ಸಣ್ಣದೊಂದು ಸೂಚನೆಯನ್ನೂ ನೀಡದೆ ದಿಗ್ಗನೆ ಬರುವ ಸಿನಿಮಾಗಳು, ಹಾಡುಗಳು ಅಷ್ಟೇ ಯಾಕೆ ಸಿನಿಮಾವೊಂದರ ಪ್ರೋಮೋಗಳು ಭಾರೀ ಸದ್ದು ಮಾಡಿಬಿಡುತ್ತವೆ. ಹಾಗೆ ಸಿನಿಮಾ ಆರಂಭಕ್ಕೆ ಮುನ್ನವೇ, ಯಾವ ಸ್ಟಾರ್ ನಟ-ನಟಿಯರ ಹೆಸರಿಲ್ಲದೆ, ಹೆಸರು ಮಾಡಿದ ನಿರ್ದೇಶಕರ ಅಗತ್ಯವಿಲ್ಲದೆ ಪ್ರಚಾರ ಪಡೆದಿದ್ದ ಚಿತ್ರ ಸಿಂಪಲ್ಲಾಗೊಂದ್ ಲವ್ ಸ್ಟೋರಿ. ಆ ಚಿತ್ರ ಬಂದಾಗ ಸುನಿಲ್ ಚಿತ್ರರಂಗಕ್ಕೆ ತೀರಾ ಹೊಸಬರು. ಸುನಿಲ್ಗೆ ಅದು ಮೊದಲ ಸಿನಿಮಾ. ಆದರೆ ಆ ಚಿತ್ರದ ಪ್ರೋಮೋ ನೋಡಿದವರಿಗೆ ಅದು ಮೊದಲ ನಿರ್ದೇಶಕನ ಕೆಲಸ ಅನ್ನಿಸಲು ಸಾಧ್ಯವಿರಲಿಲ್ಲ್ಲ. ಯಾರೋ ಕಸುಬು ಕಲಿತ ನಿರ್ದೇಶಕನ ಕೆಲಸವಿರಬೇಕು ಎನ್ನುವಷ್ಟರ ಮಟ್ಟಿಗೆ ಮೂಡಿಬಂದಿತ್ತು.
ಆನಂತರ ಬಹುಪರಾಕ್, ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ, ಆಪರೇಷನ್ ಅಲಮೇಲಮ್ಮ, ಚಮಕ್ ಮತ್ತು ಇದೀಗ ಬಜ಼ಾರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಐದಾರು ಸಿನಿಮಾಗಳನ್ನು ಡೈರೆಕ್ಟ್ ಮಾಡೋದು ಸಿಂಪಲ್ಲಾದ ವಿಚಾರವಲ್ಲ. ತೀರಾ ಸಣ್ಣ ವಯಸ್ಸಿಗೇ ಚಿತ್ರರಂಗದಲ್ಲಿ ಇಷ್ಟೊಂದು ಕೆಲಸ ಮಾಡಿರುವ ಸುನಿ ಬಗೆಗಿನ ವಿವರ, ಅವರು ನಡೆದು ಬಂದ ಹಾದಿಯ ಸಣ್ಣ ‘ಸ್ಟೋರಿ’ ಇಲ್ಲಿದೆ..
