ಕನ್ನಡದ ಪ್ರೇಕ್ಷಕರು ಯಾವ ಕಾಲಕ್ಕೂ ಮರೆಯದ ಖಳನಟ ಸುಂದರ್ ಕೃಷ್ಣ ಅರಸ್. ಅವರ ಪುತ್ರ ನಾಗೇಂದ್ರ ಅರಸ್ ಸಂಕಲನಕಾರರಾಗಿ ಸಕ್ರಿಯರಾಗಿದ್ದುಕೊಂಡೇ ನಿರ್ದೇಶಕರಾಗಿಯೂ ಛಾಪು ಮೂಡಿಸಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿರುವ ನಾಗೇಂದ್ರ ಅರಸ್ ಮೇ ಫಸ್ಟ್ ಚಿತ್ರದ ನಂತರ ಅದೇ ಜೆಕೆ ನಾಯಕನಾಗಿರೋ ವಾರೆಂಟ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗಷ್ಟೇ ಬಿಡುಗಡೆಯಾಗಿರೋ ಪ್ರೋಮೋ ಮೂಲಕ ಈ ಚಿತ್ರ ಪ್ರೇಕ್ಷಕರು ಇದರ ಬಗ್ಗೆ ಮಾತಾಡುವಂತೆ ಮಾಡಿದೆ. ಇದುವರೆಗೂ ವಿಭಿನ್ನ ಕಥಾನಕಗಳ ಮೂಲಕವೇ ಕನ್ನಡದ ಮಹತ್ವದ ನಿರ್ದೇಶಕರಲ್ಲೊಬ್ಬರಾಗಿ ಸ್ಥಾನ ಪಡೆದಿರುವ […]
ಕಿಚ್ಚಾ ಸುದೀಪ್ ಕನ್ನಡದಲ್ಲಿ ಏಕ ಕಾಲದಲ್ಲಿಯೇ ಒಂದಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಅವರು ತೆಲುಗು ಚಿತ್ರ ಸೈರಾ ದಲ್ಲಿ ಚಿರಂಜೀವಿಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಇದೀಗ ಆ ಚಿತ್ರದ ಒಂದು ಹಂತದ ಚಿತ್ರೀಕರಣವನ್ನೂ ಸುದೀಪ್ ಮುಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿಯೇ ಮಹಾ ಅವಘಡವೊಂದರಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ! ಸೈರಾ ಸ್ವಾತಂತ್ರ್ಯ ಯೋಧ ನರಸಿಂಹರೆಡ್ಡಿಯ ಜೀವನಗಾಥೆಯ ಚಿತ್ರ. ಈ ಚಿತ್ರದಲ್ಲಿ ಚಿರಂಜೀವಿ ನರಸಿಂಹ ರೆಡ್ಡಿಯಾಗಿ ನಟಿಸಿದರೆ, ಕಿಚ್ಚಾ ಸುದೀಪ್ ಸೇರಿದಂತೆ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರನೇಕರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. […]
