ಕೃಷ್ಣ ಸಿರೀಸ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನೇ ನೀಡಿದ ಕನ್ನಡದ ಚಾಕೊಲೇಟ್ ಹೀರೋ ಅಜಯ್ ರಾವ್ ಸದ್ಯ ಅಯೋಗ್ಯ ಸಿನಿಮಾದ ನಿರ್ಮಾಪಕ ಟಿ.ಆರ್. ಚಂದ್ರಶೇಖರ್ ಜತೆಯಾಗಿದ್ದಾರೆ. ಹೌದು.. ‘ಹ್ಯಾಟ್ರಿಕ್ ಹಿಟ್’ ಬಳಿಕ ನಿರ್ಮಾಪಕ ಟಿ.ಆರ್.ಚಂದ್ರಶೇಖರ್, ಅಜಯ್ ರಾವ್ ಜೊತೆಗೆ ಕೈ ಜೋಡಿಸಿದ್ದು, ಹೊಸ ಸಿನಿಮಾ ಮಾಡುವ ತರಾತುರಿಯಲ್ಲಿದ್ದಾರೆ. ‘ಕೆಜಿಎಫ್’ ಟೀಂನಲ್ಲಿ ಸಹ ನಿರ್ದೇಶಕನಾಗಿ ದುಡಿದಿದ್ದ ತಿಮ್ಮೇಗೌಡ, ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಮೇ ತಿಂಗಳಿಂದ ಶೂಟಿಂಗ್ ಆರಂಭವಾಗಲಿದ್ದು, ಸದ್ಯದಲ್ಲೇ ಟೈಟಲ್ ರಿವೀಲ್ ಆಗಲಿದೆ. ಸಿನಿಮಾಗೆ ‘ಕೃಷ್ಣನ್ ಲವ್ ಸ್ಟೋರಿ’ಯಂತಹ ಮ್ಯೂಸಿಕಲ್ ಹಿಟ್ ಕೊಟ್ಟಂತಹ ಶ್ರೀಧರ್ ಸಂಭ್ರಮ್ ಸಂಗೀತ ನಿರ್ದೇಶನ ಇರಲಿದೆ. ಇನ್ನು ಕಾಮಿಡಿ, ರೊಮ್ಯಾಂಟಿಕ್, ಆ್ಯಕ್ಷನ್, ಹೀಗೆ ಎಲ್ಲಾ ಜಾನರ್ ನ ಸಿನಿಮಾಗಳಲ್ಲಿ ಮಿಂಚಿರುವ ಅಜಯ್ ರಾವ್ ತಮ್ಮದೇ ಫ್ಯಾನ್ ಫಾಲೋವರ್ಸ್ ಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚಿಗೆ ತಾಯಿಗೆ ತಕ್ಕ ಮಗ ಸಿನಿಮಾದಲ್ಲಿಯೂ ನಟಿಸಿ, ಆ್ಯಕ್ಷನ್ ಹೀರೋ ಎಂಬುದನ್ನು ಸಾಬೀತುಪಡಿಸಿದ್ದರು. ಈ ಸಿನಿಮಾದಲ್ಲಿ ತಾಯಿಯಾಗಿ ಸುಮಲತಾ ಮತ್ತು ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದರು.
No Comment! Be the first one.