ಟಗರು ಡಾಲಿಯೀಗ ಸ್ಲಂಬಾಯ್!
ಟಗರು ಚಿತ್ರದ ಡಾಲಿ ಪಾತ್ರದಿಂದ ಏಕಾಏಕಿ ನಟ ಧನಂಜಯ್ ಅವರ ನಸೀಬೇ ಬದಲಾಗಿದೆ. ಈಗ ಧನಂಜಯ್ ರಾಂಗೋಪಾಲ್ ವರ್ಮಾ ನಿರ್ಮಾಣದ ತೆಲುಗು ಚಿತ್ರ ಭೈರವ ಗೀತಾದಲ್ಲಿ ಬ್ಯುಸಿಯಾಗಿದ್ದಾರೆ. ಅದನ್ನು ಮುಗಿಸಿಕೊಂಡು ವಾಪಾಸಾಗೋ ಮುನ್ನವೇ ನಿರ್ದೇಶಕ ಸೂರಿ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಎಲ್ಲ ತಯಾರಿ ಮಾಡಿಕೊಂಡು ಕಾಯುತ್ತಿದ್ದಾರೆ! ಇದೀಗ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ದೆಸೆಯಿಂದಲೇ ಈ ಚಿತ್ರದ ಕಥೆ ಸ್ಲಂನಲ್ಲಿ ಅರಳಿಕೊಳ್ಳುತ್ತದೆ ಎಂಬ ಸೂಚನೆಯೂ ಸಿಕ್ಕಿದೆ. ಧನಂಜಯ್ […]
ಧ್ವನಿಸುರುಳಿ ಬಿಡುಗಡೆ ನೆಪದಲ್ಲಿ ನೆನಪುಗಳು ಸರಿದಾಗ…
ಧನಂಜಯ್ ಅತ್ರೆ ನಿರ್ಮಾಣ ಮಾಡಿ ಮೊದಲ ಸಲ ನಾಯಕನಾಗಿ ನಟಿಸಿರೋ ಚಿತ್ರ ಕರ್ಷಣಂ. ಹೆಸರಲ್ಲಿಯೇ ಮಾಸ್ ಅಂಶಗಳನ್ನು ಧ್ವನಿಸೋ ಈ ಚಿತ್ರದ ಧ್ವನಿ ಸುರುಳಿಯನ್ನು ಧೀರ ರಾಕ್ಲೈನ್ ವೆಂಕಟೇಶ್ ಬಿಡುಗಡೆಗೊಳಿಸಿದ್ದಾರೆ. ಧನಂಜಯ್ ಅವರ ಇಷ್ಟೂ ವರ್ಷಗಳ ಬಣ್ಣದ ನಂಟಿನ ಹಾದಿಯಲ್ಲಿ ಅವರಿಗೆ ಸದಾ ಬೆಂಬಲಿಸುತ್ತಾ, ಮಾರ್ಗದರ್ಶನ ನೀಡುತ್ತಾ ಬಂದಿದ್ದ ರಾಕ್ಲೈನ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸೋ ಮೂಲಕ ಧನಂಜಯ್ ಅವರ ಸಾಹಸಕ್ಕೆ ಗೆಲುವಾಗಲೆಂದು ಹಾರೈಸಿದ್ದಾರೆ. ಈ ಚಿತ್ರದ ಮೂಲಕವೇ ಗಾಯಕರಾಗಿ ಹೆಸರು […]
ಪತಿಬೇಕು ನಿರ್ದೇಶಕ ಸಿಎಂಗೆ ಬರೆದ ಪತ್ರವೀಗ ವೈರಲ್!
ಯಾವುದೇ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯೋದಾದರೆ ಅದ್ದೂರಿತನದತ್ತಲೇ ಗಮನ ಹರಿಸೋದು ಮಾಮೂಲು. ಆದರೆ ಪತಿಬೇಕು ಡಾಟ್ ಕಾಮ್ ಚಿತ್ರದ ನಿರ್ದೇಶಪಕ ರಾಕೇಶ್ ಮಾತ್ರ ಅತ್ಯಂತ ಭಿನ್ನವಾದ ಹಾದಿ ಹಿಡಿದಿದ್ದಾರೆ. ಜನಸಾಮಾನ್ಯರ ನಡುವೆ ಯಾವುದೇ ಅದ್ದೂರಿತನವಿಲ್ಲದೆ ಈ ಚಿತ್ರದ ವೀಡಿಯೋ ಸಾಂಗ್ ಒಂದನ್ನು ಲಾಂಚ್ ಮಾಡೋ ಆಲೋಚನೆ ರಾಕೇಶ್ ಅವರದ್ದು. ಈ ಸಂಬಂಧವಾಗಿ ರಾಕೇಶ್ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಬರೆದಿರೋ ಒಂದು ಪತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿದೆ! ರಾಕೇಶ್ ಸರಳವಾಗಿ ವೀಡಿಯೋ ಸಾಂಗು ಲಾಂಚ್ ಮಾಡೋ […]
ಉದ್ದಿಶ್ಯ ಹುಡುಗಿಗೆ ನಟಿಸೋ ಉದ್ದೇಶವಿರಲಿಲ್ಲ!
