ಜೈಲರ್, ಬೋಳಾ ಶಂಕರ್ ಮೊದಲಾದ ಪರಭಾಷೆ ಸಿನಿಮಾಗಳು ಇದೇ ವಾರ ತೆರೆ ಮೇಲೆ ಲಗ್ಗೆ ಇಡುತ್ತಿವೆ. ಇದರ ನೇರ ಪರಿಣಾಮ ಬಿದ್ದಿರುವುದು ಕನ್ನಡ ಚಿತ್ರರಂಗದ ಮೇಲೆ. ಕೆಟ್ಟ ಸೋಲಿನಿಂದ ಸೊರಗಿದ್ದ ಸ್ಯಾಂಡಲ್ ವುಡ್ ನಲ್ಲಿ ಕಳೆದ ಎರಡು ಮೂರು ವಾರಗಳಿಂದ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ಕಾರಣ ಹಾಸ್ಟೆಲ್ ಹುಡುಗರು ಮತ್ತು ಕೌಸಲ್ಯಾ ಸುಪ್ರಜಾ ರಾಮ ಎಂಬ ಎರಡು ಸಿನಿಮಾಗಳು ಹುಟ್ಟುಹಾಕಿದ ಭರವಸೆ. ಹೆಚ್ಚೂಕಮ್ಮಿ ಕನ್ನಡ ಸಿನಿಮಾ ಉದ್ಯಮ ಬಾಗಿಲು ಮುಚ್ಚುತ್ತದಾ ಎನ್ನುವ ಹಂತ ತಲುಪಿತ್ತು. ಕಾಂತಾರಾ […]
3/5 ಶೀಲ ಹೆಸರಿನ ಚಿತ್ರವೊಂದು ಈ ವಾರ ತೆರೆ ಕಂಡಿದೆ. ಇದು ಏಕಕಾಲದಲ್ಲಿ ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಸಿನಿಮಾ. ರಾಗಿಣಿ ಇಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಮಲಯಾಳಂನಲ್ಲಿ ಕಳೆದವಾರವೇ ಈ ಚಿತ್ರ ಬಿಡುಗಡೆಗೊಂಡಿತ್ತು. ಈಗ ಕನ್ನಡದಲ್ಲೂ ತೆರೆಗೆ ಬಂದಿದೆ. ಗಂಡನನ್ನು ಕಳೆದುಕೊಂಡ ಹೆಣ್ಣುಮಗಳು. ಸಾಲ ಕೊಟ್ಟವರ ಹಿಂಸೆ ತಡೆಯಲಾರದೆ, ತನ್ನ ರೆಸಾರ್ಟನ್ನು ಮಾರಾಟ ಮಾಡಲು ಹೊರಟಿರುತ್ತಾಳೆ. ಇನ್ನೇನು ಬೆಳಗಾದರೆ ಆ ಪ್ರಾಪರ್ಟಿ ಮಾರಾಟವಾಗಿ, ಅದರ ಬಾಬ್ತು ಈಕೆಯ ಕೈಸೇರಬೇಕಿರುತ್ತದೆ. ಅಷ್ಟರಲ್ಲಿ ಒಂದಷ್ಟು ವಿಚಿತ್ರ ಘಟನೆಗಳು […]
ಇಡೀ ಭಾರತದಲ್ಲೇ ಬೆಂಗಳೂರು ಗಾರ್ಡನ್ ಸಿಟಿ ಎಂದು ಹೆಸರು ಪಡೆದಿದೆ. ಇದು ಟೆಕ್ನಾಲಜಿ ಹಬ್ ಎನ್ನುವ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಸ್ಟಾರ್ಟಪ್ ಮತ್ತು ತಂತ್ರಜ್ಞಾನ ಆಧಾರಿತ ಕಂಪನಿಗಳ ಪ್ರಧಾನ ಕಛೇರಿಗಳು ಇಲ್ಲಿ ತಲೆಯೆತ್ತಿವೆ. ಬೆಂಗಳೂರು ತನ್ನ ಕಾಸ್ಮೋಪಾಲಿಟನ್ ಸಂಸ್ಕೃತಿಯಿಂದಾಗಿ ಫ್ಯಾಷನ್ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಸದ್ಯ ಈ ಬೇಸಿಗೆಯಲ್ಲಿ ತಮ್ಮ ಶಾಪಿಂಗ್ ಮಾಡಲು ರಿಯಾಯಿತಿ ಮತ್ತು ಕಡಿಮೆ ಮೌಲ್ಯದ ವಸ್ತುಗಳನ್ನು ಹುಡುಕುತ್ತಿರುವವರಿಗೆ TV9 ಕನ್ನಡ ಆಯೋಜಿಸಿರುವ ಲೈಫ್ ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ಅತ್ಯುತ್ತಮ ವೇದಿಕೆಯಾಗಿದೆ. […]
ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದೇ ಆಗೋದು. ತಪ್ಪು ಯಾರೇ ಮಾಡಿದರೂ ಅದು ತಪ್ಪೇ… ಇರುವ ವ್ಯವಸ್ಥೆ ಬಳಸಿಕೊಂಡು, ಬೇರೊಬ್ಬರ ಮೇಲೆ ಸುಳ್ಳು ಆರೋಪ ಹೊರಿಸಿ ಬಚಾವಾಗಿಬಿಡ್ತೀನಿ ಅಂದುಕೊಂಡರೆ ಅದು ಅದು ಖಂಡಿತ ಆಗದ ಕೆಲಸ. ಯಾಕೆಂದರೆ ಭಾರತದ ಕಾನೂನು ಸರ್ವಶ್ರೇಷ್ಠವಾದದ್ದು. ಕಳೆದೊಂದು ವಾರದಿಂದ ʻಪ್ರಭುತ್ವʼ ಹೆಸರಿನ ಸಿನಿಮಾ ಕುರಿತಂತೆ ಸಾಕಷ್ಟು ವಿವಾದಗಳೆದ್ದಿವೆ. ನಿರ್ಮಾಪಕ ಮತ್ತು ಹೀರೋ ಒಂದು ಕಡೆ ನಿಂತು ಅದೇ ಚಿತ್ರದ ನಿರ್ದೇಶಕನ ಮೇಲೆ ಸಿಕ್ಕಸಿಕ್ಕ ಹಾಗೆ ಕಲ್ಲೆಸೆಯುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪಡಸಾಲೆಯಲ್ಲೇ ಕುಂತು, […]
ʻʻಅವೆಲ್ಲಾ ನೆನ್ನೆ ಮೊನ್ನೆ ಆದಂತೆ ಅನಿಸುತ್ತೆ… ಏನೆಲ್ಲಾ ಘಟಿಸಿಬಿಡ್ತು… ಇನ್ನೂ ಆ ದಿನಗಳು ಕಣ್ಣಲ್ಲೇ ಇವೆ…ʼʼ ಹೀಗೆ ಹಳೇದನ್ನು ನೆನಪು ಮಾಡಿಕೊಂಡು ಯಾರು ತಾನೆ ನಿಟ್ಟುಸಿರು ಬಿಡೋದಿಲ್ಲ ಹೇಳಿ. ಒಬ್ಬೊಬ್ಬರ ಬದುಕಿನ ಇತಿಹಾಸದ ಪುಟಗಳಲ್ಲಿ ಮುಚ್ಚಿಹೋದ ಪುಟಗಳನ್ನೆಲ್ಲಾ ತೆರೆದಿಟ್ಟಿರುವ ಚಿತ್ರ ನೋಡದ ಪುಟಗಳು. ಈಗೆಲ್ಲಾ ಮೊಬೈಲು, ಸೋಷಿಯಲ್ ಮೀಡಿಯಾಗಳಿವೆ. ಶಾಲೆ, ಕಾಲೇಜು ಬಿಟ್ಟ ನಂತರವೂ ಮಕ್ಕಳು ಸಂಪರ್ಕದಲ್ಲಿರುತ್ತಾರೆ. ತೊಂಭತ್ತರ ದಶಕದದಲ್ಲಿ ಸ್ಕೂಲು, ಕಾಲೇಜು ಓದಿದವರು ಕಳೆದುಕೊಂಡ ಸಹಪಾಠಿಗಳನ್ನು ಹುಡುಕುವ ಪ್ರಕ್ರಿಯೆಯನ್ನು ನಿರಂತರ ಚಾಲನೆಯಲ್ಲಿಟ್ಟಿರುತ್ತಾರೆ. ಅಚಾನಕ್ಕಾಗಿ ಎಲ್ಲರೂ ಭೇಟಿಯಾದಾಗ […]
