ಎಂ. ಜಯರಾಮ್ ನಿರ್ದೇಶನದ ಬುದ್ಧಿವಂತ2 ಈಗ ಹೊಸ ರೂಪದಲ್ಲಿ ಬರಲು ತಯಾರಾಗಿದೆ. ಈಗ ಚಿತ್ರಕ್ಕೆ ಬಿ-2 ಅಂತಾ ಹೆಸರಿಡಲಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ಪೋಸ್ಟರ್ ವಿನ್ಯಾಸ ಕಲಾವಿದ ಅಶ್ವಿನ್ ರಮೇಶ್ ಬಿ-2 ಲೋಗೋವನ್ನು ರೂಪಿಸಿದ್ದಾರೆ. ಅಶ್ವಿನ್ ರಮೇಶ್ ಈ ವರೆಗೆ ವಿನ್ಯಾಸಗೊಳಿಸಿರುವ ಬಹುತೇಕ ಎಲ್ಲ ಸಿನಿಮಾಗಳ ಪೋಸ್ಟರ್ ಮತ್ತು ಟೈಟಲ್ ಅತ್ಯಂತ ಕ್ರಿಯಾಶೀಲವಾಗಿ ಮೂಡಿಬಂದಿವೆ. ಈಗ ಬಿ-2 ಚಿತ್ರದ ಪೋಸ್ಟರ್ ನೋಡಿದರೆ ಇದು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿದೆ ಅಂತಾ ಯಾರಿಗಾದರೂ ಅನ್ನಿಸದೇ ಇರೋದಿಲ್ಲ.
ಬುದ್ಧಿವಂತ-2 ಬಿಡುಗಡೆ ತಡವಾಗಲು ನಾನಾ ಕಾರಣಗಳಿವೆ. ದೊಡ್ಡ ಬಜೆಟ್ಟಿನ ಸ್ಟಾರ್ ಸಿನಿಮಾಗಳು ಈ ರೀತಿ ಲೇಟಾಗಿ ಬಂದು, ಸೂಪರ್ ಹಿಟ್ ಆದ ಸಾಕಷ್ಟು ನಿದರ್ಶನಗಳು ಕನ್ನಡದಲ್ಲೇ ಇವೆ. ಸದ್ಯ ಬಿ-2 ಹೆಸರಿನಲ್ಲಿ ಪ್ರಚಾರ ಪಡೆಯುತ್ತಿರುವ ಸಿನಿಮಾ ಸಂಪೂರ್ಣವಾಗಿ ಸಿದ್ದಗೊಂಡಿದೆ. ಉಪೇಂದ್ರ ಅವರೇ ನಿರ್ದೇಶಿಸಿ, ನಟಿಸಿರುವ ʻಯುಐʼ ತೆರೆಗೆ ಬಂದ ಆಸುಪಾಸಿನಲ್ಲೇ ಬಿ-2 ಕೂಡಾ ತೆರೆಗೆ ಬರಲಿದೆ.
ಉಪೇಂದ್ರ ಅಭಿನಯದ ಎಂ ಜಯರಾಮ್ ನಿರ್ದೇಶನದ ಬಿ-2 ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಪ್ರಮುಖ ವಿಲನ್ ಆಗಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಲ್ಲಿ ಶ್ರೀನಗರ ಕಿಟ್ಟಿ ಪ್ರಮುಖರು. ತೀರಾ ಸಣ್ಣ ವಯಸ್ಸಿಗೇ ನಟನಾವೃತ್ತಿಗಿಳಿದ ಕಿಟ್ಟಿ ರಂಗಭೂಮಿ, ಕಿರುತೆರೆಗಳನ್ನು ದಾಟಿ ಸಿನಿಮಾಗೆ ಬಂದವರು. ಆರಂಭದ ದಿನಗಳಲ್ಲಿ ಖಳನಟನಾಗಿ ಕಾಣಿಸಿಕೊಂಡ ಕಿಟ್ಟಿ ಹೀರೋ ಆಗದೇ ಉಳಿದಿದ್ದರೆ ಈ ಹೊತ್ತಿಗೆ ಬರೀ ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಬಿಡುವಿರದ ನಟನಾಗಿರುತ್ತಿದ್ದರು. ಹಾಗೆಂದು ಕಿಟ್ಟಿ ಹೀರೋ ಆಗಿ ಸೋತಿಲ್ಲ. ಹೀರೋ ಆಗಿದ್ದುಕೊಂಡೇ ಇನ್ನಿತರ ಲೀಡ್ ರೋಲ್ಗಳಲ್ಲೂ ನಟಿಸುತ್ತಾ ಬಂದಿದ್ದಾರೆ. ಈ ಚಿತ್ರದಲ್ಲಿ ಬುದ್ದಿವಂತನಿಗೇ ಟಕ್ಕರ್ ಕೊಡುವ ಪಾತ್ರ ಕಿಟ್ಟಿ ಅವರದ್ದು. ಮೈಂಡ್ ಗೇಮ್ ಕ್ರಿಯೇಟ್ ಮಾಡಿ, ಹೀರೋ ತಲೆಗೆ ಕೆಲಸ ಕೊಡುವ ಕೆಲಸ ಕಿಟ್ಟಿ ಪಾತ್ರ ಕೂಡಾ ಪವರ್ ಫುಲ್ ಆಗಿ ಮೂಡಿಬಂದಿದೆಯಂತೆ. ಶೂಟಿಂಗ್ ಸಮಯದಲ್ಲಿ ಕಿಟ್ಟಿ ಪಾತ್ರವನ್ನು ನೋಡಿದವರು ʻಅಬ್ಬಬ್ಬ ಭಯ ಹುಟ್ಟಿಸುವಂತೆ ನಟಿಸಿದ್ದಾರೆʼ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸಿಂಪಲ್ ಸುನಿ ನಿರ್ದೇಶನದ ಅವತಾರ್ ಪುರುಷ ಚಿತ್ರದಲ್ಲಿ ವಾಮಾಚಾರ ಮಾಡುವ ಮಂತ್ರವಾದಿಯ ಪಾತ್ರದಲ್ಲಿ ನಟಿಸಿದ್ದ ಕಿಟ್ಟಿ ಬಿ-2 ಮೂಲಕ ಮೇನ್ ವಿಲನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಟಿ.ಆರ್. ಚಂದ್ರಶೇಖರ್ ಅವರ ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ ನ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತಲೂ ಹೆಚ್ಚು ಬಜೆಟ್ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರ ಬಿ-2. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಸಾಕಷ್ಟು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಎಂ. ಜಯರಾಮ್ ‘ಬುದ್ಧಿವಂತ-2 ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದೇ ವರ್ಷ ಉಪ್ಪಿ ನಟನೆಯ ಎರಡು ಚಿತ್ರಗಳು ತೆರೆಗೆ ಬರೋದು ಖಚಿತವಾಗಿದೆ…
No Comment! Be the first one.