ತಾವೆಷ್ಟೇ ಬ್ಯುಸಿಯಾಗಿದ್ದರೂ ಹೊಸಬರಿಗೆ ಸದಾ ಸಾಥ್ ನೀಡೋದು ದರ್ಶನ್ ಅವರ ವ್ಯಕ್ತಿತ್ವ. ಹಾಗಿರೋವಾಗ ಅವರು ತಮ್ಮ ಶಿಷ್ಯನ ಚಿತ್ರಕ್ಕೆ ಪ್ರೋತ್ಸಾಹ ಕೊಡದಿರುತ್ತಾರಾ? ಬಜ಼ಾರ್ ಚಿತ್ರದ ನಾಯ ಧನ್ವೀರ್ ಹಾರ್ಡ್ಕೋರ್ ದರ್ಶನ್ ಫ್ಯಾನ್ ಎಂಬುದು ಗೊತ್ತೇ ಇದೆ. ಇದೀಗ ಖುದ್ದು ದರ್ಶನ್ ಬಜ಼ಾರ್ ಚಿತ್ರವನ್ನ ನೋಡಿ ಧನ್ವೀರ್ ಬೆನ್ತಟ್ಟಿದ್ದಾರೆ.
ನೆನ್ನೆ ಜಿ ಟಿ ಮಾಲ್ನಲ್ಲಿ ದರ್ಶನ್ ಬಜ್ಷಾರ್ ಚಿತ್ರವನ್ನ ವೀಕ್ಷಿಸಿದ್ದಾರೆ. ಇದರ ಖಡಕ್ ಡೈಲಾಗ್, ಚೆಂದದ ಕಥೆ ಮತ್ತು ಧನ್ವೀರ್ ಅಭಿನಯವನ್ನ ಮೆಚ್ಚಿಕೊಂಡಿದ್ದಾರೆ. ತಮ್ಮ ಆರಾಧ್ಯ ನಟನೇ ಬಂದು ತನ್ನ ಚಿತ್ರವನ್ನ ನೋಡಿ ಹರಸಿದ್ದರಿಂದಾಗಿ ಧನ್ವೀರ್ ಕೂಡಾ ಖುಷಿಗೊಂಡಿದ್ದಾರೆ.
ಕೇವಲ ಹಣ ವೊಂದಿದ್ದರೆ ಸಿನಿಮಾ ಮಾಡಿ ಬಿಡಬಹುದು, ಹೀರೋ ಕೂಡಾ ಆಗಬಹುದು ಅಮದುಕೊಂಡವರು ಅನೇಕರಿದ್ದಾರೆ. ಆದರೆ ಬಜ಼ಾರ್ ನಾಯಕ ಧನ್ವೀರ್ ಮಾತ್ರ ಕೊಂಚ ಡಿಫರೆಂಟು. ಮಾಮೂಲಿಯಾಗಿದ್ರೆ ಅವರೂ ಕೂಡಾ ಸಾಮಾನ್ಯ ಮೆಂಟಾಲಿಟಿಯನ್ನೇ ಹೊಂದಿರುತ್ತಿದ್ದರೇನೋ. ಆದರೆ ಖ್ಯಾತ ನಟನ ಮಗನಾಗಿದ್ದರೂ ಕಷ್ಟಪಟ್ಟು ಮೇಲೆ ಬಂದಿರೋ ಚಾಲೆಂಜಿಂಗ್ ಸ್ಟಾರ್ ಆರಂಭದಿಂದಲೂ ಧನ್ವೀರ್ ಪಾಲಿಗೆ ಸ್ಫೂರ್ತಿ.
ಆದ್ದರಿಂದಲೇ ದರ್ಶನ್ ಜೀವನಗಾಥೆಯ ಮೂಲಕ ಧನ್ವೀರ್ಗೆ ಶ್ರಮ ವಹಿಸದೇ ಏನು ಮಾಡಲೂ ಸಾಧ್ಯವಿಲ್ಲ ಅನ್ನೋ ವಿಚಾರ ಮನದಟ್ಟಾಗಿತ್ತು. ಈ ಕಾರಣದಿಂದಲೇ ನಟನೆ ಸೇರಿದಂತೆ ನಾನಾ ವಿಚಾರಗಳಲ್ಲಿ ಪಳಗಿಕೊಂಡು ನಂತರವಷ್ಟೇ ನಾಯಕನಾಗುವ ಪ್ರಯತ್ನ ಕೈಗೊಂಡವರು ಧನ್ವೀರ್. ಅವರೇ ಹೇಳೋ ಪ್ರಕಾರ ದರ್ಶನ್ ಅಂದ್ರೆ ಅವರ ಪಾಲಿದೆ ಸಾಕ್ಷಾತ್ತು ದೇವರಿದ್ದಂತೆ. ಇಂಥಾ ಪ್ರೀತಿಗೆ ಬೆಲೆ ಕೊಟ್ಟಿರೋ ದರ್ಶನ್ ಬಜ಼ಾರ್ ಆಡಿಯೋ ಬಿಡುಗಡೆ ಮಾಡಿ ಪ್ರೋತ್ಸಾಹಿಸಿದ್ದರು. ಇದೀಗ ಚಿತ್ರವನ್ನೂ ನೋಡಿ ಹರಸಿದ್ದಾರೆ.
#
No Comment! Be the first one.