ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಈಗ ಅಮರ್ ಚಿತ್ರದ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿಯೇ ಕೊಯಂಬತ್ತೂರಿಗೆ ಚಿತ್ರ ತಂಡದೊಂದಿಗೆ ತೆರಳಿದ್ದ ಅಭಿಷೇಕ್ ಅಲ್ಲಿ ಬಿಡುವೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡು ಮಂಗಳೂರಿಗೆ ಬಂದಿಳಿದು ಚಿತ್ರೀಕರಣ ಪೂರೈಸಿಕೊಂಡಿದ್ದಾರೆ. ನಾಗಶೇಖರ್ ಪ್ಲಾನು ಮಾಡಿಕೊಂಡಿದ್ದರ ಪ್ರಕಾರವಾಗಿಯೇ ಕೊಯಂಬತ್ತೂರಿನಲ್ಲಿ ಅಷ್ಟೂ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಮಂಗಳೂರಿನ ಸುಂದರ ಲೊಕೇಷನ್ನುಗಳಲ್ಲಿ ಅಭಿಷೇಕ್ ಮತ್ತು ನಾಯಕಿ ತಾನ್ಯಾ ಹೋಪೆ ಕಾಂಬಿನೇಷನ್ನಿನ ರೊಮ್ಯಾಂಟಿಕ್ ದೃಷ್ಯಾವಳಿಗಳನ್ನು ಸೆರೆ ಹಿಡಿಯಲು ಯೋಜನೆ ಪೂರೈಸಿದ್ದಾರೆ. ಆದರೆ ಇದೆಲ್ಲದಕ್ಕಿಂತಲೂ ವಿಶೇಷವಾದ ಇನ್ನೊಂದು ಸಂಗತಿ ಇದೆ. ಈ […]
ಬಹುಕಾಲದ ಬಳಿಕ ಅಂಬರೀಶ್ ನಾಯಕರಾಗಿ ನಟಿಸಿರೋ ಚಿತ್ರ ಅಂಬಿ ನಿಂಗೆ ವಯಸಾಯ್ತೋ. ಖುದ್ದು ಅಂಬರೀಶ್ ಅವರೇ ಈ ಚಿತ್ರವನ್ನು ಗಂಭೀರವಾಗಿ ಪರಿಗಣಿಸಿ ಬೇಗನೆ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ. ಅದರ ಎಲ್ಲ ಕಾರ್ಯಕ್ರಮಗಳನ್ನು ಆಸಕ್ತಿ ವಹಿಸಿಯೇ ಮಾಡಿದ್ದಾರೆ. ಇನ್ನೇನು ಈ ತಿಂಗಳಾಂತ್ಯದಲ್ಲಿ ಈ ಚಿತ್ರವನ್ನು ತೆರೆಗಾಣಿಸಲು ನಿರ್ಧರಿಸಲಾಗಿತ್ತು. ಆದರೀಗ ಬಂದಿರೋ ಸುದ್ದಿಯ ಪ್ರಕಾರ ಹೇಳೋದಾದರೆ ವಯಸಾದ ಅಂಬಿ ಥೇಟರುಗಳ ಕಡೆ ಬರೋದು ಇನ್ನೂ ಸ್ವಲ್ಪ ಲೇಟು! ಹಾಗಂತ ಇದಕ್ಕೆ ಯಾವ ತಾಂತ್ರಿಕ ಅಡೆತಡೆಗಳೂ ಕಾರಣವಲ್ಲ. ಬಿಡುಗಡೆಗೆ ಬೇಕಾದ ಸರ್ವ ತಯಾರಿಗಳೂ […]
