ವಿಶಾಲ್ ನಟನೆಯ ನೂತನ ತಮಿಳು ಸಿನಿಮಾ ’ಅಯೋಗ್ಯ’ ಟೀಸರ್ ಬಿಡುಗಡೆಯಾಗಿದೆ. ಭರ್ತಿ ಆಕ್ಷನ್ ಇರುವ ಟೀಸರ್‌ನಲ್ಲಿ ವಿಶಾಲ್ ಡಿಫರೆಂಟ್ ಮ್ಯಾನರಿಸಂ ಗಮನಸೆಳೆಯುತ್ತದೆ. ಖಡಕ್ ಮತ್ತು ವಿಲಕ್ಷಣ ವ್ಯಕ್ತಿತ್ವದ ಪೊಲೀಸ್ ಅಧಿಕಾರಿಯಾಗಿ ವಿಶಾಲ್ ಮೊದಲ ನೋಟದಲ್ಲೇ ಗಮನಸೆಳೆಯುತ್ತಾರೆ. ಚಿತ್ರದ ನಾಯಕನ ಹೆಸರು ಕರ್ಣನ್. ಆದರೆ ಟೀಸರ್ ನೋಡಿದಾಗ ಈ ಹೆಸರಿಗೂ, ನಾಯಕನ ವ್ಯಕ್ತಿತ್ವಕ್ಕೂ ಹೊಂದಾಣಿಕೆಯೇ ಆಗುವುದಿಲ್ಲ. ಅರೆಕ್ಷಣ ಕಾಣಿಸಿಕೊಳ್ಳುವ ಖಳನಟ ಪಾರ್ಥಿಬನ್ ಅವರ ಪಾತ್ರದ ಚಿತ್ರಣ ಸಿಗುವುದಿಲ್ಲ. ನಾಯಕಿ ರಾಶಿ ಖನ್ನಾ ಝಲಕ್ ಕೂಡ ಇದೆ.
ನಿರ್ದೇಶಕ ವೆಂಕಟ್ ಮೋಹನ್ ಅವರೇ ಡೈಲಾಗ್ ಬರೆದಿದ್ದು, ಟೀಸರ್‌ನ ಮೊದಲ ದೃಶ್ಯದಲ್ಲೇ ಪಂಚ್ ನೀಡುತ್ತಾರೆ. ಇದು ಜ್ಯೂನಿಯರ್ ಎನ್‌ಟಿಆರ್ ನಟನೆಯ ತೆಲುಗು ಸಿನಿಮಾ ’ಟೆಂಪರ್’ ರೀಮೇಕ್. ಆದರೆ ಚಿತ್ರಕಥೆಯಲ್ಲಿ ಸಾಕಷ್ಟು ಮಾರ್ಪಾಟುಗಳಾಗಿರುವುದು ಟೀಸರ್ ನೋಡಿದಾಗ ತಿಳಿಯುತ್ತದೆ. ಯಶ್ ನಟನೆಯ ಕನ್ನಡದ ’ಕೆಜಿಎಫ್’ ಚಿತ್ರದ ತಮಿಳು ಡಬ್ಬಿಂಗ್ ಅವತರಣಿಕೆಯನ್ನು ವಿಶಾಲ್ ತಮಿಳುನಾಡಿನಲ್ಲಿ ವಿತರಿಸಿದ್ದರು. ಇದರಿಂದಾಗಿ ಅವರು ಅಲ್ಲಿನ ಕೆಲ ನಿರ್ಮಾಪಕರಿಂದ ಸಾಕಷ್ಟು ಪ್ರತಿರೋಧ ಎದುರಿಸಬೇಕಾಯ್ತು. ಸದ್ಯ ಎಲ್ಲವೂ ತಣ್ಣಗಾಗಿದ್ದು, ವಿಶಾಲ್ ತಮ್ಮ ಹೊಸ ಚಿತ್ರದ ಟೀಸರ್‌ನೊಂದಿಗೆ ಸದ್ದು ಮಾಡುತ್ತಿದ್ದಾರೆ. ಚಿತ್ರ ಏಪ್ರಿಲ್‌ನಲ್ಲಿ ತೆರೆಕಾಣಲಿದೆ.
https://youtu.be/yrMHYwvMP7s #