ಇನ್ನೇನು ಬಿಡುಗಡೆಗೆ ಸಂಪೂರ್ಣ ತಯಾರಿ ಮುಗಿಸಿಕೊಂಡು ನಿಂತಿರೋ ಚಿತ್ರ ಕರ್ಷಣಂ. ಪ್ರತೀ ಚಿತ್ರದ ಹಿಂದೆಯೂ ಒಂದೊಂದು ಸಾಹಸಗಾಥೆಯಿರುತ್ತೆ. ಏನೇ ಬಂದರೂ ಗುರಿ ಮುಟ್ಟುವ ಛಲದ ಕಹಾನಿಯೂ ಇರುತ್ತೆ. ಅಷ್ಟಿಲ್ಲದೇ ಹೋದರೆ ಒಂದು ಚಿತ್ರ ನಿರ್ಮಾಣವಾಗೋದಿಲ್ಲ. ನಿರ್ಮಾಣವಾದರೂ ಪ್ರೇಕ್ಷಕರನ್ನು ತಟ್ಟೋದಿಲ್ಲ. ಕರ್ಷಣಂ ಚಿತ್ರವನ್ನು ಸ್ವತಃ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರೋ ಧನಂಜಯ್ ಅತ್ರೆ ಅವರದ್ದೂ ಕೂಡಾ ಪಕ್ಕಾ ಛಲದ ಹಾದಿ! ಈವತ್ತಿಗೆ ಕಿರುತೆರೆಯ ಖ್ಯಾತ ನಿರ್ದೇಶಕ ಶರವಣ ನಿರ್ದೇಶಿಸಿರುವ ಕರ್ಷಣಂ ಚಿತ್ರ ಟ್ರೈಲರ್, ಹಾಡು ಮುಂತಾದವುಗಳ ಮೂಲಕ ಜನ […]
ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಭಾರೀ ಸದ್ದು ಮಾಡಿದ್ದೀಗ ಇತಿಹಾಸ. ಈ ಚಿತ್ರ ಬಾಲಿವುಡ್ಗೆ ರೀಮೇಕ್ ಆಗಲು ರೆಡಿಯಾಗೋ ಮೂಲಕ ಮತ್ತೆ ಸುದ್ದಿಯಲ್ಲಿದೆ. ಇದೀಗ ಕನ್ನಡ ಕಿರಿಕ್ ಪಾರ್ಟಿಯ ಹಿಂದಿ ರೀಮೇಕ್ನಲ್ಲಿ ಯಾರ್ಯಾರು ಯಾವ ಪಾತ್ರಗಳನ್ನು ಮಾಡಲಿದ್ದಾರೆಂಬ ಬಗ್ಗೆ ಕನ್ನಡದ ಪ್ರೇಕ್ಷಕರೆಲ್ಲ ಕುತೂಹಲಗೊಂಡಿದ್ದಾರೆ. ಈಗಾಗಲೇ ರಕ್ಷಿತ್ ಶೆಟ್ಟಿ ಪಾತ್ರವನ್ನು ಯಾರು ಮಾಡುತ್ತಿದ್ದಾರೆಂಬ ವಿಚಾರ ಜಾಹೀರಾಗಿದೆ. ಕಾರ್ತಿಕ್ ಆರ್ಯನ್ ಆ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಕನ್ನಡದ ಕಿರಿಕ್ ಪಾರ್ಟಿಯಲ್ಲಿ ರಶ್ಮಿಕಾ […]
ದುನಿಯಾ ಚಿತ್ರದಲ್ಲಿ ಸಹಜವಾದ ಫೈಟ್ ಸೀನುಗಳ ಮೂಲಕವೇ ಸಾಹಸ ನಿರ್ದೇಶಕರಾಗಿ ಹೆಸರುವಾಸಿಯಾದವರು ಡಿಫರೆಂಟ್ ಡ್ಯಾನಿ. ಆ ಚಿತ್ರದ ಮಹಾ ಗೆಲುವಿನ ಭಾಗವಾಗಿದ್ದರೂ ಅದೇ ಚಿತ್ರದ ಸಂಭ್ರಮದಲ್ಲಿ ಅವಮಾನಿತರಾಗಿ ನಿಂತವರು, ಅದನ್ನೇ ಕೆಂಡದಂತೆ ಎದೆಯಲ್ಲಿಟ್ಟುಕೊಂಡು ಮತ್ತಷ್ಟು ಖ್ಯಾತಿ ಗಳಿಸಿಕೊಂಡವರು ಡ್ಯಾನಿ. ಕನ್ನಡ ಮಾತ್ರವಲ್ಲದೆ ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ ಬ್ಯುಸಿಯಾಗಿರೋ ಅವರ ಬದುಕೂ ಒಂದು ಸಾಹಸವೇ! ದಶಕಗಳಷ್ಟು ಹಿಂದೆ ಅಂದರೆ ಸರಿಸುಮಾರು ಇಪ್ಪತ್ತೇಳು ವರ್ಷಗಳ ಹಿಂದೆ ಅಚಾನಕ್ಕಾಗಿ ಆ ಹುಡುಗ ಪ್ರೀಮಿಯರ್ ಸ್ಟುಡಿಯೋದತ್ತ ಸುಳಿಯುತ್ತಾನೆ. ಅಲ್ಲಿ ಕುಮಾರ್ ಬಂಗಾರಪ್ಪ […]
ಗೌರಿ ಲಂಕೇಶರದ್ದು ಭಾವುಕ ಮನಸು. ಎಲ್ಲರೊಂದಿಗೂ ಬೆರೆಯುವ ಸಾದಾ ಸೀದಾ ವ್ಯಕ್ತಿತ್ವ. ಬಹುಶಃ ಇಂಥಾ ತಾಯ್ತನ ಇಲ್ಲದೇ ಯಾರದ್ದೋ ಸಂಕಷ್ಟ, ಕಣ್ಣ ಹನಿಗಳನ್ನು ನಮ್ಮದೆಂದೇ ಭಾವಿಸಲು ಸಾಧ್ಯವಿಲ್ಲ. ಗೌರಿ ಲಂಕೇಶ್ ಬರೀ ಹಾಗೆ ಭಾವಿಸಿ ಎಸಿ ರೂಮಲ್ಲಿ ಕೂತು ಮೈಮರೆಯಲಿಲ್ಲ. ಅಂಥವರ ಪರವಾಗಿ ಹೋರಾಡಿದರು. ಇವತ್ತಿಗೆ ಒಂದು ವರ್ಷಕ್ಕೆ ಸರಿಯಾಗಿ ಜೀವಪರ ಕಾಳಜಿ ಹೊಂದಿರುವವರೆಲ್ಲಾ ಆಘಾತಗೊಂಡಿದ್ದರು. ಪತ್ರಕರ್ತೆಯಾಗಿ, ಹೋರಾಟಗಾರ್ತಿಯಾಗಿ ಸದಾ ಪಾದರಸದಂತೆ ಕ್ರಿಯಾಶೀಲವಾಗಿದ್ದ ಗೌರಿ ಲಂಕೇಶ್ ಹತ್ಯೆ ದೇಶ ವಿದೇಶಗಳಲ್ಲೂ ಸದ್ದು ಮಾಡಿತ್ತು. ಈ ಹತ್ಯೆಯ ಹಿಂದೆ […]
ರಾಹುಲ್ ಐನಾಪುರ ನಟಿಸಿ ನಿರ್ಮಾಣ ಮಾಡಿರುವ ತ್ರಾಟಕ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ರಾಹುಲ್ ನಟನೆ ನೋಡಿದವರೆಲ್ಲ ಕನ್ನಡಕ್ಕೊಬ್ಬ ಖಡಕ್ ಹೀರೋನ ಆಗಮನವಾಗಿದೆ ಅಂತ ಅಭಿಪ್ರಾಯ ಪಡುತ್ತಿದ್ದಾರೆ. ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ s ಪಾದಾರ್ಪಣೆ ಮಾಡಿದ್ದ, ಈಗ ತ್ರಾಟಕನ ಜೊತೆಗೆ ಕಾಮಿಡಿ ಪಾತ್ರವೊಂದರ ಮೂಲಕ ನಂದಗೋಪಾಲ್ ಎಂ.ಕೆ. ಎಂಬ ನವಪ್ರತಿಭೆಯೊಂದು ಮತ್ತೆ ಎಂಟ್ರಿ ಕೊಟ್ಟಿದೆ! ತ್ರಾಟಕ ಚಿತ್ರದಲ್ಲಿನ ಕಾಮಿಡಿ ಪಾತ್ರವನ್ನು ಎಲ್ಲರ ಗಮನ ಸೆಳೆಯುವಂತೆ ನಟಿಸಿರುವ ನಂದ […]