ಯೋಗರಾಜ ಭಟ್ಟರ ದಯೆಯಿಂದ ನಟನಾಗಿ ರೂಪುಗೊಂಡು ನೆಲೆ ನಿಲ್ಲಲಾಗದೆ ಒದ್ದಾಡುತ್ತಿರೋ ದಿಗಂತ್ಗೆ ದೂದ್ಪೇಡ ಅಂತೊಂದು ಬಿರುದು ಸಿಕ್ಕಿದ್ದೇ ಗಟ್ಟಿ. ಹೈಟು, ಪರ್ಸನಾಲಿಟಿ ಮತ್ತು ಒಂದು ರೇಂಜಿಗಿರೋ ನಟನೆ… ಇಷ್ಟಿದ್ದರೂ ಬರಖತ್ತಾಗದೇ ಮಂಡೆಬಿಸಿ ಮಾಡಿಕೊಂಡಿರೋ ಈ ಮಲೆನಾಡ ಹುಡುಗ ಇದೀಗ ಫಾರ್ಚುನರ್ ಅಂತೊಂದು ಚಿತ್ರದ ಮೂಲಕ ಮತ್ತೆ ಪ್ರತ್ಯಕ್ಷವಾಗಿದ್ದಾನೆ. ಸಿನಿಮಾವೂ ಸೇರಿದಂತೆ ಇಡೀ ಜಗತ್ತು ಯಾವ ವೇಗದಲ್ಲಾದರೂ ಚಲಿಸಲಿ, ತನಗೆ ಮಾತ್ರ ಕಣ್ತುಂಬ ನಿದ್ರೆಯಾದರೆ ಸಾಕೆಂಬುದನ್ನೇ ಸಿದ್ಧಾಂತವಾಗಿಸಿಕೊಂಡಿರೋ ದಿಗಂತ ಈ ಚಿತ್ರದ ಮೂಲಕವಾದರೂ ಗೆಲ್ಲಬಹುದಾ? ಹೀಗೊಂದು ಲೆಕ್ಕಾಚಾರ ಪ್ರೇಕ್ಷಕ […]
ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಆದ ಸುದ್ದಿ ಹರಡುತ್ತಲೇ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದಲೂ ದೂರ ಸರಿಯುತ್ತಿದ್ದಾಳಾ? ಎಂಬ ಪ್ರಶ್ನೆ ಹುಟ್ಟಲು ಕಾರಣವಾಗಿರೋದು ವೃತ್ರ ಚಿತ್ರ. ರಕ್ಷಿತ್ ಬೆಟಾಲಿಯನ್ನಿನ ಸದಸ್ಯರಾಗಿರೋ ಗೌತಮ್ ನಿರ್ದೇಶನದ ವೃತ್ರ ಚಿತ್ರಕ್ಕೆ ರಶ್ಮಿಕಾ ನಾಯಕಿ ಎಂಬುದಾಗಿ ಅಧಿಕೃತವಾಗಿಯೇ ಘೋಷಣೆಯಾಗಿತ್ತು. ಆದರೆ ಈ ಚಿತ್ರದಲ್ಲಿ ನಟಿಸೋದಿಲ್ಲ ಅಂತ ರಶ್ಮಿಕಾ ಹೇಳಿದ ಬೆನ್ನಿಗೇ ಹೊಸಾ ಹುಡುಗಿ ನಿತ್ಯಾ ಆ ಜಾಗಕ್ಕೆ ಆಗಮಿಸಿದ್ದಾಳೆ. ನಿರ್ದೇಶಕ ಗೌತಮ್ ರಕ್ಷಿತ್ ಕ್ಯಾಂಪಿನ ಹುಡುಗ ಎಂಬ ಕಾರಣದಿಂದಲೇ ವೃತ್ರ ಚಿತ್ರದಿಂದ ರಶ್ಮಿಕಾ […]
ದುನಿಯಾ ವಿಜಯ್ ಪಾನಿಪುರಿ ಕಿಟ್ಟಿ ತಮ್ಮನ ಮೇಲೆ ಹಲ್ಲೆ ಮಾಡಿ ಜೈಲುಪಾಲಾಗಿದ್ದಾರೆ. ದೃಷ್ಯ ಮಾಧ್ಯಮಗಳಂತೂ ಬಿಟ್ಟೂ ಬಿಡದಂತೆ ವಿಜಿಗೆ ಜೈಲು ಖಾಯಂ ಎಂಬಂಥಾ ಸುದ್ದಿ ಹರಡುತ್ತಿವೆ. ಇದೇ ಹೊತ್ತಿನಲ್ಲಿ ಮಾಧ್ಯಮಗಳಲ್ಲಿ ಜಾಹೀರಾಗುತ್ತಾ ಬಂದಿರೋ ಏಕಮುಖವಾದ ಹಲ್ಲೆ ಪ್ರಕರಣಕ್ಕೆ ಮತ್ತೊಂದು ಮುಖವೂ ಇದ್ದೀತೆಂಬುದರ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಅಂಥಾ ಚರ್ಚೆಗಳೇ ಒರಟ, ರಾಕ್ಷಸ ಎಂಬರ್ಥದಲ್ಲಿ ಮಾಧ್ಯಮಗಳು ಅನಾವರಣಗೊಳಿಸುತ್ತಿರುವ ವಿಜಯ್ ಅವರ ಮನುಷ್ಯತ್ವದ ಮುಖವೊಂದನ್ನು ಅನಾವರಣಗೊಳಿಸುತ್ತಿವೆ! ವಿಜಯ್ ಪಾನಿಪುರಿ ಕಿಟ್ಟಿಯ ಮೃದು ಸ್ವಭಾವದ ತಮ್ಮ ಮಾರುತಿಗೆ ಸಾಯ ಬಿಡಿದಿದ್ದಾರೆಂಬುದು ಈಗಿರೋ ಆರೋಪ. […]