ಹೇಮಂತ್ ಕೃಷ್ಣಪ್ಪ ನಿರ್ದೇಶನದ ಉದ್ದಿಶ್ಯ ಚಿತ್ರದತ್ತ ಕಥೆಯೇನು ಎಂಬುದರಿಂದ ಮೊದಲ್ಗೊಂಡು ಎಲ್ಲ ದಿಕ್ಕುಗಳಿಂದಲೂ ಪ್ರೇಕ್ಷಕರು ದೃಷ್ಟಿ ನೆಟ್ಟಿದ್ದಾರೆ. ಚಿತ್ರ ತಂಡವೂ ಕೂಡಾ ಮತ್ತಷ್ಟು ಕುತೂಹಲಕಾರಿಯಾದ ಕೆಲ ವಿಚಾರಗಳನ್ನು ಹಂತ ಹಂತವಾಗಿ ಜಾಹೀರು ಮಾಡುತ್ತಾ ಸಾಗುತ್ತಿದೆ. ಹೀಗಿರುವಾಗಲೇ ಈ ಚಿತ್ರದ ನಾಯಕಿಯರಲ್ಲೊಬ್ಬರಾಗಿರುವ ಅಕ್ಷತಾ ಮಾತಾಡಿದ್ದಾರೆ! ಮಾಡೆಲ್ ಆಗಿ ರ್ಯಾಂಪ್ನಲ್ಲಿ ಹೆಜ್ಜೆ ಹಾಕುತ್ತಲೇ ಪಿಯುಸಿಯಲ್ಲಿರುವಾಗಲೇ ನಿರೂಪಕಿಯಾಗಿ ಹೊರ ಹೊಮ್ಮಿದ್ದವರು ಅಕ್ಷತಾ. ಮಾಡೆಲಿಂಗ್ನಿಂದ ಮೊದಲ್ಗೊಂಡು, ಆಂಕರಿಂಗ್, ನಟನೆ ಸೇರಿದಂತೆ ಎಲ್ಲವೂ ಅಕ್ಷತಾ ಪಾಲಿಗೆ ಬಯಸದೇ ಘಟಿಸಿದವುಗಳೇ. ಇದೀಗ ಅವರು ಉದ್ದಿಶ್ಯ ಚಿತ್ರದ […]
ಎಂಟೂವರೆ ಲಕ್ಷ ವಂಚನೆಯ ಸುತ್ತಾ ಗುಮಾನಿಗಳ ಹುತ್ತ!
ಆಡಬಾರದ ಆಟವಾಡಿ ಕಡೆಗೆ ಎಲ್ಲ ಕುತ್ತಿಗೆಗೆ ಬಂದಾಕ್ಷಣ ದೂರು ಕೊಡೋ ಕಾಯಿಲೆ ಒಂದಷ್ಟು ನಟಿಯರಿಗೆ ಅಂಟಿಕೊಂಡಿದೆ. ಇದೀಗ ಮಂಜಿನಹನಿ ಚಿತ್ರದಲ್ಲಿ ನಟಿಸಿದ್ದ ಚೇತನಾ ಎಂಬಾಕೆ ಕೊಟ್ಟಿರೋ ದೂರಿನಲ್ಲಿಯೂ ಅಂಥಾದ್ದೇ ಖಾಯಿಲೆ ಇದೆಯಾ? ಎಂಬ ಗುಮಾನಿ ಬಹುತೇಕರನ್ನು ಕಾಡುತ್ತಿದೆ. ತಾನೇ ಅದ್ಯಾರೋ ಸಹ ನಿರ್ಮಾಪಕ ನಾಗೇಶನ ಮೇಲೆ ದೂರು ಕೊಟ್ಟು ಆ ಬಗ್ಗೆ ವಿವರ ಕೊಡದೆ ಕೆಕರುಮಕರಾಗೋ ಚೇತನಾಳ ವರಸೆ ಒಂದು ಪ್ರಕರಣದ ಮತ್ತೊಂದು ಮುಖವನ್ನೂ ಜಾಹೀರು ಮಾಡುವಂತಿದೆ! ಮಂಜಿನಹನಿ ಚಿತ್ರದಲ್ಲಿ ರವಿಚಂದ್ರನ್ ಅವರ ತಂಗಿಯ ಪಾತ್ರ ಮಾಡಿದ್ದಳೆನ್ನಲಾಗಿರೋ […]
ಅನ್ಯಾಯದ ವಿರುದ್ಧ ತಿರುಗಿಬಿದ್ದ ಅಯೋಗ್ಯ!
ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ ಲಾಂಛನದಲ್ಲಿ ಟಿ.ಆರ್. ಚಂದ್ರಶೇಖರ್ ನಿರ್ಮಾಣದಲ್ಲಿ ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರತಂಡ ರೊಚ್ಚಿಗೆದ್ದಿದೆ. ರಾಜ್ಯದಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ಪರಭಾಷೆಯ ನೆಲದಲ್ಲಿ ಥೇಟರು ಸಿಗದೆ, ಅಸಡ್ಡೆ ಅಹಂಕಾರಗಳು ತೂರಿ ಬರುತ್ತಿರೋದು ಅದಕ್ಕೆ ಕಾರಣ. ಇದನ್ನು ವಿರೋಧಿಸಿ ಚಿತ್ರತಂಡ ಫಿಲಂ ಚೇಂಬರ್ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದೆ. ಕನ್ನಡ ಚಿತ್ರಗಳನ್ನು ಎತ್ತಂಗಡಿ ಮಾಡಿಯಾದರೂ ಪರಭಾಷಾ ಚಿತ್ರಗಳನ್ನು ಮೆರೆಸುವ ಔದಾರ್ಯ ಕರ್ನಾಟಕದಲ್ಲಿದೆ. ಆದರೆ ಪರಭಾಷೆಗಳಲ್ಲಿ, ಹೊರ ರಾಜ್ಯಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಥಾ ಮನ್ನಣೆ […]
ಖಳನ ಕೈಲಿ ಸ್ಟೆಥಾಸ್ಕೋಪು ಕೊಟ್ಟ ತ್ರಾಟಕ!
ಇತ್ತೀಚೆಗೆ ಬಿಡುಗಡೆಗೊಂಡಿದ್ದ ಅಥರ್ವ ಚಿತ್ರ ನೋಡಿದವರೆಲ್ಲ ಅದರಲ್ಲಿನ ವಿಲನ್ ಅಬ್ಬರ ಕಂಡು ಥ್ರಿಲ್ ಆಗಿದ್ದರು. ಬಹುತೇಕರು ಕನ್ನಡಕ್ಕೆ ಖದರ್ ಲುಕ್ಕಿನ ಯುವ ಖಳನಟನೊಬ್ಬನ ಆಗಮನವಾಗಿದೆ ಅಂತ ಖುಷಿಗೊಂಡಿದ್ದರು. ಆ ವಿಲನ್ ರೋಲಿನಲ್ಲಿ ಆರ್ಭಟಿಸಿದ್ದವರು ಯಶವಂತ್ ಶೆಟ್ಟಿ. ಇದಕ್ಕೂ ಮುಂಚೆಯೂ ನೆಗೆಟಿವ್ ಶೇಡಿನ ಪಾತ್ರಗಳಲ್ಲಿಯೇ ಅಬ್ಬರಿಸಿದ್ದ ಯಶವಂತ್ ಇದೀಗ ತ್ರಾಟಕ ಚಿತ್ರದಲ್ಲಿ ತದ್ವಿರುದ್ಧ ಪಾತ್ರವೊಂದರಲ್ಲಿ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ! ಇದೇ ವಾರ ತೆರೆ ಕಾಣಲಿರುವ ತ್ರಾಟಕ ಭರ್ಜರಿಯಾಗಿಯೇ ಸೌಂಡು ಮಾಡುತ್ತಿದೆ. ನಾಯಕ ರಾಹುಲ್ ಐನಾಪುರ ಅವರ ಖಡಕ್ಕು ಲುಕ್ಕು ಪ್ರೇಕ್ಷಕ […]
ಡಿಜಿಟಲ್ ಕಾಮುಕರ ಹಾವಳಿಯಿಂದ ಕಂಗೆಟ್ಟವರಿಗೆ ಸಾಂತ್ವನ!
