ ಬರೆದು ನಿರ್ದೇಶನ ಮಾಡಿರುವ ಹೊಸ ಸಿನಿಮಾ ಆಟಕ್ಕುಂಟು ಲೆಕ್ಕಕ್ಕಿಲ್ಲ. ಈ ಚಿತ್ರವನ್ನು ವಸುಂಧರ ಕೃತಿಕ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣ ಮಾಡಲಾಗಿದೆ. ಎಲ್ಲ ಅಂದುಕೊಂಡಂತಾದರೆ ಸದ್ಯದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ. ಅದಕ್ಕೆ ಪೂರ್ವವೆಂಬಂತೆ ಇತ್ತೀಚಿಗಷ್ಟೇ ಚಿತ್ರದ ಮೊದಲ ಪ್ರತಿ ಸೆನ್ಸಾರ್ ವೀಕ್ಷಣೆಗೆ ತೆರಳಿ ಮಂಡಳಿಯ ಮೆಚ್ಚುಗೆಯ ಜತೆಗೆ ಯು/ಎ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ.
ಸೈಕಾಲಜಿಕಲ್, ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದಲ್ಲಿ ಸಂಚಾರಿ ವಿಜಯ್, ಮಯೂರಿ, ಶೋಭರಾಜ್, ದುನಿಯಾ ರಶ್ಮಿ, ಅಚ್ಯುತ್ ಕುಮಾರ್, ಭರತ್ ಸಾಗರ್, ಗೌತಮ್ ಮುಂತಾದವರು ನಟಿಸಿದ್ದಾರೆ. ಉಳಿದಂತೆ ಪರಮೇಶ್ ಸಿ. ಎಂ. ಛಾಯಾಗ್ರಹಣ, ನಾಬಿನ್ ಪೌಲ್ ಸಂಗೀತ, ಉಗ್ರಂ ಶ್ರೀಕಾಂತ್ ಸಂಕಲನ, ಮದನ್ ಹರಿಣಿ ನೃತ್ಯ, ಸೂಪರ್ ಜೋನ್ಸ್ ಸಾಹಸ ಈ ಚಿತ್ರಕ್ಕಿದೆ.