ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಚಿತಾರಾಮ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ತಣ್ಣಗೆ ನಿರೀಕ್ಷೆ ಸೃಷ್ಟಿಸುತ್ತಿದೆ. ದ್ವಾರಕೀಶ್ ಚಿತ್ರ ನಿರ್ಮಾಣ, ಪಿ. ವಾಸು ನಿರ್ದೇಶನ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮ್ಯಾಜಿಕಲ್ ಕಾಂಬಿನೇಶನ್ ಈ ಸಿನಿಮಾದಲ್ಲಿ ಒಂದಾಗಿದೆ. ಈಗಾಗಲೇ ಪಿ. ವಾಸು ಮತ್ತು ಶಿವಣ್ಣ ನೋಡಿಯ ಶಿವಲಿಂಗ ಹಿಟ್ ಆಗಿದೆ. ದ್ವಾರಕೀಶ್ ನಿರ್ಮಾಣದಲ್ಲಿ ಪಿ. ವಾಸು ನಿರ್ದೇಶನದ ಆಪ್ತಮಿತ್ರ ದೊಡ್ಡ ಮಟ್ಟದ ಗೆಲುವು ಕಂಡು ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದೆ. ಮೊದಲ ಬಾರಿಗೆ ದ್ವಾರಕೀಶ್ ಸಂಸ್ಥೆಯಲ್ಲಿ ಶಿವಣ್ಣ ಹೀರೋ ಆಗಿ ನಟಿಸಿದ್ದಾರೆ. ಹೀಗಾಗಿ ಇದು ಆಪ್ತಮಿತ್ರ ಚಿತ್ರದ ಥರಾ ಐತಿಹಾಸಿಕ ಗೆಲುವು ಕಾಣಬಹುದಾ ಎನ್ನುವ ಕುತೂಹಲ ಕ್ರಿಯೇಟ್ ಆಗಿದೆ.

ಈಗಷ್ಟೇ ಆಯುಷ್ಮಾನ್ ಭವದ ಮೋಹಕ ಗೀತೆಗಳು ಲೋಕಾರ್ಪಣೆಗೊಂಡಿವೆ. ಕ್ರೇಜಿಸ್ಟಾರ್ ರವಿಚಂದ್ರನ್, ಉಪೇಂದ್ರ ಸೇರಿ ಹಾಡುಗಳ ಸಿಡಿಯನ್ನು ಲೋಕಾರ್ಪಣೆ ಮಾಡಿದರು. ಗುರುಕಿರಣ್ ಸಂಗೀತ ಒದಗಿಸಿರುವ ೧೦೦ನೇ ಚಿತ್ರ ಇದಾಗಿದ್ದು, ಪಿ.ವಾಸು ಆಕ್ಷನ್ ಕಟ್ ಹೇಳಿದ್ದಾರೆ. ದ್ವಾರಕೀಶ್ ಚಿತ್ರ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಯೋಗೀಶ್ ದ್ವಾರಕೀಶ್ ಕಾರ್ಯಕಾರಿ ನಿರ್ಮಾಪಕರು.

ದ್ವಾರಕೀಶ್ ಮಾತನಾಡುತ್ತ ಶಿವಣ್ಣ ಲಕ್ಕಿ ಸ್ಟಾರ್. ಇವರ ಡೇಟ್ಸ್ ಸಿಗಲು ಇಪ್ಪತ್ತು ವರ್ಷ ಕಾಯಬೇಕಾಯಿತು. ಇನ್ನು ಮುಂದೆ ನಮ್ಮದು ಅದೃಷ್ಟ ಎಂದು ಹೇಳಿದರು. ನಂತರ ನಿರ್ದೇಶಕ ಪಿ.ವಾಸು ಮಾತನಾಡಿ ಐವತ್ತು ವರ್ಷದ ಸಂಸ್ಥೆಗೆ ೫೨ನೇ ಚಿತ್ರವನ್ನು ನಿರ್ದೇಶನ ಮಾಡಿದ್ದು ನನ್ನ ಪುಣ್ಯ. ೭೦-೮೦-೯೦ರ ದಶಕಗಳಲ್ಲಿ ದ್ವಾರಕೀಶ್ ಅವರು ಸಿನಿಮಾ ಮಾಡುವುದನ್ನು ಬಿಟ್ಟು ಬೇರೆಯದಕ್ಕೆ ತಮ್ಮ ಹಣ ವಿನಿಯೋಗಿಸಿದ್ದರೆ ಇಷ್ಟು ಹೊತ್ತಿಗೆ ಸಾವಿರ ಕೋಟಿಯ ಒಡೆಯರಾಗುತ್ತಿದ್ದರು. ಅವರು ಹಾಗೆ ಮಾಡದೆ ಸಿನಿಮಾನೇ ಫ್ಯಾಷನ್ ಅಂತ ನಂಬಿದ್ದಾರೆ. ಶಿವಣ್ಣರಿಗೆ ಇದರಿಂದ ಒಂದು ಲಕ್ಷ ಹೆಚ್ಚಿಗೆ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ಅವರು ಕಷ್ಟದ ಜಗದಲ್ಲಿ ಸುಲಭವಾಗಿ ಹೋಗುತ್ತಿದ್ದರು. ಅನಂತ್‌ನಾಗ್ ಅವರೊಂದಿಗೆ ನಟಿಸಿದ್ದು ಖುಷಿ ತಂದಿದೆ. ತುಂಬಿದ ಕುಟುಂಬ ಮನೆಯಲ್ಲಿ ಇದ್ದರೆ ದೇಶ. ಅದೇ ಶೀರ್ಷಿಕೆಯಾಗಿದೆ. ಸೌತ್ ಇಂಡಿಯಾದಲ್ಲಿ ಸತತ ಐದು ದಶಕಗಳ ಕಾಲ ನಿರ್ಮಾಣ ಮಾಡಿರುವ ಸಂಸ್ಥೆಯನ್ನು ಗೌರವಿಸುವ ಕಾರ್ಯಕ್ರಮವಿದು ಎಂದರು.