ಅಷ್ಟಕ್ಕೂ ಸಿಂಪಲ್ಲಾಗ್ ಒಂದ್ ಲವ್ಸ್ಟೋರಿಯ ನಿರ್ದೇಶಕ ಸುನಿಲ್ಗೆ ವಯಸ್ಸಿನ್ನೂ ಮೂವತ್ತರ ಆಜುಬಾಜನಿರಬಹುದು. ಇವರತಂದೆ ನರಸಿಂಹಯ್ಯ ಸಬ್ಇನ್ಸ್ಪೆಕ್ಟರ್ಆಗಿದ್ದವರು. ಸೋಲದೇವನಹಳ್ಳಿ ಠಾಣೆಯಲ್ಲಿ ಸಬ್ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ಯಾವ ಕಷ್ಟವೂ ಗೊತ್ತಾಗಂದಂತೆ ಇವರ ತಂದೆ ನರಸಿಂಹಯ್ಯ ಮತ್ತು ತಾಯಿ ವಿಜಯಲಕ್ಷ್ಮಿ ಬೆಳೆಸಿದ್ದರಾದರೂ ಚಿತ್ರರಂಗಕ್ಕೆ ಬಂದು ಮಣ್ಣು ಹೊರಬೇಕು ಎಂದು ತೀರ್ಮಾನಿಸಿ, ಕಷ್ಟವನ್ನು ಮೈಮೇಲೆಳೆದುಕೊಂಡವರು ಸುನಿಲ್.
ಯೋಗರಾಜ್ ಭಟ್ಟರ ಕಥೆಯೊಂದು ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದ್ದೇ, ಅವರ ಸಿನಿಮಾ ಹುಚ್ಚಿಗೆ ಕಾರಣವಾಯಿತಂತೆ. ಹಾಗೆಯೇ ಶಾಲಾ ದಿನಗಳಲ್ಲಿ ಈತ ಬರೆದಕವಿತೆಗೆ ಬಂದ ಬಹುಮಾನವೇ ಸುನಿಲ್ನನ್ನುಇಲ್ಲೀತನಕತಂದು ನಿಲ್ಲಿಸಿದೆ. ಹೇಗೂ ನಾನು ಬರೆದಕವಿತೆಗೆ ಪ್ರೈಜು ಬಂದಿದೆ. ನಾನ್ಯಾಕೆ ಸಿನಿಮಾ ಸಾಂಗ್ ಬರೀಬಾರ್ದು ಅಂತಾತಲೆಗೆ ಹೊಸಾ ಹುಳಾ ಬಿಟ್ಟುಕೊಂಡ ಸುನೀಲ್ ಸಿಕ್ಕ ಸಿಕ್ಕ ನಿರ್ದೇಶಕರ ಬಳಿ ಅಲೆದು ಹಾಡು ಬರೆಯಲುಛಾನ್ಸು ಕೇಳಿದ್ದೇ ಕೇಳಿದ್ದು. ಆದರೆ ಅವಕಾಶವನ್ನು ಯಾರೂಕೊಡಲಿಲ್ಲ. ಕೆಎಲ್ಇ ಕಾಲೇಜಿನಲ್ಲಿ ಕೆಮಿಸ್ಟ್ರಿ, ಬಾಟ್ನಿ, ಬಯೋಟೆಕ್ನಾಲಜಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಬಿಎಸ್ಸಿ ಮುಗಿಸಿದರೂ ಮನಸ್ಸು ವಾಲುತ್ತಿದ್ದುದು ಮಾತ್ರ ಚಿತ್ರರಂಗದತ್ತ.
