ಕನ್ನಡದಲ್ಲೀಗ ಕಂಟೆಂಟ್ ಆಧಾರಿತ ಸಿನಿಮಾಗಳ ಪ್ರಭೆ ಜೋರಾಗಿದೆ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಚಿತ್ರ ಫೋಟೋ. ಕಳೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿದಲ್ಲಿ ಪ್ರೇಕ್ಷಕರಿಂದ ಲೈಕ್ ಪಡೆದ ಈ ಸಿನಿಮಾದ ಮೊದಲ ನೋಟ ಅನಾವರಣಗೊಂಡಿದೆ. ನಟರಾಕ್ಷಸ ಡಾಲಿ ಧನಂಜಯ್ ಹಾಗೂ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ಶ್ರೀರಂಗಪಟ್ಟದಲ್ಲಿರುವ ಪ್ರಕಾಶ್ ರಾಜ್ ಒಡೆತನದ ನಿರ್ದಿಗಂತ ಫಾರಂ ಹೌಸ್ ನಲ್ಲಿ ಫೋಟೋ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಹರಗಾರರು ಹಾಗೂ ಪತ್ರಕರ್ತರಾಗಿರುವ ಜೋಗಿ, […]
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ದಿನಗಣನೆಯಷ್ಟೇ ಬಾಕಿ ಉಳಿದಿದೆ. ಇದೇ ತಿಂಗಳ 23ರಿಂದ ತಾರೆಯರು ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯುತ್ತಿದ್ದಾರೆ. ಸ್ಯಾಂಡಲ್ ವುಡ್ ಟು ಬಾಲಿವುಡ್ ತನಕ ಎಲ್ಲಾ ಇಂಡಸ್ಟ್ರೀಯ ಸ್ಟಾರ್ ಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್ 10 ಸೀಸನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆಷ್ಟೇ ದುಬೈನಲ್ಲಿ ಅದ್ಧೂರಿಯಾಗಿ ಸಿಸಿಎಲ್ ಗೆ ಚಾಲನೆ ಕೊಡಲಾಗಿತ್ತು. ಇದೀಗ ತಂಡಗಳು ಕ್ರಿಕೆಟ್ ಅಭ್ಯಾಸಕ್ಕಿಳಿದಿದ್ದಾರೆ. ಅದರಂತೆ ಕರ್ನಾಟಕ ಬುಲ್ಡೋಜರ್ಸ್ ತಂಡ ಅಭ್ಯಾಸಕ್ಕೂ ಮುನ್ನ ಮಾಧ್ಯಮದರೊಟ್ಟಿಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದೆ. ಇತ್ತೀಚೆಗಷ್ಟೇ ಖಾಸಗಿ […]