ಬಾಹುಬಲಿ ಚಿತ್ರದ ನಂತರ ಅದರಂಥಾದ್ದೇ ಅದ್ದೂರಿತನದೊಂದಿಗೆ ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರ `ಸುವರ್ಣ ಸುಂದರಿ’. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿರೋ ಈ ಭರ್ಜರಿ ಬಜೆಟ್ಟಿನ ಚಿತ್ರದ ಮೂಲಕ ಬಹುಭಾಷಾ ತಾರೆ ಜಯಪ್ರದಾ ಕನ್ನಡಕ್ಕೆ ಮತ್ತೆ ಮರಳಿದ್ದಾರೆ! ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸುತ್ತಾಡಿ ಇಂದಿನ ಕಾಲಮಾನದವರೆಗೆ ಪ್ರಯಾಣ ಬೆಳೆಸೋ ಕಥೆ ಹೊಂದಿರುವ ಈ ಚಿತ್ರ ಸೂಕ್ಷ್ಮವಾಗಿ ಪುನರ್ಜನ್ಮದ ಕಥನವನ್ನೂ ಹೊಂದಿದೆ. ಎಸ್ ಟೀಮ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಬಗೆಗೀಗ ತೆಲುಗು ಮತ್ತು ಕನ್ನಡದಲ್ಲಿ ಬಾಹುಬಲಿಯಂಥಾದ್ದೇ ಭಾರೀ […]
ದಿನಕರ್ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಮುಖ್ಯವಾಗಿರೋದು ನಾಯಕಿ ಹರಿಪ್ರಿಯಾ. ನೀರ್ದೋಸೆಯಂಥಾ ಚಿತ್ರದಲ್ಲಿ ಬಿಂದಾಸ್ ಆಗಿ ನಟಿಸಿದ್ದ ಹರಿಪ್ರಿಯಾರದ್ದು ಪಾತ್ರಕ್ಕಾಗಿ ಒಗ್ಗಿಕೊಳ್ಳೋ ಜಾಯಮಾನ. ಆ ಕಾರಣದಿಂದಲೇ ನೀರ್ದೋಸೆಯಲ್ಲಿ ಬಿಡುಬೀಸಾಗಿ ಸಿಗರೇಟು ಸೇದೋ ಸೀನುಗಳಲ್ಲಿ ಕಾಣಿಸಿಕೊಂಡಿದ್ದರು. ಈಕೆ ಇದೀಗ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರಕ್ಕಾಗಿ ಬಿಯರ್ ಗುಟುಕರಿಸಿರೋ ವಿಚಾರ ಅವರ ಕಡೆಯಿಂದಲೇ ಹೊರ ಬಿದ್ದಿದೆ! ಅಷ್ಟಕ್ಕೂ ಹರಿಪ್ರಿಯಾ ನಿರ್ದೇಶಕ ದಿನಕರ್ ಅವರ ಗಮನ ಸೆಳೆದಿದ್ದೇ ನೀರ್ ದೋಸೆ ಚಿತ್ರದ ಮೂಲಕ. ಅದರಲ್ಲಿನ […]