ಕಡೆಗೆ ಆಗಿದ್ದಾಗಲಿ ಎಂದುಚಿತ್ರರಂಗದ ಸಹವಾಸಕ್ಕೆ ಬಿದ್ದ ಸುನೀಲ್ಗೆ ಮೊದಲ ಅವಕಾಶ ಸಿಕ್ಕಿದ್ದು ಕಣಗಾಲ್ ಪುಟ್ಟಣ್ಣರ ಶೈಲಿಯ ಸಿನಿಮಾಗಳನ್ನು ತೆಗೆಯಬೇಕು ಎಂದ ಇವತ್ತಿಗೂ ಹಠ ಹಿಡಿದುಒದ್ದಾಡುತ್ತಿರುವ ನಿರ್ದೇಶಕ ಎಸ್. ಶಿವರಾಜ್ ಹೊಸಕೆರೆ ಬಳಿ. ಹೊಸಕೆರೆಯವರೊಂದಿಗೆ ‘ತಾರೆ? ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ನೇಮಕಗೊಂಡ ಸುನೀಲ್ಅಲ್ಲೊಂದಿಷ್ಟು ಕೆಲಸ ಕಲಿತ. ಚಂದ್ರಚೂಡ್ ಚಕ್ರವರ್ತಿಯವರೊಂದಿಗೆ ‘ಜನ್ಮ ತಂಡದೊಂದಿಗೂ ಕೆಲಸ ಮಾಡಿ ನಂತರ ಹೋಗಿ ಸೇರಿದ್ದು ದಿನೇಶ್ ಬಾಬು ಪಾಳೆಯಕ್ಕೆ. ದಿನೇಶ್ ಬಾಬುರೊಂದಿಗೆ ಜನುಮಜನುಮದಲ್ಲೂ, ಜನುಮದಾ ಗೆಳತಿ, ಸ್ಕೂಲ್ ಮಾಸ್ಟರ್, ಎರಡನೇ ಮದುವೆ ಚಿತ್ರಗಳಲ್ಲಿ ಸಹಾಯಕನಾಗಿ ದುಡಿದ ಸುನೀಲ್ ಬಾಬು ಯೂನಿವರ್ಸಿಟಿಯಲ್ಲಿ ಕಲಿತಿದ್ದು ಅಪಾರ. ಅಲ್ಲಿಟೆಕ್ನಿಕಲ್ ಆಗಿ ಕಲಿಯಲಿಕ್ಕೆ ಆಗದಿದ್ದರೂ ಡಿಸಿಪ್ಲೀನ್, ಟೈಮ್ಸೆನ್ಸ್, ಸ್ಕ್ರಿಪ್ಟು, ಬಜೆಟ್ಗೆ ತಕ್ಕಹಾಗೆ ಹೇಗೆ ಸಿನಿಮಾ ಮಾಡಬಹುದು ಎಂಬ ವಿಚಾರಗಳನ್ನು ಹೆಚ್ಚು ಅರ್ಥ ಮಾಡಿಕೊಂಡ.
ನಂತರ ಚಿತ್ರ ನಿರ್ದೇಶನದ ಕನಸು ಕಂಡ ಸುನಿಲ್ ಅದರ ಪೂರ್ವಭಾವಿ ತಯಾರಿಎಂಬಂತೆ ‘ಇವನೊಬ್ಬನೇ, ‘ಕಾಲೇಜಿನೊಳಗೆ, ತಪ್ಪಾಗಿ ಹುಟ್ಟಿದವನು, ಏನು ಮಾಡಿದರೂ ತಪ್ಪುತಪ್ಪಾಗೇ ಘಟಿಸುವ ಸನ್ನಿವೇಷಗಳ ‘ತೂತು ನಿರೋಧ್ ಎಂಬ ಶಾರ್ಟ್ ಫಿಲಂಗಳನ್ನು ತಯಾರಿಸಿದ. ಈ ಕಿರುಚಿತ್ರಗಳನ್ನು ಯಾರಾದರೂ ನಿರ್ಮಾಪಕರಿಗೆ ತೋರಿಸಿ ಅವಕಾಶ ಪಡೆಯುವ ಪ್ಲಾನು ಸುನಿಲ್ದಾಗಿತ್ತು. ದುರಾದೃಷ್ಟಕ್ಕೆ ಎರಡು ವರ್ಷಗಳ ಮುನ್ನ ಹಿರಿಸಾವೆಯಿಂದ ಬೆಂಗಳೂರಿಗೆ ಬರುವಾಗ ಆ ಶಾರ್ಟ್ ಫಿಲಂಗಳು ಸ್ಟೋರ್ಆಗಿದ್ದ ಲ್ಯಾಪ್ಟಾಪ್ ಕಳೆದುಹೋಯಿತಂತೆ. ನಿರ್ಮಾಪಕರನ್ನು ಸೆಳೆಯಲು ಇದ್ದ ಕಿರುಚಿತ್ರಗಳನ್ನೂ ಕಳೆದುಕೊಂಡ ಸುನಿಲ್ ಮುಂದಿನ ದಿಕ್ಕು ಕಾಣದಂತಾಗಿದ್ದರು.
