ಬಾಲಕೃಷ್ಣ ಅವರು ತಮ್ಮ ಮುಂದಿನ ಸಿನಿಮಾವನ್ನು ಕೆ.ಎಸ್. ರವಿಕುಮಾರ್ ಜತೆಗೆ ಮಾಡಲಿರುವುದು ಹಳೆಯ ಸುದ್ದಿ. ಈ ಸಿನಿಮಾವು ಮೇ 17ಕ್ಕೆ ಸೆಟ್ಟೇರಿ ಮುಂದಿನ ಪೊಂಗಲ್ ಗೆ ರಿಲೀಸ್ ಆಗುವ ಸಾಧ್ಯತೆ ಇದೆ. ಸದ್ಯದ ಸುದ್ದಿ ಏನಪ್ಪಾ ಅಂದ್ರೆ ಬಾಲಕೃಷ್ಣ ಅವರ ಮುಂದಿನ ಸಿನಿಮಾದಲ್ಲಿ ಜಗಪತಿ ಬಾಬು ಬಾಲಕೃಷ್ಣ ಅವರ ಮುಂದೆ ತೊಡೆತಟ್ಟಲಿದ್ದಾರಂತೆ. ಹೌದು ಜಗಪತಿ ಬಾಬು ಮತ್ತು ಬಾಲಕೃಷ್ಣ ಅವರ ಕಾಂಬೋ ಕಾಂಬಿನೇಷನ್ನಿನಲ್ಲಿ ಈ ಸಿನಿಮಾವು ಮೂಡಿಬರಲಿದೆ.
ಪ್ರಸ್ತುತ ಜಗಪತಿ ಬಾಬು ಮಹೇಶ್ ಬಾಬು ರವರ ಮಹರ್ಶಿ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಜಗಪತಿ ಬಾಬು ಬತ್ತಳಿಕೆಯಲ್ಲಿ ಅನೇಕ ಬಿಗ್ ಬಜೆಟ್ ನ ಸಿನಿಮಾಗಳು ಇವೆ. ಕಳೆದ ವರ್ಷ ಜಗಪತಿ ಬಾಬು ರಂಗಸ್ಥಳಂ ಮತ್ತು ಅರವಿಂದ ಸಮೀತ ಸಿನಿಮಾದಲ್ಲಿ ನಟಿಸಿದ್ದು, ಅವರ ವೃತ್ತಿ ಜೀವನದಲ್ಲಿ ಬಹು ವಿಶೇಷವಾದ ಚಿತ್ರಗಳಾಗಿದ್ದವವು.
No Comment! Be the first one.