ಹಿಂದಿ ಸಿನಿಮಾಗಳ ವಿತರಣೆಯಲ್ಲಿ ದೊಡ್ಡ ಹೆಸರು ಮಾಡಿರುವ ಸಾಜಿದ್‌ ಈಗ ತಮ್ಮ ಮಗಳನ್ನು ನಾಯಕಿಯಾಗಿ ಪರಿಚಯಿಸುವ ಮಹತ್ವದ ಯೋಜನೆ ರೂಪಿಸಿದ್ದಾರೆ. ಮಿಥುನ್‌ ಚಕ್ರವರ್ತಿ ಕೂಡಾ ಒಂದು ಕಾಲದಲ್ಲಿ ಬಾಲಿವುಡ್‌ನ್‌ ದೊಡ್ಡ ಹೀರೋ ಅನ್ನಿಸಿಕೊಂಡಿದ್ದವರು. ತಮ್ಮ ಮಗಳ ಜೊತೆಗೆ ಮಿಥುನ್‌ ಪುತ್ರನನ್ನೂ ಇಂಟ್ರಡ್ಯೂಸ್‌ ಮಾಡುವ ಜವಾಬ್ದಾರಿಯನ್ನು ಸಾಜಿದ್‌ ವಹಿಸಿಕೊಂಡಿದ್ದಾರೆ.

ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿ ಮಗ ಕೂಡಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾನೆ. ರಾಜ್‌ ಕುಮಾರ್‌ ಸಂತೋಷಿ ನಿರ್ದೇಶನದ ʼಬ್ಯಾಡ್‌ ಬಾಯ್ʼ‌ ಮೂಲಕ ನಮಶಿ ಚಕ್ರವರ್ತಿಯ ಪಾದಾರ್ಪಣೆಯಾಗುತ್ತಿದೆ. ಈ ಸಿನಿಮಾವನ್ನು ನಿರ್ಮಿಸುವುದರ ಜೊತೆಗೆ ಖ್ಯಾತ ನಿರ್ಮಾಪಕ ಸಾಜಿದ್‌ ಖುರೇಷಿ ತಮ್ಮ ಮಗಳನ್ನೂ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ಸಾಜಿದ್‌ ಖುರೇಷಿ ಹೆಸರನ್ನು ಕನ್ನಡದ ಪ್ರೇಕ್ಷಕರು ಮರೆಯಲು ಸಾಧ್ಯವೇ ಇಲ್ಲ. ವರ್ಷಗಳ ಹಿಂದೆ ಕನ್ನಡದಲ್ಲಿ ನಾಗರಹಾವು ಹೆಸರಿನ ಸಿನಿಮಾ ಬಂದಿತ್ತಲ್ಲಾ? ತಂತ್ರಜ್ಞಾನ ಬಳಸಿ ಸಾಹಸ ಸಿಂಹ ವಿಷ್ಣುವರ್ಧನ್‌ ಅವರನ್ನು ಮರುಸೃಷ್ಟಿ ಮಾಡಲಾಗಿತ್ತು. ಆ ಚಿತ್ರವನ್ನು ನಿರ್ಮಿಸಿದ್ದ ಸಾಜಿದ್‌ ಅವರ ಮಗಳು ಅಮ್ರೀನ್‌ ಖುರೇಷಿ ಈಗ ಬ್ಯಾಡ್‌ ಬಾಯ್‌ ಸಿನಿಮಾದಲ್ಲಿ ನಮಶಿಗೆ ಜೋಡಿಯಾಗಿ ನಟಿಸುತ್ತಿರೋದು.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಬೇಕು ಅನ್ನೋ ಬಯಕೆಯಿಂದ ಸಾಜಿದ್‌ ನಾಗರಹಾವು ಚಿತ್ರವನ್ನು ತಯಾರು ಮಾಡಿದ್ದರು. ಆದರೆ ನಾಗರಹಾವು ಅಂದುಕೊಂಡ ಮಟ್ಟಕ್ಕೆ ಕೈ ಹಿಡಿಯಲಿಲ್ಲ. ಆದರೂ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳನ್ನು ನಿರ್ಮಿಸುವ ಪ್ಲಾನು ಸಾಜಿದ್‌ ಅವರದ್ದು. ಹಿಂದಿ ಸಿನಿಮಾಗಳ ವಿತರಣೆಯಲ್ಲಿ ದೊಡ್ಡ ಹೆಸರು ಮಾಡಿರುವ ಸಾಜಿದ್‌ ಈಗ ತಮ್ಮ ಮಗಳನ್ನು ನಾಯಕಿಯಾಗಿ ಪರಿಚಯಿಸುವ ಮಹತ್ವದ ಯೋಜನೆ ರೂಪಿಸಿದ್ದಾರೆ. ಮಿಥುನ್‌ ಚಕ್ರವರ್ತಿ ಕೂಡಾ ಒಂದು ಕಾಲದಲ್ಲಿ ಬಾಲಿವುಡ್‌ನ್‌ ದೊಡ್ಡ ಹೀರೋ ಅನ್ನಿಸಿಕೊಂಡಿದ್ದವರು. ತಮ್ಮ ಮಗಳ ಜೊತೆಗೆ ಮಿಥುನ್‌ ಪುತ್ರನನ್ನೂ ಇಂಟ್ರಡ್ಯೂಸ್‌ ಮಾಡುವ ಜವಾಬ್ದಾರಿಯನ್ನು ಸಾಜಿದ್‌ ವಹಿಸಿಕೊಂಡಿದ್ದಾರೆ.