ರಿಯಲ್ ಲೈಫ್ ಚಿತ್ರಗಳು ಹೆಚ್ಚು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ’ನೋಡದ ಪುಟಗಳು’ ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆಗೆ ಸಿದ್ದವಾಗಿದೆ. ’ಜೀವನಪೂರ್ತಿ ತಿರುವುಗಳು ಬರುತ್ತದೆ. ನಿನ್ನ ತಿರುವು ಬರುವ ತನಕ ಕಾಯಬೇಕು’ ಎಂದು ಇಂಗ್ಲೀಷ್ದಲ್ಲಿ ಅಡಿಬರಹವಿದೆ. ಬಿಡುಗಡೆಯಾಗಿರುವ ಟ್ರೇಲರ್ಗೆ ಸುಚೇಂದ್ರಪ್ರಸಾದ್ ಧ್ವನಿ ನೀಡಿರುವುದು ತೂಕ ಹೆಚ್ಚಿದೆ. ನವ ಪ್ರತಿಭೆ ಎಸ್.ವಸಂತ್ಕುಮಾರ್ ಸಿನಿಮಾಕ್ಕೆ ರಚನೆ,ನಿರ್ದೇಶನ ಹಾಗೂ ಸ್ವೀಟ್ ಅಂಡ್ ಸಾಲ್ಟ್ ಮೂವೀಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಮೂಲತ: ಟೆಕ್ಕಿಯಾಗಿರುವ ಇವರು ಬಣ್ಣದ ಲೋಕದ ಆಸೆಯಿಂದ ನಿರ್ದೇಶನದ ಕೋರ್ಸ್ನ್ನು […]
ಮದುವೆ ಅನ್ನೋದೇ ಹಾಗೆ. ಯಾರು ಆ ಬಗ್ಗೆ ಹೆಚ್ಚು ಕುತೂಹಲ ಹೊಂದಿರುತ್ತಾರೋ, ಅತಿಯಾದ ಆಸಕ್ತಿ ವಹಿಸುತ್ತಾರೋ ಅಂಥವರಿಗೇ ಅದು ಸುಲಭಕ್ಕೆ ಕೈಗೂಡೋದಿಲ್ಲ. ಇಲ್ಲೂ ಅಷ್ಟೇ ಹೀರೋ ವೆಂಕಿಗೆ ಮದುವೆಯಾಗಬೇಕು, ಮೊದಲ ರಾತ್ರಿಯನ್ನು ವೈಭೋಗದಿಂದ ನೆರವೇರಿಸಿಕೊಳ್ಳಬೇಕು ಅನ್ನೋದೇ ಬದುಕಿನ ಪರಮ ಗುರಿ. ಹೆಣ್ಣು ನೋಡಿ, ಎಲ್ಲಾ ಒಪ್ಪಿ ಇನ್ನೇನು ಗಟ್ಟಿ ಮೇಳದ ಸೌಂಡು ಕೇಳಿಸಬೇಕು ಅನ್ನುವಷ್ಟರಲ್ಲಿ ಸಂಬಂಧ ಮುರಿದು ಬೀಳುತ್ತಿರುತ್ತದೆ. ಅದಕ್ಕೆ ಏನು ಕಾರಣ ಅನ್ನೋದು ಕೂಡಾ ಒಂದು ಹಂತದಲ್ಲಿ ಪ್ರೇಕ್ಷಕರಿಗೆ ಮನವರಿಕೆಯಾಗುತ್ತದೆ. ಇದೇ ಹೊತ್ತಿನಲ್ಲಿ ಜಗತ್ತಿಗೇ ಕೊರೋನಾ […]
ಒಂದಕ್ಕೊಂದು ಸಂಬಂಧವಿಲ್ಲದ ನಾಲ್ಕಾರು ಕಿರು ಚಿತ್ರಗಳನ್ನು ಒಂದು ಕಡೆ ಜೋಡಿಸಿ ಗುಚ್ಚವಾಗಿಸಿ ಸಿನಿಮಾ ಮಾಡೋದು ಕನ್ನಡಕ್ಕೆ ತೀರಾ ಹೊಸದಲ್ಲ. ಈಗ ಅಂಥದ್ದೇ ಒಂದು ಪ್ರಯತ್ನ ʻಪೆಂಟಗನ್ʼ ಮೂಲಕ ನಡೆದಿದೆ. ಕಾಮಿಡಿ, ಕರಾಳತೆ, ಧರ್ಮ, ಕರ್ಮ, ಕಾಮ – ಈ ಎಲ್ಲ ವಿಚಾರಗಳನ್ನು ಒಂದೊಂದು ಭಿನ್ನ ಕತೆಗಳನ್ನಾಗಿಸಿ ಚೆಂದಗೆ ಕಟ್ಟಿರುವ ಚಿತ್ರ ಪೆಂಟಗನ್. ʻಸಾವುʼ ಪ್ರತಿಯೊಂದೂ ಕಿರುಚಿತ್ರದ ಕೇಂದ್ರ ಬಿಂದು. ಕಾಗೆ ಅದರ ರೂಪಕ! ಆತ್ಮಹತ್ಯೆ ಮಾಡಿಕೊಳ್ಳಲು ಹೆದರಿ ತನ್ನನ್ನು ಕೊಲ್ಲಿಸಿಕೊಂಡು ತಾನೇ ಸುಫಾರಿ ಕೊಡುವ ಹುಡುಗನ ಕಥೆಯ […]
ರವೀಂದ್ರ ತುಂಬರಮನೆ-ರಮೇಶ್ ಬೇಗಾರ್ ಸೃಷ್ಟಿಸಿದ ಜಲಪಾತ ಕನ್ನಡಕ್ಕೊಂದು ಪರಿಸರ ಕಾಳಜಿ ಚಿತ್ರ, ರಿಂದ. ನಟ ಪ್ರಮೋದ್ ಶೆಟ್ಟಿ ಅವರಿಗಾಗಿ ವೈಶಂಪಾಯನ ತೀರ ಚಿತ್ರವನ್ನು ನಿರ್ದೇಶಿಸಿದ್ದ ರಮೇಶ್ ಬೇಗಾರ್ ಸದ್ಯ ʻಜಲಪಾತʼವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತಿನ ಎಲೆಕ್ಟ್ರಾನಿಕ್ ಯುಗದಲ್ಲಿ ಮಾನಸಿಕ ಒತ್ತಡ ಹೆಚ್ಚಿದ್ದು ಈ ಒತ್ತಡಕ್ಕೆ ಪರಿಹಾರ ನಿಸರ್ಗದಲ್ಲಿ ಮಾತ್ರ ಸಾಧ್ಯ. ಪ್ರಕೃತಿ, ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದ ಕುರಿತಾದ ಜಲಪಾತದಲ್ಲಿದೆ. ೪೦ ವರ್ಷಗಳ ಹಿಂದೆ ಭಾರತದ ಆಹಾರ ಪದ್ದತಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಆರೋಗ್ಯಕರವಾಗಿತ್ತು, […]
ಈ ಬಾರಿಯ ವಿಧಾನಸಭಾ ಚುನಾವಣೆಗೆ ಸುದೀಪ್ ಅವರನ್ನು ರಾಜ್ಯಾದ್ಯಂತ ಸ್ಟಾರ್ ಪ್ರಾಚಾರಕನನ್ನಾಗಿಸುವ ಪ್ಲಾನ್ ಬಿಜೆಪಿಯದ್ದು. ಎಲ್ಲವೂ ನಾಳೆ ಮಧ್ಯಾಹ್ನ1.30ಕ್ಕೆ ನಡೆಯಲಿರುವ ಪ್ರೆಸ್ ಮೀಟ್ ನಲ್ಲಿ ಬಯಲಾಗಲಿದೆ ಕಿಚ್ಚ ಸುದೀಪ ರಾಜಕಾರಣಕ್ಕೆ ಬರ್ತಾರಂತೆ… ಕಳೆದ ಹದಿನೈದು ವರ್ಷಗಳಲ್ಲಿ ಪ್ರತೀ ಸಲ ಚುನಾವಣೆ ಬಂದಾಗಲೂ ಇಂಥದ್ದೊಂದು ಸುದ್ದಿ ಸರಸರನೆ ಹರಿದಾಡುತ್ತದೆ. ಅದು ಹಾಗೇ ತಣ್ಣಗಾಗುತ್ತದೆ. ಸುದೀಪ್ ಅವರನ್ನು ರಾಜಕೀಯದ ಪಡಸಾಲೆಗೆ ಎಳೆದುತರಲು ಎಲ್ಲ ಪ್ರಮುಖ ಪಕ್ಷಗಳೂ ಕರಸತ್ತು ನಡೆಸಿವೆ ಅನ್ನೋದಂತೂ ನಿಜ. ಆದರೆ ಸುದೀಪ್ ಯಾವತ್ತೂ ಅಧಿಕೃತವಾಗಿ ಈ ಬಗ್ಗೆ […]