ಇವರು ಈ ವರೆಗೆ ನಿರ್ದೇಶನ ಮಾಡಿರುವ ಮೂರೂ ಚಿತ್ರಗಳೂ ಮ್ಯೂಸಿಕಲ್ ಹಿಟ್ ಲಿಸ್ಟಿಗೆ ಸೇರಿಕೊಂಡಿವೆ. ಒಂದು ಚಿತ್ರದಿಂದ ಮತ್ತೊಂದಕ್ಕೆ ಭಿನ್ನವಾದ ಆಲೋಚನಾ ಕ್ರಮ, ನವಿರಾದ ಕಥಾ ಹಂದರದ ಮೂಲಕವೇ ನಿರ್ದೇಶಕರಾಗಿ ನೆಲೆ ಕಂಡುಕೊಂಕೊಂಡಿದ್ದ ಅವರೀಗ ಅಖಂಡ ಮೂರು ವರ್ಷಗಳ ನಂತರ ಮತ್ತೆ ಬಂದಿದ್ದಾರೆ. ಹೀಗೊಂದು ತಣ್ಣಗಿನ ಅಬ್ಬರದ ಮೂಲಕ, ಚೆಂದದ ಹಾಡುಗಳ ಹಿಮ್ಮೇಳದೊಂದಿಗೆ ಯಾರಿಗೆ ಯಾರುಂಟು ಚಿತ್ರದ ಮೂಲಕ ಮರಳಿರುವವರು ನಿರ್ದೇಶಕ ಕಿರಣ್ ಗೋವಿ! ಪಯಣ ಕಿರಣ್ ಗೋವಿ ನಿರ್ದೇಶನದ ಮೊದಲ ಚಿತ್ರ. ಗೆಲುವು ಕಂಡಿದ್ದ ಈ […]
ಜಾನಪದ ಹಾಡುಗಳನ್ನು ವೆಸ್ಟರ್ನ್ ಶೈಲಿಯಲ್ಲಿ ಹಾಡೋ ಮೂಲಕ ವಿಶ್ವ ವಿಖ್ಯಾತಗೊಳಿಸಿರುವವರು ರಘು ಧೀಕ್ಷಿತ್. ಅವರ ಪವರ್ಫುಲ್ ವಾಯ್ಸ್ಗೆ ಬರೀ ಕರ್ನಾಟಕ ಮಾತ್ರವಲ್ಲದೆ ಬಾಲಿವುಡ್ ಮಟ್ಟದಲ್ಲಿಯೂ ಅಭಿಮಾನಿಗಳಿದ್ದಾರೆ. ಇಂಥಾ ರಘು ಧೀಕ್ಷಿತ್ ಆಗಾಗ ಆಯೋಜಿಸೋ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮಗಳಿಗೊಂದು ಬೇರೆಯದ್ದೇ ಆಕರ್ಷಣೆ ಇದೆ. ಅಂಥಾದ್ದೇ ಒಂದು ಮಾಂತ್ರಿಕ ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿದೆ ಮತ್ತು ಅದಕ್ಕೆ ಸನ್ನಿ ಲೊಯೋನ್ ಆಗಮಿಸಲಿದ್ದಾಳೆ! ರಘು ಧೀಕ್ಷಿತ್ ಮತ್ತು ತಂಡ ಇದೇ ನವೆಂಬರ್ ಮೂರನೇ ತಾರೀಕಿನಂದು ಫ್ಯೂಷನ್ ನೈಟ್ಸ್ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಮಾನ್ಯತಾ […]
