ನವಾಜುದ್ದೀನ್ ಸಿದ್ದಿಕಿ ಬಾಲಿವುಡ್ನ ಅದ್ಭುತ ನಟ. ದೇಸೀ ಲುಕ್ಕಿನ ನವಾಜುದ್ದೀನ್ ಇದುವರೆಗೂ ನಟಿಸಿರುವ ಪಾತ್ರಗಳು, ಅದರಲ್ಲಿನ ನಟನೆಯ ಮೂಲಕವೇ ವಿಶಿಷ್ಟ ನಟನಾಗಿ ಗುರುತಿಸಿಕೊಂಡಿದ್ದಾರೆ. ಈವತ್ತಿಗೆ ಅವರ ಕೈತುಂಬಾ ಅವಕಾಶಗಳಿವೆ. ಮನಸು ಮಾಡಿದರೆ ಮುಂಬೈ, ದೆಹಲಿಯಂಥಾ ಮಹಾ ನಗರಗಳಲ್ಲಿ ಹೈಫೈ ಜಂಗುಳಿಯಲ್ಲಿ ಕಾಲುಗಳನ್ನು ಮಣ್ಣಿಗೆ ಸೋಕಿಸದಂತೆ ಕಳೆದು ಬಿಡಬಹುದು. ಆದರೆ ಮೂಲತಃ ಉತ್ತರಪ್ರದೇಶದ ಹಳ್ಳಿಯೊಂದರ ರೈತಾಪಿ ಕುಟುಂಬದಿಂದ ಬಂದಿರೋ ನವಾಜುದ್ದೀನ್ ಸಿದ್ದಿಕಿ ಕೃಷಿ ಭೂಮಿ ಖರೀದಿಸಿ ನೆಲದ ನಂಟಿಗೆ ಶರಣಾಗಿದ್ದಾರೆ! ಉತ್ತರ ಪ್ರದೇಶದ ಬುಧಾನ ಎಂಬ ಪುಟ್ಟ ಹಳ್ಳಿಯಿಂದ […]
ಕಿಕಿ ಡ್ಯಾನ್ಸ್ ಎಂಬ ಕಾಯಿಲೆ ಸಾಂಕ್ರಾಮಿಕವಾಗೋದು ಕರ್ನಾಟಕದ ಮಟ್ಟಿಗೆ ತಪ್ಪಿದೆ. ನಿವೇದಿತಾ ಎಂಬ ಎಳಸು ಹುಡುಗಿ ಈ ಡ್ಯಾನ್ಸು ಮಾಡಿ ಎಲ್ಲೆಡೆಯಿಂದ ಉಗಿಸಿಕೊಂಡದ್ದಿನ್ನೂ ಹಸಿಯಾಗಿರೋವಾಗಲೇ ಯುವ ನಿರ್ದೇಶಕ, ನಟ ಅಂತ ಹೇಳಿಕೊಳ್ಳೋ ಯೋಗಿ ಕೈಲಿ ರಾಷ್ಟ್ರಧ್ವಜ ಹಿಡಿದು, ಕಪಿಯಂತೆ ಕಾರಿಂದ ಜಿಗಿದು ಕುಣಿದಾಡಿದ್ದ! ತಮಿಳಿನ ಪಾರ್ತಿಬನ್ ಕಾದಲ್ ಎನ್ನುವ ಸಿನಿಮಾದಲ್ಲಿ ಯೋಗಿ ಹೀರೋ ಆಗಿ ನಟಿಸುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ತಮಿಳು ಮಾಧ್ಯಮಗಳ ಮುಂದೆ ‘ಕಾವೇರಿ ನಮ್ಮದು. ಜೈ ಕರ್ನಾಟಕ ಮಾತೆ ಎಂದಿದ್ದ ಕುರಿತು ಸಿನಿಬಜ಼್ […]
