ಗ್ರೀನ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ಪವನ್ ಮತ್ತು ಪ್ರಸಾದ್ ನಿರ್ದೇಶಿಸಿರುವ ಚಿತ್ರ ಬಡ್ಡಿಮಗನ್ ಲೈಫು. ಸಚಿನ್ ಶ್ರೀಧರ್, ಐಶ್ವರ್ಯಾ ರಾವ್ ಮುಖ್ಯ ಪಾತ್ರಗಳಲ್ಲಿರುವ ‘ಬಡ್ಡಿ ಮಗನ್ ಲೈಫ್’. ಅಕ್ಕಪಕ್ಕದ ಮನೆಗಳಲ್ಲಿ ನಡೆಯುವ ಸಹಜ ವಿಚಾರಗಳು, ಪ್ರೀತಿ, ಪ್ರೇಮ ಅದಕ್ಕೆ ಎದುರಾಗುವ ವಿರೋಧಗಳಂತಾ ವಿಚಾರಗಳನ್ನು ತೀರಾ ಭಿನ್ನ ಎನ್ನಿಸುವ ನಿರೂಪಣೆಯ ಮೂಲಕ ಕಟ್ಟಿಕೊಟ್ಟಿರುವ ಸಿನಿಮಾ ಇದು. ಇದೇ ಡಿಸೆಂಬರ್ ೨೭ರಂದು ತೆರೆಗೆ ಬರಲು ರೆಡಿಯಾಗಿರುವ ಬಡ್ಡಿಮಗನ್ ಲೈಫು ಚಿತ್ರದ ಟ್ರೇಲರ್ ಇದೀಗ ಅನಾವರಣಗೊಂಡಿದೆ. ಹರಿಕಥಾ ಪ್ರಸಂಗದ ನಿರೂಪಣೆಯೊಂದಿಗೆ ಇಡೀ ಚಿತ್ರದ ಸಾರವನ್ನು ತಿಳಿಸುವ ವಿನೂತನ ಪ್ರಯತ್ನ ಬಡ್ಡಿಮಗನ್ ಲೈಫು ಚಿತ್ರದ ಟ್ರೇಲರಿನಲ್ಲಿ ಮಾಡಲಾಗಿದೆ. ಮತ್ತು ಅದು ಅಷ್ಟೇ ಕ್ರಿಯಾಶೀಲವಾಗಿಯೂ, ಜನಮನ ಸೆಳೆಯುವಂತೆಯೂ ಮೂಡಿಬಂದಿರೋದು ವಿಶೇಷ.

ಇದನ್ನು ಸಿನಿಮಾ ಎನ್ನುವುದಕ್ಕಿಂತ ಒಂದು ಅನುಭವ ಎನ್ನಬಹುದು. ಪಕ್ಕದ ಮನೆಯಲ್ಲಿ ಏನೇ ನಡೆದರೂ ಅದಕ್ಕೆ ನೆರೆಹೊರೆಯವರಾಗಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೋ ಅದೇ ಅನುಭವ ಪ್ರೇಕ್ಷಕರಿಗೆ ಆಗಲಿದೆ ಎನ್ನುತ್ತಾರೆ ಪವನ್. ಕಥೆಗೆ ತಕ್ಕಂತೆ ಸಿಂಪಲ್ ಕಲಾವಿದರು ಇರಬೇಕು ಎಂಬ ಕಾರಣಕ್ಕೆ ಸಚಿನ್ ಮತ್ತು ಐಶ್ವರ್ಯಾರನ್ನು ಆಯ್ಕೆ ಮಾಡಿಕೊಳ್ಳಲಾಯಿತಂತೆ. ಮಧ್ಯಮವರ್ಗದ ಕುಟುಂಬ ಸಾಲ ಮಾಡಿ ಬಡ್ಡಿ ಕಟ್ಟಲು ಸಾಧ್ಯವಾಗದೆ ಇದ್ದಾಗ ಏನಾಗುತ್ತದೆ ಎಂಬ ಅಂಶ ಕೂಡ ಈ ಚಿತ್ರದಲ್ಲಿದೆ. ಹದಿನಾರನೇ ವಯಸ್ಸಿನ ಪ್ರಬುದ್ಧತೆ ಇಲ್ಲದ ಹುಡುಗಿಯ ಪಾತ್ರ ಮಾಡಿದ್ದೇನೆ. ಹಾಡುಗಳ ಮೂಲಕ ನಮ್ಮ ಚಿತ್ರ ಸೌಂಡು ಮಾಡುತ್ತಿದೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಐಶ್ವರ್ಯಾ. ಚಾಮುಂಡಿ ಬೆಟ್ಟದ ಆಸುಪಾಸಿನಲ್ಲೇ ಶೇ.೭೦ ಭಾಗ ಶೂಟಿಂಗ್ ಮಾಡಿರುವುದು ವಿಶೇಷ. ಬದುಕಿನಲ್ಲಿ ಎದುರಾಗುವ ಸಂದರ್ಭಗಳೇ ಒಬ್ಬ ವ್ಯಕ್ತಿಯನ್ನು ಹೀರೋ ಅಥವಾ ವಿಲನ್ ಆಗಿಸುತ್ತವೆ. ಅದನ್ನೇ ಹಾಸ್ಯಮಯವಾಗಿ ಹೇಳಿದ್ದೇ ಎಂಬುದು ಚಿತ್ರತಂಡ ನೀಡುವ ವಿವರಣೆ.

ಪೂರ್ಣಚಂದ್ರ ತೇಜಸ್ವಿ ಮತ್ತು ಆಶಿಕ್ ಅರುಣ್ ಜತೆಯಾಗಿ ಸಂಗೀತ ಸಂಯೋಜಿಸಿದ್ದಾರೆ. ಲವಿತ್ ಛಾಯಾಗ್ರಹಣ ನಿಭಾಯಿಸಿದ್ದಾರೆ. ಬಾಲರಾಜ್ ವಾಡಿ, ರಜನಿಕಾಂತ್, ವನಿತಾ, ಅರ್ಜುನ್ ಸುಹಾಸ್ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಈ ಸಿನಿಮಾದಲ್ಲೂ ಪಾತ್ರವನ್ನೂ ನಿರ್ವಹಿಸಿರೋದು ವಿಶೇಷ. ಸದ್ಯಕ್ಕೆ ಬಡ್ಡಿಮಗನ್ ಲೈಫು ಚಿತ್ರದ ಟ್ರೇಲರ್ ನೋಡಿ. ನಿಮಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ…

CG ARUN

ಜಂಟಲ್ ಮನ್ ಮೊದಲ ಲಿರಿಕಲ್ ಹಾಡು ಡಿಸೆಂಬರ್ ೧೮ಕ್ಕೆ!

Previous article

ದರ್ಶನ್ ಹಾಗಂದಿದ್ದು ಯಾರ ಕುರಿತು?

Next article

You may also like

Comments

Leave a reply

Your email address will not be published. Required fields are marked *