ಇವತ್ತಿನ ದಿನಗಳಲ್ಲಿ ನಿಜಕ್ಕೂ ನಗಿಸುವ ಕಾಮಿಡಿ ಕಲಾವಿದರ ಸಂಖ್ಯೆ ತೀರಾ ಕಡಿಮೆ. ಒಬ್ಬ ನಟ ತೆರೆ ಮೇಲೆ ಬರ್ತಿದ್ದಂಗೇ ಜನ ನಗಲು ಶುರು ಮಾಡ್ತಾರೆ ಅಂದರೆ ನಿಜಕ್ಕೂ ಅದು ಒಬ್ಬ ಹಾಸ್ಯ ಕಲಾವಿದನ ಗೆಲುವು ಅಂದುಕೊಳ್ಳಬಹುದು. ಸಧ್ಯಕ್ಕೆ ಸಾಧು ಕೋಕಿಲಾ ನಂತರ ಜನ ತೆರೆ ಮೇಲೆ ಅತಿ ಹೆಚ್ಚು ಎಂಜಾಯ್ ಮಾಡ್ತಿರೋದು ಮಹಂತೇಶ್ ಅವರ ನಟನೆಯನ್ನು ನೋಡಿ! ಫ್ರೆಂಚ್ ಬಿರಿಯಾನಿ ಸಿನಿಮಾದ ಮಸಲ್ ಮಣಿ ಪಾತ್ರ ಮಹಂತೇಶ್ ಅವರಿಗೆ ಸ್ಟಾರ್ ವರ್ಚಸ್ಸು ತಂದುಕೊಟ್ಟಿದೆ. ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ […]
ಎಲ್ಲಿ ಕಂಡ ಕನಸು ನನಸಾಗೋದಿಲ್ಲವೋ? ತಾನೊಪ್ಪುವ, ತನ್ನನ್ನೊಪ್ಪುವ ಹುಡುಗ ಸಿಗೋದಿಲ್ಲವೋ ಅನ್ನೋದು ಆ ಹೆಣ್ಣುಮಗಳ ತಳಮಳ. ಸ್ಥೂಲಕಾಯದ ಹುಡುಗಿಯರಿಗೆ ಅಂಥದ್ದೊಂದು ಟೆನ್ಷನ್ ಯಾವತ್ತಿಗೂ ಇರುತ್ತದೆ. ಬರುವವರೆಲ್ಲಾ ಸಣ್ಣಗಿರುವ ತಂಗಿಯ ಕಡೆ ನೋಡಿದರೆ ಯಾರಿಗೆ ತಾನೆ ಸಂಕಟವಾಗೋದಿಲ್ಲ. ಒಂದೊಳ್ಳೆ ಸೀರೆಗೆ ಒಪ್ಪುವ ಡಿಸೈನರ್ ರವಿಕೆ ಒಲಿಸಲು ತನ್ನ ಊರಿನ ಚಂದ್ರಣ್ಣನ ಬಳಿ ಹೋಗುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ರವಿಕೆಯ ತಮಾಷೆ ಪ್ರಸಂಗ. ಕ್ರಮೇಣ ಅದು ವಿಕೋಪಕ್ಕೆ ಹೋಗಿ ಸೀರಿಯಸ್ ಪ್ರಸಂಗವಾಗಿಯೂ ಮಾರ್ಪಡುತ್ತದೆ. ಇಲ್ಲಿ ರವಿಕೆ ಅನ್ನೋದು ಒಂದು ರೂಪಕವಷ್ಟೇ. ಹೊಂದಾಣಿಕೆ […]
ಹೌದಲ್ವಾ? ನಮ್ಮ ಆಸಕ್ತಿಯೇ ಬೇರೆ, ನಾವು ಬದುಕುತ್ತಿರುವ ರೀತಿಯೇ ಬೇರೆ. ನಮ್ಮ ಜೀವನ ಶೈಲಿಯಿಂದ ಜಗತ್ತು ನಮ್ಮನ್ನು ನೋಡುತ್ತಿರುವ ರೀತಿಯಂತೂ ಇನ್ನೂ ಬೇರೇನೇ ಆಗಿದೆ. ಯಾರದ್ದೋ ಮರ್ಜಿಗೆ, ಮತ್ತಿನ್ಯಾರದ್ದೋ ಸಮಾಧಾನಕ್ಕೆ ಎಷ್ಟು ಶುಷ್ಕವಾಗಿ ಜೀವಿಸುತ್ತಿದ್ದೇವೆ… ಸಮಾಜದ ಸಿದ್ದ ಸೂತ್ರಗಳಲ್ಲಿ ಸಿಕ್ಕಿಕೊಂಡು, ನಾವಲ್ಲದ ನಾವಾಗಿಯೇ ಬದುಕಿ ಕಟ್ಟಕಡೆಯದಾಗಿ ಒಂದು ದಿನ ಮಣ್ಣಲ್ಲಿ ಮಣ್ಣಾಗಿಬಿಡಬೇಕಾ? ಯಾವುದೋ ಮರದ ಸೌದೆಯಮೇಲೆ ಮಲಗಿ ಬೂದಿಯಾಗಬೇಕಾ? ನಮ್ಮದು, ನಮ್ಮತನ ಅನ್ನೋದಕ್ಕಿಲ್ಲಿ ಬೆಲೆಯೇ ಇಲ್ಲವಾ? ಅದ್ಭುತ ಪಾತ್ರಗಳನ್ನು ಸೃಷ್ಟಿಸಿ, ಕ್ರಿಯಾಶೀಲವಾಗಿ ಬರೆದುಕೊಂಡಿರಬೇಕು ಅಂತಾ ಬಯಸಿದವನೊಬ್ಬ ತನಗೆ […]
