ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರ ಈಗಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಪ್ಪತೈದನೇ ದಿನವನ್ನು ದಾಟಿಕೊಂಡು ಗೆಲುವಿನ ನಾಗಾಲೋಟದಲ್ಲಿರೋ ಈ ಚಿತ್ರವೀಗ ತಮಿಳಿಗೆ ರೀಮೇಕ್ ಆಗೋ ತಯಾರಿಯಲ್ಲಿದೆ. ತಮಿಳಿನ ಸ್ಟಾರ್ ನಟ ವಿಜಯ್ ಸೇತುಪಥಿ ತಮಿಳಿನಲ್ಲಿ ಅಯೋಗ್ಯನಾಗಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.
ಥರ ಥರದ ಪಾತ್ರಗಳ ಮೂಲಕವೇ ತಮಿಳು ನಾಡಿನ ತುಂಬಾ ಅಭಿಮಾನಿಗಳನ್ನು ಪಡೆದುಕೊಂಡವರು ವಿಜಯ್ ಸೇತುಪಥಿ. ಅವರು ಇತ್ತೀಚೆಗಷ್ಟೇ ಅಯೋಗ್ಯ ಚಿತ್ರವನ್ನು ವೀಕ್ಷಿಸಿದ್ದಾರೆ. ಇದು ತಾನು ಬಯಸೋ ಕಥಾ ಹಂದರವನ್ನೇ ಹೊಂದಿರೋ ಚಿತ್ರ ಅಂತ ಖುಷಿಗೊಂಡಿರೋ ಸೇತುಪತಿ ತಾವದರಲ್ಲಿ ನಟಿಸಬೇಕೆಂದು ಬಳಿ ಬಂದ ತಂಡಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಈ ಹಿಂದೆ ನಡುವುಳ್ ಕೊಂಜಮ್ ಪಕ್ಕತಾ ಕಾಣುಂ ಎಂಬ ಚಿತ್ರದ ರೀಮೇಕಿನಲ್ಲಿ ನೀನಾಸಂ ಸತೀಶ ನಟಿಸಿದ್ದರು. ವಿಜಯ್ ಸೇತುಪಥಿ ನಟಿಸಿದ್ದ ಈ ಚಿತ್ರ ಕನ್ನಡದಲ್ಲಿ ಕ್ವಾಟ್ಲೆ ಸತೀಶ ಚಿತ್ರವಾಗಿ ತೆರೆ ಕಂಡಿತ್ತು. ಇದೀಗ ಅದೇ ಸೇತುಪಥಿ ಸತೀಶ್ ಅಭಿನಯದ ಅಯೋಗ್ಯ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಪಾತ್ರದಲ್ಲಿ ನಟಿಸಲೂ ಉತ್ಸುಕರಾಗಿದ್ದಾರೆ.
ರೀಮೇಕ್ ಹಕ್ಕುಗಳ ಬಗೆಗಿನ ಮಾತುಕತೆ ಇದೀಗ ನಡೆಯುತ್ತಿದೆ. ಇನ್ನೇನು ಅದೂ ಕೂಡಾ ಮುಗಿಯಲಿದೆ. ಸದ್ಯದಲ್ಲಿಯೇ ಅಯೋಗ್ಯ ಚಿತ್ರ ತಮಿಳಿನಲ್ಲಿಯೂ ಸೆಟ್ಟೇರಲಿದೆ.
https://www.youtube.com/watch?v=t78yMnRQgOw&t=38s #