ಹಾಲಿವುಡ್ ಸಿನಿಮಾಗಳಿಗೆ ಅಮೇರಿಕಾ ಮತ್ತು ಯೂರೋಪ್ ದೇಶಗಳಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಜತೆಗೆ ಮಾರುಕಟ್ಟೆಯೂ ಇದೆ. ಇನ್ನು ಮಾರ್ವೆಲ್ ಕಾಮಿಕ್ಸ್ ಸೂಪರ್ ಹೀರೋ ಸಿನಿಮಾಗಳಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಅದ್ರಲ್ಲೂ ಅವೆಂಜರ್ಸ್ ಎಂಡ್ ಗೇಮ್ ನೋಡೋಕೆ ಚಾತಕ ಪಕ್ಷಿಗಳಂತೆ ಕಾಯ್ತಿದ್ದವರಿಗೆ ಲೆಕ್ಕವಿಲ್ಲ. ಸೂಪರ್ ಹೀರೋ ಸಿನಿಮಾ ಅಂದ್ರೆನೇ ಥ್ರಿಲ್..ಅಂತಹದರಲ್ಲಿ ಎಲ್ಲಾ ಸೂಪರ್ ಹೀರೋಸ್ ಒಂದೇ ಚಿತ್ರದಲ್ಲಿ ಬಂದ್ರೆ, ಅದ್ರಲ್ಲೂ ಅವೆಂಜರ್ಸ್ ಸೀರಿಸ್ ಕೊನೆ ಸಿನಿಮಾ ಅಂದ್ಮೇಲೆ ಆ ಕುತೂಹಲ ಅಗತ್ಯಕ್ಕಿಂತ ಹೆಚ್ಚೇ ಇತ್ತು ಬಿಡಿ..ಇದೀಗ ಬಾಕ್ಸಾಫೀಸ್ನಲ್ಲಿ ಅದು ಗೊತ್ತಾಗ್ತಿದೆ.
ಬಾಹುಬಲಿ ದಿ ಕಂಕ್ಲೂಷನ್, ಅವೆಂಜರ್ಸ್: ಇನ್ಪಿನಿಟಿ ವಾರ್, ಥಗ್ಸ್ ಆಫ್ ಹಿಂದೂಸ್ತಾನ್, ಟೈಗರ್ ಜಿಂದಾ ಹೈ, ಸಂಜು ಹೀಗೆ ಇಂಡಿಯನ್ ಸಿನಿ ಇಂಡಸ್ಟ್ರಿಯ ಫಸ್ಟ್ ಡೇ ಟಾಪ್ ಬಾಕ್ಸಾಫೀಸ್ ಕಲೆಕ್ಷನ್ ಸಿನಿಮಾಗಳನ್ನೆಲ್ಲಾ ಮೀರಿಸಿ, ಅವೆಂಜರ್ಸ್ ಎಂಡ್ ಗೇಮ್ ಫಸ್ಟ್ ಪ್ಲೇಸ್ನಲ್ಲಿದೆ. ಚಿತ್ರಕ್ಕೆ ಸಿಕ್ತಿರೋ ಭರ್ಜರಿ ರೆಸ್ಪಾನ್ಸ್, ಪಾಸಿಟೀವ್ ಮೌತ್ ಟಾಕ್ ನೋಡ್ತಿದ್ರೆ, ಸಿನಿಮಾ ಕಲೆಕ್ಷನ್ ಮತ್ತಷ್ಟು ಹೆಚ್ಚಾಗೋದ್ರಲ್ಲಿ ಅನುಮಾನವೇ ಇಲ್ಲ. ಫಸ್ಟ್ ವೀಕೆಂಡ್ ಟಿಕೆಟ್ಸ್ ಆಲ್ಮೋಸ್ಟ್ ಸೋಲ್ಡ್ಔಟ್ ಆಗಿದ್ದು, ಕಲೆಕ್ಷನ್ ಡಬಲ್ ಆಗೋ ಸಾಧ್ಯತೆಯೂ ಇದೆ.