ನಟ ಅನಂತ್‌ನಾಗ್ ಮಾತನಾಡಿ ಚಿತ್ರದ ಟೈಟಲ್‌ನಲ್ಲೇ ತಂಡಕ್ಕೆ ಆಶಿರ್ವಾದ ಸಿಕ್ಕಿದೆ. ತಾತನಾಗಿ ಸಾಕಷ್ಟು ಸೊಸೆಯಂದಿರು ಇರುವ ಕಾರಣ ಗೊಂದಲ ಉಂಟಾಗುತ್ತಿತ್ತು. ಕೊನೆಗೆ ರಾಮಾಯಣ, ಮಹಾಭಾರತದ ಹೆಸರುಗಳನ್ನು ಸೊಸೆಗೆ ನೀಡಿದೆ. ನಾನು ಒಂದು ವಾರ ಎಂದು ಬಂದದ್ದು, ಮೂವತ್ತು ದಿವಸ ಕೆಲಸ ಮಾಡುವಂತಾಯಿತು ಎಂದರು. ಚಿತ್ರದ ನಾಯಕ ನಟ ಶಿವರಾಜ್‌ಕುಮಾರ್ ಮಾತನಾಡಿ ಎಲ್ಲರೂ ನಾನು ಅದೃಷ್ಟದ ನಟ ಎಂದು ಹೇಳುತ್ತಾರೆ, ಆದರೆ ಉಪೇಂದ್ರ, ವಾಸು ಅಂಥವರ ಚಿತ್ರದಲ್ಲಿ ಅಭಿನಯಿಸಿದ್ದು ನನಗೆ ಒಲಿದು ಬಂದ ಭಾಗ್ಯ. ದ್ವಾರಕೀಶ್ ಅವರ ಸಂಸ್ಥೆಯಲ್ಲಿ ನಟಿಸುವ ಸೌಭಾಗ್ಯ ಈಗ ಸಿಕ್ಕಿದೆ ಎಂದು ಹೇಳಿದರು.

