ಶ್ರೇಯಸ್ ಅಭಿನಯದ ಪಡ್ಡೆಹುಲಿ ಹಾಡು ನಿರೀಕ್ಷೆಯಂತೆಯೆ ಗೆದ್ದಿದೆ. ನಾ ತುಂಬಾ ಹೊಸಬ ಬಾಸು ಎಂಬ ಈ ಹಾಡನ್ನು ಕೆ ಮಂಜು ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಅರ್ಪಿಸಿದ್ದರು. ಇದೀಗ ಈ ಹಾಡು ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ. ಒಟ್ಟಾರೆಯಾಗಿ ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಯ ಈ ಸಾಂಗ್ ಎಂಥವರೂ ಮರುಳಾಗುವಂತೆ ಮೂಡಿ ಬಂದಿದೆ. ಬಿಡುಗಡೆಯಾಗಿ ದಿನ ಕಳೆಯುವಷ್ಟರಲ್ಲಿಯೇ ಪಡೆದುಕೊಂಡಿರುವ ವೀಕ್ಷಣೆ, ಬಂದಿರೋ ಪ್ರತಿಕ್ರಿಯೆಗಳೇ ಎಲ್ಲವನ್ನೂ ಹೇಳುತ್ತಿವೆ. ಚಿತ್ರರಂಗದ ಅನೇಕರು ಕೂಡಾ ಈಗಾಗಲೇ ಈ ಹಾಡನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂತೂ ಈ ಹಾಡಿಗೆ ಫಿದಾ ಆಗಿದ್ದಾರೆ. ನಾ ತುಂಬಾ ಹೊಸಬ ಬಾಸು ಹಾಡನ್ನು ಎಷ್ಟು ಪ್ರೀತಿಯಿಂದ ನಿರ್ಮಾಘಣ ಮಾಡಿದ್ದಾರೆಂಬುದು ಯಾರಿಗಾದರೂ ತಿಳಿಯುತ್ತೆರ. ಚಿತ್ರರಂಗಕ್ಕೆ ಹತ್ತಾರು ಜನ ಬರ್ತಾರೆ. ಆದರೆ ಅದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಮಾಡಿಕೊಂಡು ಬರುವವರು ವಿರಳ. ಶ್ರೇಯಸ್ ಅಂಥಾ ತಯಾರಿ ಮಾಡಿಕೊಂಡೇ ಬಂದಿರೋದು ಮೆಚ್ಚಿಕೊಳ್ಳೋ ವಿಚಾರ. ಅವರಿಗೆರ ಮತ್ತು ಇಡೀ ಚಿತ್ರತಂಡಕ್ಕೆ ಒಳಿತಾಗಲಿ. ಪಡ್ಡೆಹುಲಿ ಸಿನಿಮಾ ಭರ್ಜರಿ ಸಕ್ಸಸ್ ಕಾಣಲಿ ಅನ್ನೋ ಹಾರೈಕೆಯನ್ನೂ ದರ್ಶನ್ ಮಾಡಿದ್ದಾರೆ.
#