ನಮ್ ಏರಿಯಾಲ್ ಒಂದಿನ, ತುಘ್ಲಕ್ ಮತ್ತು ಹುಲಿರಾಯ ಮೂಲಕ ಹೊಸಾ ಬಗೆಯ ಚಿತ್ರವನ್ನು ನೀಡಿದ್ದವರು ಅರವಿಂದ್ ಕೌಶಿಕ್. ಸದ್ಯ ಕಮಲಿ ಎನ್ನುವ ಸೂಪರ್ ಹಿಟ್ ಧಾರಾವಾಹಿಯ ನಿರ್ದೇಶನವನ್ನೂ ಮಾಡುತ್ತಿರುವ ಅರವಿಂದ್ ಶಾರ್ದೂಲ ಎಂಬ ಸಿನಿಮಾದೊಂದಿಗೆ ಮರಳಿದ್ದಾರೆ. ಶಾರ್ದೂಲ ಹುಲಿರಾಯನ ಮತ್ತೊಂದು ಹೆಸರು. ಹುಲಿ ಅವರ ಪಾಲಿಗೆ ಲಕ್ಕಿಯೋ, ಈ ಚಿತ್ರದ ಕಥೆಗೆ ಅದು ಹೊಂದುತ್ತದೆಯಾದ್ದರಿಂದ ಆ ಶೀರ್ಷಿಕೆಯಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ವಿಶಿಷ್ಟವಾದ ಈ ಟೈಟಲ್ಲಿನ ಮೂಲಕ ಅಷ್ಟೇ ವಿಶೇಷವಾದೊಂದು ಕಥೆಯೊಂದಿಗೆ ಅರವಿಂದ್ ಕೌಶಿಕ್ ಮರಳಿದ್ದಾರೆ! ಅರವಿಂದ್ ಕೌಶಿಕ್ […]
ಕಣ್ಣೆದುರೇ ಕುಸಿದು ಹೋದ ಕೊಡಗಿನ ಜನರ ಬವಣೆಗಳ ಬಗ್ಗೆ ಎಂಥವರಿಗಾದರೂ ಮರುಕ ಹುಟ್ಟುತ್ತದೆ. ಇಡೀ ಕರ್ನಾಟಕದ ಎಲ್ಲ ಕಡೆಗಳಿಂದಲೂ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ರವಿಚಂದ್ರ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ರವಿಚಂದ್ರನ್ ಅವರೂ ಕೂಡಾ ಈ ದುರಂತದ ಬಗ್ಗೆ ಸವಿಸ್ತಾರವಾಗಿ ಮಾತಾಡಿದ್ದಾರೆ. ಒಂದು ಮಹಾ ಪ್ರಾಕೃತಿಕ ದುರಂತದಿಂದ ಎಲ್ಲವನ್ನೂ ಕಳೆದುಕೊಂಡು ನಿಂತಿರುವ ಕೊಡಗಿನ ಜನರತ್ತ ದೂರದೃಷ್ಟಿಯ ನೋಟವನ್ನೂ ಬೀರಿದ್ದಾರೆ. ಇದು ನಡೆಯಬಾರದಿತ್ತು. ಆದರೆ ಪ್ರಕೃತಿಯ ಪಲ್ಲಟಗಳನ್ನು ತಡೆಯಲು ಹೇಗೆ ಸಾಧ್ಯ? ಏಕಾಏಕಿ ಮನೆ ಮಠ, ಜಮೀನು […]
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ಜ್ಯೂನಿಯರ್ ಕಿರಿಕ್ ಪಾರ್ಟಿ- ಹೀಗಂದಿದ್ದವರು ನಿರ್ದೇಶಕ ರಿಷಬ್ ಶೆಟ್ಟಿ. ಅತ್ತ ಇದು ಮೈಮನಸುಗಳಲ್ಲಿ ಕನ್ನಡತನವನ್ನೇ ತುಂಬಿಕೊಂಡು ಕೇರಳ ಭಾಗವಾಗಿರೋ ಕಾಸರಗೋಡಿನ ಒಡಲ ಕಥೆ ಅಂತ ಸುದ್ದಿ ಹಬ್ಬಿದೆ, ಮತ್ತೊಂದೆಡೆ ಮುಚ್ಚುತ್ತಿರೋ ಸರ್ಕಾರಿ ಶಾಲೆಗಳ ಕಥೆಯನ್ನೊಳಗೊಂಡಿದೆ ಎಂದೂ ಹೇಳಲಾಗುತ್ತಿದೆ. ಆದ್ರೆ ಶೆಟ್ಟರು ಮಾತ್ರ ಇದನ್ನು ಜ್ಯೂನಿಯರ್ ಕಿರಿಕ್ ಪಾರ್ಟಿ ಅನ್ನುತ್ತಿರೋದರ ಮರ್ಮವೇನೆಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಅದಕ್ಕೀಗ ಈ ಚಿತ್ರದ ಟ್ರೈಲರ್ ಮೂಲಕವೇ ನಿಖರವಾದ ಉತ್ತರ […]