ಜಯಂತಿ ಲಾಲ್‌ ಘಡ ಅವರೊಂದಿಗೆ ಸೇರಿ ನಿರ್ಮಿಸುತ್ತಿರುವ ಬ್ಯಾಡ್‌ ಬಾಯ್‌ ಈ ಕೊರೋನಾ ಬ್ಯಾಡ್‌ ಡೇಸ್‌ ಅಡ್ಡಗಾಲು ಹಾಕದಿದ್ದರೆ ಈ ಹೊತ್ತಿಗೆ ಸಂಪೂರ್ಣ ಚಿತ್ರೀಕರಣ ಪೈರೈಸಿರುತ್ತಿತ್ತು. ಈಗ ಮತ್ತೆ ಲಾಕ್‌ ಡೌನ್‌ ಮುಗಿದ ಮೇಲೆ ಮುಂದುವರೆಯಲಿದೆ. ಈ ಗ್ಯಾಪಿನಲ್ಲಿ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಗಿದೆ. ಸಲ್ಮಾನ್‌ ಖಾನ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ  ಬ್ಯಾಡ್‌ ಬಾಯ್‌ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿ ಶುಭ ಹಾರೈಸಿದ್ದಾರೆ. ʻಪೋಸ್ಟರ್‌ ತುಂಬಾ ಆಕರ್ಷಕವಾಗಿ ಮೂಡಿಬಂದಿದೆ. ಬಣ್ಣಗಳು ಮೋಹಕವಾಗಿವೆ. ಸಿನಿಮಾ ಕೂಡಾ ಇದೇ ರೀತಿ ಮೂಡಿಬರಲಿʼ ಎಂದು ಸಲ್ಲು ಆಶಿಸಿದ್ದಾರೆ.

ಇದು ನಾಯಕ-ನಾಯಕಿ ಇಬ್ಬರ ಮೊದಲ ಸಿನಿಮಾ ಆಗಿರುವುದರಿಂದ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸುವ ಜವಾಬ್ದಾರಿ ನಿರ್ದೇಶಕ ರಾಜ್‌ ಕುಮಾರ್‌ ಸಂತೋಷಿ ಅವರ ಮೇಲಿದೆ. ಹೀಗಾಗಿ ಕಥೆ, ಸಂಗೀತ, ಡ್ಯಾನ್ಸು, ಫೈಟುಗಳು ಸೇರಿದಂತೆ ಕಮರ್ಷಿಯಲ್‌ ಸಿನಿಮಾಗೆ ಬೇಕಾದ ಎಲ್ಲ ಅಂಶಗಳನ್ನೂ ಬೆರೆಸಿ ಪ್ರತಿಯೊಬ್ಬರಿಗೂ ಇಷ್ಟವಾಗುವಂತೆ ರೂಪಿಸುತ್ತಿದ್ದೇನೆ ಅಂತಾ ಸ್ವತಃ ರಾಜ್‌ ಕುಮಾರ್‌ ಸಂತೋಷಿ ಹೇಳಿಕೊಂಡಿದ್ದಾರೆ.

ಮಿಥುನ್‌ ಮಗ, ಸಾಜಿದ್‌ ಮಗಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಲಿ. ಆ ಮೂಲಕ ಭಾರತೀಯ ಚಿತ್ರರಂಗಕ್ಕೆ ಮುದ್ದಾದ ಜೋಡಿ ದಕ್ಕಲಿ…

CG ARUN

ದಿವಾಕರ್‌ ರೆಮಿಡೀಸ್!

Previous article

ರೆಬೆಲ್‍ತನವೇ ಅವರ ನಿಜವಾದ ಗುಣವಾಗಿತ್ತು!

Next article

You may also like

Comments

Leave a reply

Your email address will not be published. Required fields are marked *