ಕಿಚ್ಚಾ ಸುದೀಪ್ ಕನ್ನಡದಾಚೆಗೂ ಕೀರ್ತಿ ಪತಾಕೆ ಹಾರಿಸಿರುವ ಪ್ರತಿಭಾವಂತ ನಟ. ನಿರ್ದೇಶನ, ಗಾಯನ ಸೇರಿದಂತೆ ಅವರ ಪ್ರತಿಭೆಗೆ ನಾನಾ ಮುಖಗಳಿವೆ. ಆದರೆ ಅವರೊಳಗಿನ ಬರಹಗಾರನನ್ನು ಶೋಧಿಸಿದ ಕೀರ್ತಿ ಹಿರಿಯ ಸಿನಿಮಾ ಪತ್ರಕರ್ತ ಸದಾಶಿವ ಶೆಣೈ ಅವರಿಗೇ ಸಲ್ಲಬೇಕು. ಸದಾಶಿವ ಶೆಣೈ ಅವರು ವಿಷ್ಣುವರ್ಧನ್ ಅವರ ಬಗ್ಗೆ ಬರೆದಿರುವ `ಮುಗಿಯದಿರಲಿ ಬಂಧನ ಎಂಬ ಕೃತಿಗೆ ಸುದೀಪ್ ಅವರಿಂದ ಬೆನ್ನುಡಿ ಬರೆಸಿದ ರಸವತ್ತಾದ ಅನುಭವವನ್ನು ಹಂಚಿಕೊಂಡಿದ್ದಾರೆ… ಇದು ವ್ಯಕ್ತಿ ಚಿತ್ರಣ ಅಲ್ಲ. ವ್ಯಕ್ತಿ ಗೌರವದ ಸಣ್ಣ ಟಿಪ್ಪಣಿ. ನಾನು ನನ್ನ […]
ಅಯೋಗ್ಯ ಚಿತ್ರದ ಭರ್ಜರಿ ಗೆಲುವಿನ ನಂತರ ರಚಿತಾ ರಾಮ್ ಅದೃಷ್ಟ ಮೆಲ್ಲಗೆ ಖುಲಾಯಿಸಿಕೊಳ್ಳುತ್ತಿದೆ. ಈಕೆ ನಟಿಸಿದ ಚಿತ್ರಗಳೂ ಸಕ್ಸಸ್ ಕಾಣುತ್ತವೆಂಬ ನಂಬಿಕೆಯೂ ಟಿಸಿಲೊಡೆಯುತ್ತಿದೆ. ಆರಂಭದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸೋ ಅದೃಷ್ಟ ಗಿಟ್ಟಿಸಿಕೊಂಡು ಅಚ್ಚರಿ ಹುಟ್ಟಿಸಿದ್ದ ರಚಿತಾ ಇದೀಗ ಮೊದಲ ಸಲ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ನಟಿಸಲಿರೋ ಸುದ್ದಿಯೊಂದು ಹೊರ ಬಿದ್ದಿದೆ! ಇದೀಗ ಶಿವರಾಜ್ ಕುಮಾರ್ ರುಸ್ತುಂ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿವೇಕ್ ಓಬೇರಾಯ್ ನಟಿಸುತ್ತಿರೋ ವಿಚಾರ ಗೊತ್ತೇ ಇದೆ. […]
ಅಜೇಯ್ ರಾವ್ ಜೊತೆ ಧೈರ್ಯಂ ಚಿತ್ರದಲ್ಲಿ ನಟಿಸಿದ ನಂತರ ನಾಗಕನ್ನಿಕೆ ಅದಿತಿ ಪ್ರಭುದೇವ ಚಿತ್ರರಂಗದಲ್ಲಿಯೇ ಬೀಡು ಬಿಟ್ಟಿದ್ದಾರೆ. ಸಾಲು ಸಾಲಾಗಿ ಅವಕಾಶಗಳನ್ನು ಪಡೆದುಕೊಳ್ಳುತ್ತಿರೋ ಅದಿತಿ ಇದೀಗ ನೀರ್ದೋಸೆ ಟೀಮಿನ ಹೊಸಾ ಚಿತ್ರಕ್ಕೂ ನಾಯಕಿಯಾಗಿ ಬರೋ ಸಾಧ್ಯತೆಗಳೇ ಹೆಚ್ಚಿವೆ. ನೀರ್ದೋಸೆ ಮೂಲಕ ಗೆವುವೊಂದನ್ನು ಪಡೆದುಕೊಂಡಿದ್ದ ವಿಜಯಪ್ರಸಾದ್ ಮುಂದಿನ ಚಿತ್ರ ಯಾವುದೆಂಬುದರ ಬಗ್ಗೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇತ್ತು. ಅದೇಕೋ ಅನೌನ್ಸ್ ಆದ ಚಿತ್ರವೂ ಪೋಸ್ಟ್ ಪೋನ್ ಆಗಿತ್ತು. ಆದರೀಗ ವಿಜಯ ಪ್ರಸಾದ್ ಮತ್ತೆ ನವರಸ ನಾಯಕ ಜಗ್ಗೇಶ್ ಅವರ […]