ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರ ಐವತ್ತನೇ ದಿನವನ್ನು ಯಶಸ್ವೀ ಪ್ರದರ್ಶನದೊಂದಿಗೆ ಪೂರೈಸಿದೆ. ಮಂಡ್ಯದ ಸಿದ್ಧಾರ್ಥ ಚಿತ್ರ ಮಂದಿರದಲ್ಲಿಯೂ ಅಯೋಗ್ಯ ಚಿತ್ರ ಐವತ್ತು ದಿನ ಕಂಪ್ಲೀಟ್ ಮಾಡಿದೆ. ಅದರ ಪಕ್ಕದಲ್ಲೇ ಇರುವ ಸಂಜಯ ಚಿತ್ರಮಂದಿರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಅಂಬಿ ನಿಂಗೆ ವಯಸಾಯ್ತೋ ಚಿತ್ರದ ಭರಾಟೆ ಜೋರಾಗಿದೆ. ಅತ್ತ ಅಂಬಿಯ ಆಳೆತ್ತರದ ಕಟೌಟ್, ಇತ್ತ ನೀನಾಸಂ ಸತೀಶ್ ಅವರದ್ದೂ ಅದೇ ಗಾತ್ರದ ಕಟೌಟ್…
ಒಂದು ಕಾಲದಲ್ಲಿ ಇದೇ ಚಿತ್ರ ಮಂದಿರಗಳಲ್ಲಿ ಅಂಬಿ ಚಿತ್ರಗಳನ್ನು ಕ್ಯೂನಲ್ಲಿ ನಿಂತು ಟಿಕೆಟು ಪಡೆದು ನೋಡುತ್ತಿದ್ದ ನೀನಾಸಂ ಸತೀಶ್ ಪಾಲಿಗೆ ಇದೊಂದು ಮಹಾ ಸಂಭ್ರಮ. ಈ ಬಗ್ಗೆ ನೀನಾಸಂ ಸತೀಶ್ ಅವರೇ ಖುಷಿ ಹಂಚಿಕೊಂಡಿದ್ದಾರೆ!
‘ಇದೊಂದು ಕಾಕತಾಳೀಯ. ಅಂಬಿ ಅಣ್ಣನ ಅಂಬಿ ನಿಂಗೆ ವಯಸಾಯ್ತೋ ಚಿತ್ರ ಸಿದ್ಧಾರ್ಥ ಚಿತ್ರ ಮಂದಿರದಲ್ಲಿದೆ. ನನ್ನ ಅಯೋಗ್ಯ ಸಂಜಯದಲ್ಲಿದೆ. ನನ್ನ ಚಿತ್ರದ್ದು ಐವತ್ತನೇ ದಿನ. ಇದಲ್ಲವೇ ಹೆಮ್ಮೆಯ ವಿಷಯ. ಒಂದು ಕಾಲದಲ್ಲಿ ಅವರ ಚಿತ್ರಕ್ಕಾಗಿ ಅದೇ ಥೇಟರಿನ ಮುಂದೆ ಟಿಕೆಟಿಗೆ ಕ್ಯೂನಲ್ಲಿ ನಿಂತಿದ್ದೆ. ಇಂದು ಅವರ ಕರ್ವಟ್ ಪಕ್ಕದಲ್ಲಿಯೇ ನನ್ನದೂ ಒಂದು ಕಟೌಟ್ ನಿಂತಿದೆ. ಇದು ನನ್ನ ವೈತ್ತಿ ಬದುಕಿನಲ್ಲಿಯೇ ಶ್ರೇಷ್ಠವಾದ ವಿದ್ಯಮಾನ. ಇವರ ಜೊತೆ ಅಭಿನಯಿಸೋ ಹಂಬಲ ಇನ್ನೂ ಇದೆ. ಅವರ ಆಶೀರ್ವಾದ ನಮ್ಮ ಜೊತೆಗಿದೆ’ ಎಂಬುದು ಸತೀಶ್ ಸಂಭ್ರಮದ ಸಾರಾಂಶ.
ಇದಲ್ಲದೇ ಈ ವಾರವೇ ತಾವೂ ಕೂಡಾ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ನೋಡೋದಾಗಿ ಹೇಳಿಕೊಂಡಿರುವ ನೀನಾಸಂ ಸತೀಶ್ ಎಲ್ಲರೂ ಈ ಚಿತ್ರ ನೋಡುವಂತೆಯೂ ಹೇಳಿದ್ದಾರೆ.
#
No Comment! Be the first one.