ಕನ್ನಡ ಚಿತ್ರಗಳನ್ನು ಆಗಾಗ ಹಾಲಿವುಡ್ ಚಿತ್ರಗಳಿಗೆ ಹೋಲಿಸಿ ಮಾತಾಡುವವರಿದ್ದಾರೆ. ಅಲ್ಲಿನ ಕಥೆ, ಗುಣಮಟ್ಟವನ್ನು ಹಾಡಿ ಹೊಗಳುವವರೂ ಇದ್ದಾರೆ. ಇದೀಗ ಅದೇ ಹಾಲಿವುಡ್ಡಿನ ಆಸುಪಾಸಿಂದಲೇ ಬಂದ ಅಪ್ಪಟ ಕನ್ನಡಿಗ ಹೇಮಂತ್ ‘ಉದ್ದಿಶ್ಯ ಚಿತ್ರದ ಮೂಲಕ ಪ್ರತ್ಯಕ್ಷರಾಗಿದ್ದಾರೆ. ಹಾಲಿವುಡ್ನ ಖ್ಯಾತ ಕಥೆರಗಾರನೇ ಬರೆದಿರೋ ಕಥೆ ಹೊಂದಿರೋ ಈ ಚಿತ್ರ ಸದ್ಯ ಕರ್ನಾಟಕದ ತುಂಬಾ ಸಖತ್ ಸೌಂಡ್ ಮಾಡಲಾರಂಭಿಸಿದೆ. ಕನ್ನಡದ ಮಟ್ಟಿಗೆ ಹೊಸತಾಗಿ ದಾಖಲಾಗಬಹುದಾದ ಥ್ರಿಲ್ಲರ್ ಕಥೆ ಹೊಂದಿರೋ ಈ ಚಿತ್ರದ ಮೂಲಕ ನಿರ್ಮಾಪಕರಾಗಿ ನಿರ್ದೇಶಕರಾಗಿ ಹೇಮಂತ್ ಕೃಷ್ಣಪ್ಪ ಅಡಿಯಿರಿಸಿದ್ದಾರೆ. ಮೂಕಲತಃ […]
ರೋರಿಂಗ್ ಸ್ಟಾರ್ ಶ್ರೀಮುರಳಿ ಮಫ್ತಿ ಚಿತ್ರದ ನಂತರ ನಟಿಸುತ್ತಿರೋ ಚಿತ್ರ ಭರಾಟೆ. ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರಕ್ಕೆ ಶ್ರೀ ಲೀಲಾ ನಾಯಕಿಯಾಗಿ ಆಯ್ಕೆಯಾಗಿ ತಿಂಗಳು ಕಳೆದಿದೆ. ಇದೀಗ ಎಲ್ಲ ತಯಾರಿ ಮುಗಿಸಿಕೊಂಡಿರೋ ಚಿತ್ರತಂಡ ಈ ತಿಂಗಳ ಕೊನೆಯಲ್ಲಿ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದೆ. ಚಿತ್ರೀಕರಣಕ್ಕೆ ಹೊರಡೋದು ತುಸು ತಡವಾದರೂ ಚಿತ್ರತಂಡ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲು ಬಲು ಹಿಂದೆಯೇ ಸಿದ್ಧತೆ ನಡೆಸಿತ್ತು. ಅದರ ಭಾಗವಾಗಿ ಸ್ವಾತಂತ್ರ್ಯ ದಿನಾಚರಣೆಯಂದೇ ಭರಾಟೆಯ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. […]
ಕಣ್ಣೆದುರೇ ಕೊಡಗು ಸೀಮೆಯಲ್ಲಾಗುತ್ತಿರುವ ಪ್ರಾಕೃತಿಕ ದುರಂತ ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ. ಊರಿಗೂರೇ ನೆರೆ, ನೀರು, ಭೂಕುಸಿತದಿಂದ ಕಣ್ಮರೆಯಾದಂತಾಗಿ ರಾತ್ರಿ ಹಗಲಾಗೋದರೊಳಗೆ ಜನ ಎಲ್ಲ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಚಿತ್ರರಂಗವೂ ಮಿಡಿದಿದೆ. ತಾರೆಯರೆಲ್ಲ ಕೈಲಾದ ಸಹಾಯಕ್ಕೆ ಮುಂದಾಗಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಕೊಡಗಿನ ಜನರಿಗೆ ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲವನ್ನೂ ಕಳೆದುಕೊಂಡಿರೋ ಕೊಡಗಿನ ಜನರಿಗೆ […]
ಸಿನಿಮಾ ಜಗತ್ತಿನ ಆಗುಹೋಗುಗಳನ್ನು ಓದುಗರ ಮುಂದಿಡುತ್ತಲೇ ಆನ್ಲೈನ್ ಓದುಗರಿಗೆ ಹೊಸಾ ರುಚಿ ಹತ್ತಿಸಿದ ಹೆಗ್ಗಳಿಕೆ ನಮ್ಮದು. ನಿಮ್ಮೆಲ್ಲರ ಪ್ರೀತಿಯ ಬೆಂಬಲದಿಂದಲೇ ಇದು ಸಾಧ್ಯವಾಗಿದೆ ಎಂಬ ನಂಬಿಕೆಯೊಂದಿಗೆ ಮತ್ತೊಂದು ಸಾಹಸಕ್ಕೆ ಕೈಯಿಟ್ಟಿದ್ದೇವೆ. ಅದರಫಲವಾಗಿ ಮೂಡಿ ಬಂದಿರೋದು `ನನ್ ಲೈಫ್ ಸ್ಟೋರಿ’ ಕಾರ್ಯಕ್ರಮ. ಈ ಮೂಲಕ ಇನ್ನು ಪ್ರತೀ ವಾರವೂ ಒಬ್ಬೊಬ್ಬರ ಸಿನಿ ಬದುಕಿನ ಕಥನಗಳು ನಿಮಗೆ ನೋಡಲು ಸಿಗಲಿವೆ. ಅದರ ಆರಂಭವಾಗಿ ನಟ ನೀನಾಸಂ ಸತೀಶ್ ತಮ್ಮ ಬದುಕಿನ ಮಜಲುಗಳನ್ನು ಬಿಚ್ಚಿಟ್ಟಿದ್ದಾರೆ. ಈ ವರೆಗೆ ಸತೀಶ್ ಅವರು ಎಲ್ಲೆಂದರೆಲ್ಲಯೂ […]
ಯಾರೋ ನೆಗೆದುಬಿದ್ದು ದೆವ್ವವಾಗಿ ಕಾಡುವಂಥಾ ಹಳಸಲು ಕಥೆಯನ್ನು ಅದೆಷ್ಟು ಸಲ ಮಗುಚಿ ಹಾಕಿದರೂ ಕೆಲ ಮಂದಿಗೆ ಸುಸ್ತಾಗೋದೇ ಇಲ್ಲ. ಆ ಕ್ರಿಯೆ ಬೋರು ಹೊಡೆಸಿದ್ದರೂ ಬಹುಶಃ ಅಮವಾಸೆ ಎಂಬ ಹಾರರ್ ಟೈಪಿನ ಚಿತ್ರವೊಂದು ರೆಡಿಯಾಗಿ ಥೇಟರಿಗೆ ದಾಳಿ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ! ಅಮವಾಸೆ ಅಂದಾಕ್ಷಣ ಒಂದು ವಿಲಕ್ಷಣ ಛಾಯೆ ಸರಿದು ಹೋಗುತ್ತದೆ. ಅದರ ಹಿಂದೆ ಚಿತ್ರ ವಿಚಿತ್ರವಾದ ಕಥಾನಕಗಳೂ ಇದ್ದಾವೆ. ಅಂಥಾದ್ದರಲ್ಲಿ ಅಮಾವಾಸೆಯನ್ನೇ ಶೀರ್ಷಿಕೆಯಾಗಿಟ್ಟುಕೊಂಡ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಹಾರರ್ ಮೂಡಲ್ಲಿ ಆಲೋಚಿಸದೇ ಇರುತ್ತಾರಾ? ಆದರೆ […]