ಟಿವಿ 9 ವಾಹಿನಿಯಲ್ಲಿ ಸ್ಫುಟವಾದ ಕನ್ನಡದ ಮೂಲಕವೇ ಮನೆ ಮಾತಾದವರು ಶೀತಲ್ ಶೆಟ್ಟಿ. ನಿರೂಪಕಿಯಾಗಿ ಖ್ಯಾತಿ ಉತ್ತುಂಗದಲ್ಲಿರುವಾಗಲೇ ಕೆಲಸ ಬಿಟ್ಟು ನಟನೆಯತ್ತ ಹೊರಳಿಕೊಂಡಿದ್ದ ಅವರೀಗ ಪೂರ್ಣಪ್ರಮಾಣದ ನಾಯಕಿಯಾಗಿ ಹೊರ ಹೊಮ್ಮಿದ್ದಾರೆ. ರಾಕೇಶ್ ನಿರ್ದೇಶನದ ಪತಿಬೇಕು ಡಾಟ್ ಕಾಮ್ ಚಿತ್ರದಲ್ಲಿ ಅವರೇ ನಾಯಕಿ ಕಮ್ ನಾಯಕ. ಆದರೆ ತಾನು ಈ ಚಿತ್ರದ ಮೂಲಕ ನಾಯಕಿಯೂ ಆಗಿಲ್ಲ, ಅಂಥಾ ಉದ್ದೇಶವಿಟ್ಟುಕೊಂಡೂ ತಾನು ಬಂದಿಲ್ಲ ಅನ್ನುವ ಶೀತಲ್ ಶೆಟ್ಟಿಯವರ ದೃಷ್ಟಿಯಲ್ಲಿ ಈ ಚಿತ್ರದ ಭಾಗ್ಯ ಎಂಬ ಕ್ಯಾರೆಕ್ಟರೇ ನಿಜವಾದ ನಾಯಕಿ. ಆ […]
‘ಮೇಲೊಬ್ಬ ಮಾಯಾವಿ?’ ಅನ್ನುವ ಕುತೂಹಲ ಮೂಡಿಸುವ ಟೈಟಲ್ ಇಟ್ಟುಕೊಂಡು ಚಿತ್ರೀಕರಣಕ್ಕೆ ತೊಡಗಿದ್ದ ಚಿತ್ರತಂಡ ಇದೀಗ ನಲ್ವತ್ತೆರೆಡು ದಿನಗಳ ಚಿತ್ರೀಕರಣ ಮುಗಿಸಿ, ಪೋಸ್ಟ್ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಒಂದೂವರೆ ದಶಕಗಳಿಂದ ಪತ್ರಕರ್ತರಾಗಿ ಗುರುತಿಸಿಕೊಂಡಿರುವ ಕರಾವಳಿ ಮೂಲದ ರಂಗಪ್ರತಿಭೆ ನವೀನ್ಕೃಷ್ಣ.ಬಿ ಚಿತ್ರದ ನಿರ್ದೇಶಕರು. ಕರಾವಳಿ ಮಂದಿಯ ನಿದ್ದೆಗೆಡಿಸಿದ್ದ ಮಾಫಿಯಾ ಒಂದರ ಎಳೆ ಹೊಂದಿರುವ ‘ಮೆಲೊಬ್ಬ ಮಾಯಾವಿ?’ ಚಿತ್ರ ರೊಮ್ಯಾಂಟಿಂಕ್ ಸಸ್ಪೆನ್ಸ್ ಜಾನರ್ಗೆ ಸೇರಿದ ಚಿತ್ರ ಎಂಬುದು ಚಿತ್ರದ ಪೋಸ್ಟರ್ ನೋಡಿದರೆ ಭಾಸವಾಗುತ್ತದೆ. ಚಿತ್ರದ ನಿರ್ದೇಶಕರ ಮಾತಿನಲ್ಲಿ ಹೇಳುವುದಾದರೆ.. ‘ಚಿತ್ರದಲ್ಲಿ ಬರುವ ಸ್ವರ್ಗ […]
ಓಂ ಬಾಲಾಜಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್.ನರಸಿಂಹಲು ಅವರು ನಿರ್ಮಿಸಿರುವ ‘ತಾರಾಕಾಸುರ‘ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದ ಮೊದಲ ಹಾಡನ್ನು ಇತ್ತೀಚೆಗೆ ರೆಬಲ್ಸ್ಟಾರ್ ಅಂಬರೀಶ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸುಮಲತ ಅಂಬರೀಶ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ದೊಡ್ದಣ್ಣ ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ನಾಯಕನನ್ನು