ಕನ್ನಡ ಸಿನಿಮಾರಂಗವೀಗ ಬೇರೆಯದ್ದೇ ದಿಕ್ಕಿಗೆ ಹೊರಳಿದೆ. ಸೋಲು ಗೆಲುವಿನಾಚೆ ಲೆಕ್ಕಚಾರ ಹಾಕಿದರೂ ಹೊಸ ಹುರುಪು, ಹೊಸ ಹರಿವು, ಹೊಸ ಆಲೋಚನೆಗಳಿಂದ ಬೇರೆಯದ್ದೇ ಆಯಾಮ ಪಡೆದಿದೆ. ಅದರ ಮುಂದುವರೆದ ಭಾಗವಾಗಿ ಗೋಚರಿಸುತ್ತಿರುವ ಚಿತ್ರ ಫೋಟೋ..ಕಳೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿದಲ್ಲಿ ಪ್ರೇಕ್ಷಕರಿಂದ ಲೈಕ್ ಪಡೆದ ಫೋಟೋ ಸಿನಿಮಾ ಸದ್ಯದಲ್ಲೇ ತೆರೆಗೆ ಬರ್ತಿದೆ. ಕೋವಿಡ್ ಸಮಯದ ಕಥೆಗೀಗ ಜೊತೆಯಾಗಿದ್ದಾರೆ ಬಹುಭಾಷಾ ಕಲಾವಿದ ಪ್ರಕಾಶ್ ರಾಜ್. ಫೋಟೋ ಸಿನಿಮಾವನ್ನು ನಿರ್ದಿಗಂತದ ಮೂಲಕ ಪ್ರಕಾಶ್ ರಾಜ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಈ ಮೂಲಕ ಹೈದ್ರಾಬಾದ್ ಕರ್ನಾಟಕದ […]
”ಫಾರ್ ರಿಜಿಸ್ಟ್ರೇಷನ್” ಸ್ಯಾಂಡಲ್ವುಡ್ನಲ್ಲಿ ಹಲವು ವಿಚಾರಗಳಿಂದ ಸದ್ದು ಮಾಡುತ್ತಿರುವ ಹೊಸ ಸಿನಿಮಾ. ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಟಿಸಿರುವ ಬಹುನಿರೀಕ್ಷಿತ ಚಿತ್ರದ ಮೊದಲ ನೋಟ ಅನಾವರಣಗೊಂಡಿದೆ. ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದ ಸಂಘದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.. ವಾಲಗದ ಮೂಲಕ ಇಡೀ ಚಿತ್ರತಂಡ ಸುದ್ದಿಗೋಷ್ಠಿಗೆ ಎಂಟ್ರಿ ಕೊಟ್ಟಿದ್ದು, ವಿಶೇಷವಾಗಿತ್ತು. ನಿರ್ದೇಶಕರಾದ ಶಶಾಂಕ್ ಹಾಗೂ ಚೇತನ್ ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿ ನಟ ಪೃಥ್ವಿ ಅಂಬಾರ್ ಮಾತನಾಡಿ, […]
ಆ ಕಾಲೇಜು ತೆರೆದುಕೊಂಡಿದ್ದೇ ಬರೀ ಮೂವತ್ತೈದು ಪರ್ಸೆಂಟ್ ಪಡೆದು ಪಾಸಾದ ಮಕ್ಕಳಿಗಾಗಿ. ಇಂತಿಷ್ಟು ಪರ್ಸೆಂಟು, ಪೇಮೆಂಟು ಇದ್ದರೂ ಕಾಲೇಜಿಗೆ ಪ್ರವೇಶಾವಕಾಶ ಸಿಗೋದು ಕಷ್ಟ. ಇಂಥದ್ದರಲ್ಲಿ ಜಸ್ಟ್ ಪಾಸ್ ವಿದ್ಯಾರ್ಥಿಗಳಿಗೆಂದೇ ಕಾಲೇಜು ಆರಂಭವಾದರೆ ಅಂಥಾ ಹುಡುಗರಿಗೆ ಎಷ್ಟು ಖುಷಿಯಾಗಬಹದು. ಕಾಲೇಜು ಮಾತ್ರವಲ್ಲ, ಹಾಸ್ಟೆಲ್ ಸೌಲಭ್ಯವೂ ಅಲ್ಲಿರುತ್ತದೆ ಅಂದರೆ ಹುಡುಗರ ಪಾಲಿಗದು ಸ್ವರ್ಗ! ಹಾಗೆ ಸೀಟು ಪಡೆದು ಬಂದ ಹುಡುಗ ಹುಡುಗಿಯರ ಪ್ರೀತಿ ಪ್ರೇಮ ಪ್ರಣಯದಾಟಗಳೂ ಶುರುವಾಗುತ್ತವೆ. ಹುಡುಗರ ಭವಿಷ್ಯದಂತೆಯೇ ಇಲ್ಲಿನ ಕಥೆ ಕೂಡಾ ಯಾವ ದಿಕ್ಕಿಗೆ ಹೊರಳಿಕೊಳ್ಳಬಹುದು ಎನ್ನುವ […]
ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಮುಹೂರ್ತ ಕಂಡಿದ್ದ `ಶಭ್ಬಾಷ್’ ಚಿತ್ರ ಅತ್ಯಂತ ವೇಗವಾಗಿ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ. ಈಗಾಗಲೇ ಸಾಕಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿರುವ ರುದ್ರಶಿವ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸಾಂಗವಾಗಿ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು, ಅದರ ಬಗೆಗಿನ ಒಂದಷ್ಟು ಕುತೂಹಲಕರ ವಿವರಗಳನ್ನು ಹಂಚಿಕೊಂಡಿದೆ. ರುದ್ರಶಿವ ಯೋಜನೆಯಂತೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಏಳು ದಿನಗಳ ಚಿತ್ರೀಕರಣ ಮುಗಿಸಿಕೊಂಡು, ಚನ್ನಗಿರಿಯ ಶಾಂತಿಸಾಗರದ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಅಲ್ಲಿನ ಪೌರಾಣಿಕ, ಐತಿಹಾಸಿಕ ಸ್ಥಳಗಳಲ್ಲಿ ಸಾಂಗವಾಗಿ […]
ಈ ಹಿಂದೆ ತಾರಕಾಸುರ ಚಿತ್ರದ ಮೂಲಕ ಅಬ್ಬರದ ಎಂಟ್ರಿ ಕೊಟ್ಟಿದ್ದವರು ರವಿ. ಇದೀಗ ಅವರು ಕೈಲಾಸ ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ನಾಗ್ ವೆಂಕಟ್ ನಿರ್ದೇಶನದ ಕೈಲಾಸ ಚಿತ್ರಕ್ಕೆ ಕಾಸಿದ್ರೆ ಎಂಬ ಅಡಿ ಬರಹವಿದೆ. ಈಗಾಗಲೇ ಟೀಸರ್ ಮೂಲಕ ಝಲಕ್ಕುಗಳನ್ನು ಅನಾವರಣಗೊಳಿಸಿದ್ದ ಚಿತ್ರತಂಡವೀಗ ಕನ್ನಡದ ಮಟ್ಟಿಗೆ ಹೊಸತೆನ್ನಿಸುವಂಥಾ ಟ್ರಾನ್ಸ್ ಸಾಂಗ್ ವೊಪಂದನ್ನು ಬಿಡುಗಡೆಗೊಳಿಸಿದೆ. ದೃಷ್ಯಗಳ ಮೂಲಕವೇ ಕಿಕ್ಕೇರಿಸೋ ಶೈಲಿಯ ಈ ಟ್ರಾನ್ಸ್ ವೀಡಿಯೋ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೋಡುಗರ ಕಡೆಯಿಂದ […]