ಬದುಕಿಗೂ ಪ್ರಯಾಣಕ್ಕೂ ದಶದಿಕ್ಕುಗಳಿಂದಲೂ ಸಂಬಂಧವಿದೆ. ಆದ್ದರಿಂದಲೇ ಸಿನಿಮಾ ಚೌಕಟ್ಟಿಗೆ ಅದನ್ನು ನಾನಾ ಥರದಲ್ಲಿ ಒಗ್ಗಿಸಿಕೊಳ್ಳುವ ಪ್ರಯತ್ನಗಳೂ ಕೂಡಾ ಸದಾ ಚಾಲ್ತಿಯಲ್ಲಿವೆ. ಅಂಥಾದ್ದೊಂದು ಪ್ರಯತ್ನದ ಭಾಗವಾಗಿ ಮೂಡಿ ಬಂದಿರೋ ಒಂಥರಾ ಬಣ್ಣಗಳು ಚಿತ್ರ ಇಂದು ತೆರೆ ಕಂಡಿದೆ. ಮೂವರು ಯವಕರು ಮತ್ತು ಇಬ್ಬರು ಯುವತಿಯರ ಜರ್ನಿಯಿಂದ ಆರಂಭವಾಗಿ ಅದರಲ್ಲೇ ಕೊನೆಗೊಳ್ಳುವ ಈ ಚಿತ್ರ ಪ್ರೇಕ್ಷಕರ ಮನಸುಗಳಲ್ಲಿಯೂ ಒಂದೊಂಥರಾ ಭಾವ ಮೂಡಿಸಿದೆ! ಈ ಮೂವರು ಯುವಕರು ಮತ್ತು ಇಬ್ಬರು ಹುಡುಗೀರ ಪಯಣ ಬಾದಾಮಿ ಹುಬ್ಬಳಿ ಮತ್ತು ಮಂಗಳೂರಿನತ್ತ ಹೊರಡುತ್ತದೆ. ಅದೊಂದು […]
ಬಿಗ್ಬಾಸ್ ವಿನ್ನರ್ ಪ್ರಥಮ್ ಅಭಿನಯದ ಎಮ್ಎಲ್ಎ ಚಿತ್ರವನ್ನು ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿದ್ದಾರೆ. ಕಣ್ಣೆವೆ ಮುಚ್ಚದೆ ಇಡೀ ಸಿನಿಮಾ ನೋಡಿ ಮುಗಿಸಿದ ಸಿದ್ದರಾಮಯ್ಯನವರು ಪ್ರಥಮ್ ಅಭಿನಯವನ್ನು ಹಾಡಿ ಹೊಗಳಿದ್ದಾರೆ. ಈತನ ಬಗ್ಗೆ ಭರವಸೆಯ ಭವಿಷ್ಯವನ್ನೂ ಹೇಳಿದ್ದಾರೆ! ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿನಿಮಾ ನೋಡೋದೇ ಕಡಿಮೆ. ಈ ಹಿಂದೆ ಪುನೀತ್ ರಾಜ್ಕುಮಾರ್ ಅಭಿನಯದ ರಾಜಕುಮಾರ ಚಿತ್ರ ನೋಡಿ ಮೆಚ್ಚಿದ ಬಳಿಕ ಅವರು ಯಾವ ಸಿನಿಮಾವನ್ನೂ ನೋಡಿದ್ದಿಲ್ಲ. ಆದರೆ ಎಂಎಲ್ಎ ಚಿತ್ರ ನೋಡಿದ ಸಿದ್ದರಾಮಯ್ಯನವರು ರಾಜಕುಮಾರ ಚಿತ್ರದ ನಂತರ ತಮಗೆ […]