ಪರಿಚಯಿಸುವ ಈ ಹಾಡನ್ನು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಹಾಡಿದ್ದಾರೆ. ಧರ್ಮವಿಶ್ ಸಂಗೀತ ನೀಡಿದ್ದಾರೆ. ಹಿಂದೆ ‘ರಥಾವರ‘ ಎಂಬ ಯಶಸ್ವಿ ಚಿತ್ರ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ‘ತಾರಾಕಾಸುರ‘ ಚಿತ್ರದ […]
ಅಭಿಷೇಕ್ ನಟನೆಯ ಅಮರ್ ಚಿತ್ರದ ಬಗ್ಗೆ ನಿರ್ದೇಶ ನಾಗಶೇಖರ್ ದಿನಕ್ಕೊಂದೊಂದು ಹೊಸಾ ಸುದ್ದಿ ಕೊಡಲಾರಂಭಿಸಿದ್ದಾರೆ. ನಿರೂಪ್ ಭಂಡಾರಿ ಅತಿಥಿ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿಯ ಹಿಂದೆಯೇ ರಚಿತಾ ರಾಮ್ ಕೂಡಾ ಅಮರ್ಗೆ ಜೊತೆಯಾಗಲಿರೋ ವಿಚಾರ ಹೊರ ಬಿದ್ದಿದೆ! ಹಾಗಂತ ರಚಿತಾ ರಾಮ್ ಈ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಅಂದುಕೊಳ್ಳುವಂತಿಲ್ಲ. ಆಕೆ ಈ ಚಿತ್ರದ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಪೆಷಲ್ ಸಾಂಗ್ ಒಂದಕ್ಕೆ ರಚಿತಾ ಅಭಿಷೇಕ್ ಜೊತೆ ಕುಣಿಯಲಿದ್ದಾರೆ. ಈ ಹಾಡಿನ ತುಂಬಾ ಅವರು ಇರಲಿದ್ದಾರೆಂಬುದನ್ನು ನಾಗಶೇಖರ್ ಖಚಿತಪಡಿಸಿದ್ದಾರೆ. […]
ಕನ್ನಡ ಚಿತ್ರರಂಗದ ಪಾಲಿಗಿದು ಹಾರರ್ ಜಮಾನಾ ಎಂಬುದು ಪ್ರತೀ ವಾರವೂ ಸಾಬೀತಾಗುತ್ತಿದೆ. ಸದ್ದೇ ಇಲ್ಲದೆ ಹಾರರ್ ಚಿತ್ರಗಳು ರೆಡಿಯಾಗುತ್ತಿವೆ. ಹಾಗೆಯೇ ತಮ್ಮ ಪಾಡಿಗೆ ತಾವು ಚಿತ್ರೀಕರಣ ಮುಗಿಸಿಕೊಂಡಿರುವ `ಮನೆ ನಂಬರ್ 67′ ಚಿತ್ರತಂಡ ಅಚ್ಚುಕಟ್ಟಾದ ಸಮಾರಂಭವೊಂದರ ಮೂಲಕ ಹಾಡುಗಳನ್ನು ಬಿಡುಗಡೆಗೊಳಿಸಿದೆ. ಜಯಕುಮಾರ್ ನಿರ್ದೇಶನದ ಈ ಚಿತ್ರ ರಿಯಲ್ ಭೂತಚೇಷ್ಠೆಯ ಕಥೆಯೊಂದನ್ನಿಟ್ಟುಕೊಂಡು ಅಣಿಯಾಗಿದೆ. ಸತ್ಯಜಿತ್ ಈ ಮೂಲಕ ನಾಯಕನಾಗಿ ಅಡಿಯಿರಿಸುತ್ತಿದ್ದಾರೆ. ವಸಂತಿ, ಸುಮಿತ್ರಾ, ಗಾಯತ್ರಿ ಮತ್ತು ಸ್ವಪ್ನಾ ಎಂಬ ನಾಲ್ವರು ನಾಯಕಿಯರು ಸತ್ಯಜಿತ್ಗೆ ಜೊತೆಯಾಗಿ ನಟಿಸಿದ್ದಾರೆ. ಸಾಮಾನ್ಯವಾಗಿ ದೆವ್ವ […]