ಇಂಡಿಯನ್ ಬಾಕ್ಸಾಫೀಸ್ನಲ್ಲಿ ಫಸ್ಟ್ ಡೇ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರೋ ಅವೆಂಜರ್ಸ್ ಎಂಡ್ ಗೇಮ್, ವರ್ಲ್ಡ್ ಬಾಕ್ ಆಫೀಸ್ನಲ್ಲಿ 1500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರೋದಾಗಿ ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಮತ್ತೆ ಕೆಲವು ವಿಮರ್ಶಕರ ಪ್ರಕಾರ 300 ಮಿಲಿಯನ್ ಡಾಲರ್ಗೂ ಅಧಿಕ ಕಲೆಕ್ಷನ್ ಆಗಿದ್ದು, ರೂಪಾಯಿ ಲೆಕ್ಕದಲ್ಲಿ 1800 ಕೋಟಿ ದಾಟಿದೆ. ಅತೀ ದೊಡ್ಡ ದೇಶ ಚೀನಾ ಬಾಕ್ಸ್ ಆಫೀಸ್ನಲ್ಲಿ ಅವೆಂಜರ್ಸ್ ಎಂಡ್ ಗೇಮ್ 700 ಕೋಟಿ ಬಾಚಿ, ಅಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ವಿದೇಶಿ ಸಿನಿಮಾ ಅನ್ನಿಸಿಕೊಂಡಿದೆ. . 2800 ಸ್ಕ್ರೀನ್ಗಳ ಮೇಲೆ ಅಪ್ಪಳಿಸಿರೋ ಅವೆಂಜರ್ಸ್ ಎಂಡ್ ಗೇಮ್ 6500 ಸ್ಕ್ರೀನ್ಗಳಲ್ಲಿ ರಿಲೀಸ್ ಆಗಿದ್ದ ಬಾಹುಬಲಿ-2 ಚಿತ್ರಕ್ಕೆ ಫೈಟ್ ಕೊಟ್ಟಿರುವುದು ವಿಶೇಷವಾಗಿದೆ.
ಥಿಯೇಟರ್ನಲ್ಲಿ ಥಾನೋಸ್ ವರ್ಸಸ್ ಸೂಪರ್ ಹೀರೋಸ್ ಫೈಟ್ಗಿಂತ ಬಾಕ್ಸ್ ಆಫೀಸ್ನಲ್ಲಿ ಅವೆಂಜರ್ಸ್ ಎಂಡ್ ಗೇಮ್ ಸೌಂಡ್ ಜೋರಾಗಿದೆ. ಸಿನಿಮಾ ಕ್ರೇಜ್ ಎಷ್ಟರಮಟ್ಟಿಗೆ ಇದೆಯಂದ್ರೆ ಕೆಲವೆಡೆ ಸತತ 24 ಗಂಟೆಗಳ ಕಾಲ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ. ಇನ್ನೂ ಕೆಲ ದೇಶಗಳಲ್ಲಿ ಒಂದು ದಿನ ಮೊದ್ಲೆ ಸಿನಿಮಾ ರಿಲೀಸ್ ಆಗಿದ್ದು, ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ಪೈರಸಿ ನಡುವೆಯೂ ಹಾಲಿವುಡ್ ಮೂವಿ ಲವರ್ಸ್, ಥಿಯೇಟರ್ನಲ್ಲೇ ಅವೆಂಜರ್ಸ್ ಎಂಡ್ ಗೇಮ್ನ ಅಸಲಿ ಥ್ರಿಲ್ ಎಂಜಾಯ್ ಮಾಡ್ತಿದ್ದಾರೆ. ಐಮ್ಯಾಕ್ಸ್, ಫೋರ್ ಡಿ ಎಕ್ಸ್, ತ್ರೀಡಿ, ಟು ಡಿ ಫಾರ್ಮೆಟ್ಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಮಸ್ತ್ ಮಜಾ ಕೊಡುತ್ತಲಿದೆ. ಒಟ್ಟು ಮೊದಲ ಮೂರು ದಿನಕ್ಕೆ 601 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿ ಅವೆಂಜರ್ಸ್ ಎಂಡ್ ಗೇಮ್ ಬಾಕ್ಸಾಫೀಸ್ನಲ್ಲಿ ಸುನಾಮಿ ಎಬ್ಬಿಸಿದೆ.ಈ ಆ್ಯಕ್ಷನ್ ಸಿನಿಮಾ ಸೌಂಡ್ ನೋಡುತ್ತಿದ್ದರೆ, ಅವತಾರ್ ದಾಖಲೆ ಅಳಿಸಿ ಹಾಕೋದು ಪಕ್ಕಾ ಆಗಿದೆ. ಅವೆಂಜರ್ಸ್ ಸೀರಿಸ್ನಲ್ಲೇ ಬಹಳ ಡಿಫರೆಂಟ್ ಆಗಿರೋ ಎಂಡ್ ಗೇಮ್ ಬಾಕ್ಸ್ ಆಫೀಸ್ನಲ್ಲಿ ಒಂದು ಸ್ಟ್ರಾಂಗ್ ರೆಕಾರ್ಡ್ಸ್ ಕ್ರಿಯೇಟ್ ಮಾಡೋ ಎಲ್ಲ ಲಕ್ಷಣಗಳು ಕಾಣುತ್ತಿದೆ.