ಹಾಲಿವುಡ್ ಚಿತ್ರ ‘ಅವೆಂಜರ್ಸ್ ಎಂಡ್ ಗೇಮ್’ ಗೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಭಾರತದಲ್ಲಿ ಅವೆಂಜರ್ಸ್ ಎಂಡ್ ಗೇಮ್ ದಾಖಲೆ ಬರೆದಿದೆ. ಈಗಾಗಲೇ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಮುಗಿ ಬೀಳುತ್ತಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರದ ಪ್ರತಿಯೊಂದು ಪಾತ್ರವೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿವೆ. ಇನ್ನೂ ಈ ಸಿನಿಮಾ ದಾಖಲೆ ಮಾಡಿದ್ದ ಎಲ್ಲಾ ಚಿತ್ರಗಳ ದಾಖಲೆಗಳನ್ನು ಮುರಿದು ಹಾಕಿದೆ.
₹ 300 cr Club and its members…
2014: #PK
2015: #BajrangiBhaijaan
2016: #Sultan
2016: #Dangal
2017: #TigerZindaHai
2018: #Padmaavat
2018: #Sanju
2019: #AvengersEndgame
NOTE: #Baahubali2 [#Hindi; 2017] is the ONLY film in ₹ 500 cr Club. Nett BOC. India biz.— taran adarsh (@taran_adarsh) May 5, 2019
ಸದ್ಯ ಬಿಡುಗಡೆಯಾಗಿ ಇಷ್ಟು ದಿನದವರೆಗೆ 300 ಕೋಟಿ ದಾಖಲೆ ಮಾಡಿದ್ದ ಸಿನಿಮಾಗಳ ದಾಖಲೆಯನ್ನು ಈ ಸಿನಿಮಾ ಮುರಿದು ಹಾಕುವ ಮೂಲಕ ಬಾಕ್ಸ್ ಆಫೀಸ್ ಚಿಂದಿ ಮಾಡಿದೆ. ಬಿಡುಗಡೆಯಾಗಿ 15 ದಿನದಲ್ಲಿ ಬಾಲಿವುಡ್ ಸಿನಿಮಾಗಳು 300 ಕೋಟಿ ಕ್ಲಬ್ ಸೇರಿದ್ದವು. ಆದರೆ ಈಗಾಗಲೇ ಚಿತ್ರ ಬಿಡುಗಡೆಯಾಗಿ 15 ದಿನದಲ್ಲಿ ಹಿಂದಿಯಲ್ಲಿ 500 ಕೋಟಿ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್ ಚಿಂದಿ ಮಾಡಿದೆ. 2014 ರಲ್ಲಿ ಪಿಕೆ ದಾಖಲೆ ಸೇರಿತ್ತು. 2015ರಲ್ಲಿ ಭಜರಂಗಿ ಬೈಜಾನ್ ದಾಖಲೆ ಮಾಡಿದರೆ, 2016 ರಲ್ಲಿ ಸುಲ್ತಾನ್ ದಾಖಲೆ ಮಾಡಿತ್ತು. ಇನ್ನೂ 2016ರಲ್ಲಿ ದಂಗಲ್ ಹಾಗೂ 2017 ರಲ್ಲಿ ಟೈಗರ್ ಜಿಂದಾ ಹೈ, 2018 ರಲ್ಲಿ ಪದ್ಮಾವತ್, 2018 ರಲ್ಲಿ ಸಂಜು ದಾಖಲೆ ಮಾಡಿದರೆ, ಈ ವರ್ಷ 2019 ಅವೆಂಜರ್ಸ್ ಎಂಡ್ ಗೇಮ್ ಈ ವರ್ಷ 500 ಕೋಟಿ ಮಾಡಿದೆ. ನಥ್ಯಾನೋಸ್ ಜಿದ್ದಾಜಿದ್ದಿಗೆ ಕಡಿವಾಣ ಹಾಕಲು ಕ್ಯಾಪ್ಟನ್ ಮಾರ್ವೆಲ್ ಪಾತ್ರ ಸೃಷ್ಟಿಸಲಾಗಿದೆ. ಕ್ಯಾ.ಮಾರ್ವೆಲ್ ಅವೆಂಜರ್ಸ್ ಎಂಡ್ ಗೇಮ್ ನಲ್ಲಿ ಹೇಗೆ ಅವರನ್ನೆಲ್ಲಾ ಕಾಪಾಡುತ್ತಾನೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ರೋಬರ್ಟ್ ಡೌನೈ ಜ್ಯೂನಿಯರ್, ಚಾರಿಸ್ ಇವಾನ್ಸ್, ಮಾರ್ಕ್ ರುಫೋಲೊ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿದ್ದಾರೆ.