ಭಿನ್ನವಾದ ಆಲೋಚನಾ ಕ್ರಮ, ಕ್ರಿಯೇಟಿವಿಟಿಗಳಿಂದಲೇ ಗಮನ ಸೆಳೆಯುವವರು ನಿರ್ದೇಶಕ ಯೋಗರಾಜ ಭಟ್. ಇದೀಗ ಅವರು ಅಷ್ಟೇ ವಿಶಿಷ್ಟವಾದ ರೀತಿಯಲ್ಲಿ, ಒಂದು ಮಹಾ ಪಿಡುಗಿನ ವಿರುದ್ಧ ಹೆಣ್ಮಕ್ಕಳನ್ನು ಪಾರು ಮಾಡುವ ಕಳಕಳಿಯೊಂದಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಕೋರಿದ್ದಾರೆ. ಪಂಚತಂತ್ರ ಚಿತ್ರದ ಕಡೆಯಿಂದ ಇಂಥಾದ್ದೊಂದು ಸಂದೇಶ ರವಾನಿಸಿರುವ ಅವರು ಡಿಜಿಟಲ್ ಅಬ್ಯೂಸ್ ವಿರುದ್ಧ ತಣ್ಣಗೆ ಸಮರ ಸಾರಿದ್ದಾರೆ. ಈ ಮೂಲಕ ಡಿಜಿಟಲ್ ವಿಕೃತರಿಂದ ಮಾನಸಿಕ ಕಿರಿಕಿರಿಗೀಡಾಗಿರುವ ಲಕ್ಷಾಂತರ ಹೆಣ್ಣುಮಕ್ಕಳಿಗೆ ಧೈರ್ಯ ತುಂಬೋ ಕೆಲಸವನ್ನೂ ಮಾಡಿದ್ದಾರೆ. ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ […]
ಇದು ವ್ಯಾಸರಾಯರು ಬರೆದ ಕೊನೆಯ ಹಾಡು!
ಭಾವಕವಿ ಎಂ.ಎನ್ ವ್ಯಾಸರಾವ್ ಮರೆಯಾಗಿ ತಿಂಗಳಾಗುತ್ತಾ ಬಂದಿದೆ. ಸೂಕ್ಷ್ಮ ಭಾವಗಳ ಭಾವಗೀತೆ, ಚಿತ್ರಗೀತೆಗಳ ಮೂಲಕ ವ್ಯಾಸರಾವ್ ಅವರು ಬರೆದ ಕಡೇಯ ಗೀತೆಯೊಂದು ಇದೀಗ ಮಾಧುರ್ಯ ತುಂಬಿಕೊಂಡು ಪ್ರೇಕ್ಷಕರನ್ನ ತಲುಪಿಕೊಂಡಿದೆ! ವ್ಯಾಸರಾವ್ ಅವರು ಕಡೇಯದಾಗಿ ಹಾಡೊಂದನ್ನು ಬರೆದದ್ದು ಪವನ್ ಎನ್ ಶ್ರೀವತ್ಸ ನಿರ್ದೇಶನದ ಚೆಕ್ ಎಂಬ ಕಿರುಚಿತ್ರಕ್ಕಾಗಿ. `ಚದುರಂಗ ಚೌಕದ ಚದುರಂಗ’ ಎಂಬ ಈ ಹಾಡನ್ನು ಮನೋಜ್ ವಸಿಷ್ಠ ಸಂಗೀತ ನಿರ್ದೇಶನದಲ್ಲಿ ಚಿತ್ರತಂಡ ತಯಾರು ಮಾಡಿದೆ. ಅರುಂಧತಿ ವಸಿಷ್ಠ ಹಾಡಿರೋ ಈ ಹಾಡನ್ನು ಭಾವಲೋಕದ ಅಮರಜೀವಿ ಎಂ.ಎನ್ ವ್ಯಾಸರಾವ್ […]
ಕಿರಿಕ್ ಹುಡುಗನ ಮೈಸೂರು ಡೈರೀಸ್!
ಕಿರಿಕ್ ಪಾರ್ಟಿ ಚಿತ್ರಕ್ಕೆ ಒಂದು ಹಾಡು ಮತ್ತು ಸಂಭಾಷಣೆ ಬರೆದು ಆ ಮೂಲಕವೇ ಮುಂಚೂಣಿಗೆ ಬಂದಿದ್ದ ಹುಡುಗ ಧನಂಜಯ್ ರಂಜನ್. ಆ ನಂತರವೂ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದ ಧನಂಜಯ್ ಇದೀಗ `ಮೈಸೂರು ಡೈರೀಸ್’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿದ್ದ ಒಂದು ಪೋಸ್ಟರ್ ಮೂಲಕವೇ ಈ ಚಿತ್ರ ಟಾಕ್ ಕ್ರಿಯೇಟ್ ಮಾಡಿತ್ತು. ಇದೀಗ ವರಮಹಾಲಕ್ಷ್ಮಿ ಹಬ್ಬಕ್ಕೆ ಶುಭಾಶಯ ಕೋರುವ ನೆಪದಲ್ಲಿ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ಈ ಮೂಲಕವೇ ಚಿತ್ರತಂಡ ಮತ್ತೊಂದು ಸಂತಸದ ಸುದ್ದಿಯನ್ನೂ ಜಾಹೀರು […]