ತಾಜಾತನದ ಪೋಸ್ಟರುಗಳು ಸೇರಿದಂತೆ ತನ್ನದೇ ಮಾರ್ಗದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದ ದಿವಂಗತ ಮಂಜುನಾಥನ ಗೆಳೆಯರು ಚಿತ್ರ ತೆರೆಕಂಡಿದೆ. ಎಸ್.ಡಿ ಅರುಣ್ ನಿರ್ದೆಶನದ ಈ ಚಿತ್ರ ಯುವ ಸಮೂಹದ ಮನೋಭೂಮಿಕೆಯ ಜೊತೆಜೊತೆಗೇ ಕೌಟುಂಬಿಕ ಮೌಲ್ಯಗಳು, ಪೊಲೀಸ್ ವ್ಯವಸ್ಥೆ ಸೇರಿದಂತೆ ಒಟ್ಟಾರೆ ಸಮಾಜ ಪರಿಣಾಮಕಾರಿ ಕಥಾನಕವೊಂದರ ಮೂಲಕ ಪ್ರೇಕ್ಷಕರನ್ನು ಮುಟ್ಟಿದೆ. ನಿರ್ದೇಶಕ ಎಸ್.ಡಿ ಅರುಣ್ ತಮ್ಮ ಚಿತ್ರದಲ್ಲಿ ಸಂಭಾಷಣೆ ಸೇರಿದಂತೆ ಎಲ್ಲವೂ ನ್ಯಾಚುರಲ್ ಆಗಿಯೇ ಮೂಡಿ ಬಂದಿರೋ ಸೂಚನೆ ನೀಡುತ್ತಾ ಬಂದಿದ್ದರು. ಅದಕ್ಕೆ ತಕ್ಕುದಾಗಿಯೇ ಜೀವ ಪಡೆದಿರೋ ಈ ಚಿತ್ರದ ಅಷ್ಟೂ […]
ಕನ್ನಡದ ಚಿತ್ರಪ್ರೇಕ್ಷಕರಿಗೆ ನೃತ್ಯ ನಿರ್ದೇಶಕ ಕಲೈ ಮಾಸ್ಟರ್ ಹೆಸರು ಚಿರಪರಿಚಿತ. ಕನ್ನಡದ ಬಹುತೇಕ ಸ್ಟಾರ್ಗಳ ಸಾಕಷ್ಟು ಚಿತ್ರಗಳಿಗೆ ಎವರ್ಗ್ರೀನ್ ಅನ್ನಿಸುವಂಥಾ ನೃತ್ಯ ಸಂಯೋಜನೆ ಮಾಡಿರುವ ಅವರೀಗ ವೈವಾಹಿಕ ಜೀವನಕ್ಕೆ ಅಡಿಯಿಸುತ್ತಿದ್ದಾರೆ. ಇದೇ ತಿಂಗಳ ೨೮-೨೯ರಂದು ಕಲೈ ಮಾಸ್ಟರ್ ವಿವಾಹ ಸಮಾರಂಭ ನೆರವೇರಲಿದೆ. ಕಲೈ ಮಾಸ್ಟರ್ ದಶಕಗಳಿಂದೀಚೆಗೆ ಕನ್ನಡ ಚಿತ್ರ ರಂಗದ ಭಾಗವಾಗಿದ್ದಾರೆ. ಇದುವರೆಗೂ ನೂರಾರು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಪ್ರತೀ ಚಿತ್ರಗಳಲ್ಲಿಯೂ ಹೊಸತನಕ್ಕೆ ತುಡಿಯುವ ಮನಸ್ಥಿತಿಯಿಂದಲೇ ಗಮನ ಸೆಳೆದಿರುವ ಕಲೈ ಮಾಸ್ಟರ್ ಪ್ರತಿಭಾವಂತ ನೃತ್ಯ ಪಟುಗಳನ್ನು […]