ಕೆಲವರಿಗೆ ಸಿನಿಮಾನೇ ಸ್ಪಿರಿಟ್ ಆಗಿದೆ. ಅದರಲ್ಲಿ ಇವರು ಒಬ್ಬರಾಗಿದ್ದಾರೆ. ಐವತ್ತು ವರ್ಷ ನಂತರ ಗೆದ್ದಿದ್ದೇನೆ ಎಂದು ಹೇಳಿದ್ದಾರೆ. ಇವರು ಸಿನಿಮಾ ಶುರು ಮಾಡಿದ ದಿನದಿಂದಲೇ ಗೆದ್ದಿದ್ದಾರೆ. ಕರ್ನಾಟಕದ ಭೂಪಟದಲ್ಲಿ ಈ ಮೂತಿಯನ್ನು ತೋರಿಸಿ ಘರ್ಜಿಸಿ, ಅದನ್ನು ಇಲ್ಲಿಯವರೆಗೂ ಕೇಳಿಸ್ತಾನೇ ಇzರೆ. ನಾನೇನಾದರೂ ಸಾಧನೆ ಮಾಡಿದ್ದೇನೆ ಅಂದರೆ ಅದೆ ಇವರಿಂದ ನೋಡಿ ಕಲಿತಿದ್ದು. ಇವರು ಇರೋದು ಇಷ್ಟು, ಮಾಡಿರೋದು ಅಷ್ಟು. ಹದಿನೆಂಟು ಸಿನಿಮಾ ಫ್ಲಾಪ್ ಆದರೂ ಹಿಂದಕ್ಕೆ ಹೋಗದೆ ದೇವರ ಬಳಿ ಛಾಲೆಂಜ್ ಮಾಡಿ ಎಷ್ಟು ಕಷ್ಟ ಕೊಡುತ್ತಿಯಾ ನೋಡುವೆ ಎಂದವರು. ಒಂದು ಆಪ್ತಮಿತ್ರದಿಂದ ಮೇಲಕ್ಕೆ ಬಂದವರು. ಆವತ್ತೆ ಯೋಗೀಶ್‌ಗೆ ಸಿನಿಮಾ ಹಿಟ್ ಆಗುತ್ತೆ ಎಂದು ಹೇಳಿದ್ದೆ. ಯಾಕೆಂದರೆ ಅದನ್ನು ನಾನು ಮಾಡಬೇಕಾಗಿತ್ತು. ಒಳ್ಳೆಯ ವಿಷಯವಿದ್ದರೆ ಅಲ್ಲಿರುತ್ತೇನೆ. ಅದಕ್ಕಾಗಿ ಬಂದಿರುವೆ. ಅನಂತನಾಗ್ ಇಷ್ಟು ಹೊತ್ತು ಮಾತನಾಡಿದ್ದಾರೆ ಎಂದರೆ ಇದರಲ್ಲಿ ಉತ್ತಮ ವಿಷಯವಿದೆ.

ಶಿವರಾಜ್‌ಕುಮಾರ್‌ಗೆ ವಯಸ್ಸೇ ಆಗುವುದಿಲ್ಲ. ನಾವು ಜೊತೆಗೆ ಹುಟ್ಟಿಲ್ಲ. ಜಾಸ್ತಿ ಸ್ನೇಹಿತರಾಗಿ ಬೆರೆಯುವುದಿಲ್ಲ. ಆದರೂ ಇಬ್ಬರೂ ಸ್ನೇಹದಿಂದ ಇದ್ದೇವೆ. ಅವರ ನೋವಿನಲ್ಲಿ, ಸುಖದಲ್ಲಿ ಸ್ಪಂದಿಸುತ್ತೇನೆ. ಪಿ.ವಾಸು ಮೊದಲು ನಟ, ನಂತರ ನಿರ್ದೇಶಕ. ಅವರು ನಟಿಸಿ ತೋರಿಸಿದ್ದನ್ನು ನಾವು ಮಾಡಿದರೆ ಅರ್ಧ ಗೆದ್ದಂತೆ. ಯಾವ ಸೆಟ್‌ನಲ್ಲಿ ನಗು ತುಂಬಿಕೊಂಡು ಶೂಟಿಂಗ್ ನಡೆಯುತ್ತೋ ಅದು ಶೇಕಡ ೧೦೦ರಷ್ಟು ಯಶಸ್ಸು ಸಿಗುತ್ತದೆ. ದ್ವಾರಕೀಶ್‌ಗೆ ಧೈರ್ಯ ಜಸ್ತಿ. ಬೇರೆ ವಿಷಯದಲ್ಲೂ ಧೈರ್ಯವಿದೆ. ಎರಡೂ ನಿಮ್ಮಲ್ಲಿ ಇದೆ. ಗುರುಕಿರಣ್ ತಲೆಯಲ್ಲಿ ಕೂದಲು ಇರುವವರೆಗೂ ಹೀಗೆ ಇರುತ್ತಾರೆ ಎಂದು ರವಿಚಂದ್ರನ್ ಹೇಳಿದರು. ನಿರ್ಮಾಪಕ ಯೋಗೀಶ್ ದ್ವಾರಕೀಶ್, ಅರ್ಜುನ್ ಗುರೂಜಿ, ಸೂರಪ್ಪಬಾಬು, ಡಾ.ನಾಗೇಂದ್ರ ಪ್ರಸಾದ್, ಗಾಯಕ ರೇವಂತ್, ನಿಧಿ ಸುಬ್ಬಯ್ಯ ಉಪಸ್ತಿತರಿದ್ದರು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಬರಲು ತಯಾರಾದಳು ರಂಗನಾಯಕಿ…

Previous article

ಕನ್ನಡಿಗರ ಹೆಮ್ಮೆಯ ಸಿನಿಮಾ ರಂಗನಾಯಕಿ!

Next article

You may also like

Comments

Leave a reply

Your email address will not be published. Required fields are marked *