ಆದರೂ ಕನಸುಗಳನ್ನು ಕಳೆದುಕೊಳ್ಳದ ಸುನಿಲ್ ತನ್ನ ಗೆಳೆಯರ ಸಹಕಾರ, ಸ್ಕೂಲ್ ಟೀಚರ್ ಆಗಿರುವ ಅಕ್ಕ ಹರ್ಷಶ್ರೀಯವರ ಬೆಂಬಲದೊಂದಿಗೆ ಮತ್ತೆ ಹುಡುಕಾಟ ಆರಂಭಿಸಿದರು. ನಿರ್ಮಾಪಕ ಸಿಕ್ಕ ಕೂಡಲೇ ‘ಹಂಡ್ರೆಡ್ ಡೇಸ್ ಸಿನಿಮಾ ಆಗುತ್ತೆ. ಇಂಥಕಥೆ ಎಲ್ಲೂ ಬಂದಿಲ್ಲ. ನೀವು ಹಾಕಿದ ಬಂಡವಾಳದ ನಾಲ್ಕು ಪಟ್ಟು ದುಡ್ಡು ಗ್ಯಾರೆಂಟಿ ಎಂದೆಲ್ಲಾ ಅಟ್ಟಕ್ಕೇರಿಸಿ ಅವಕಾಶ ಪಡೆಯುವುದು ಈಚೆಗೆ ನಿರ್ದೇಶಕರಾಗುತ್ತಿರುವವರ ಮಾಮೂಲಿ ವರಸೆ. ಆದರೆ ಸುನಿಲ್ ಹಾಗೆ ಮಾಡಿದವರಲ್ಲ. ‘ನನ್ನ ಸಿನಿಮಾ ಏನಾಗುತ್ತೋ ಗೊತ್ತಿಲ್ಲ? ಥಿಯೇಟರ್ ಬಾಡಿಗೆಯನ್ನೂ ಕೈಯಿಂದ ಕೊಡುವ ಹಾಗೆ ಮಾಡೋದಿಲ್ಲ. ಹಾಕಿದ ಬಂಡವಾಳವನ್ನಾದರೂ ವಾಪಾಸು ಬರುವಂತೆ ಸಿನಿಮಾ ಮಾಡ್ತೀನಿ ಎಂದು ಪ್ರಾಮಾಣಿಕವಾಗಿ ಹೇಳುತ್ತಿದ್ದ. ಸುನಿಲ್ನ ಪ್ರಾಮಾಣಿಕ ಮಾತುಗಳು ನಿರ್ಮಾಪಕರಿಗೆರುಚಿಸುತ್ತಿರಲಿಲ್ಲ. ಹೀಗೆ ನಿರ್ಮಾಪಕರು ಒಪ್ಪದಿದ್ದಾಗಕಣ್ಣೀರು ಬಂದರೂ, ಬೈಕ್ನಲ್ಲಿ ಪೆಟ್ರೋಲ್ ಕಾಲಿ ಆಗಿ ತಳ್ಳುವ ಪರಿಸ್ಥಿತಿ ಬಂದರೂ ಇದೆಲ್ಲಾ ಬದುಕಿನ ಪಾಠಗಳು ಎಂದುತನ್ನಷ್ಟಕ್ಕೆ ತಾನೇ ಸಮಾಧಾನ ಪಟ್ಟುಕೊಳ್ಳುತ್ತಿದ್ದ ಹುಡುಗ ಸುನಿಲ್.
ಹೀಗೆ ನಿರ್ಮಾಪಕರನ್ನು ಹುಡುಕುತ್ತಾಕೂತರೆ ಆಗುವುದಿಲ್ಲ ಎನ್ನುವುದನ್ನುಅರಿತ ಸುನೀಲ್ ಚೆಡ್ಡಿ ಹಾಕುವ ಮುನ್ನವೇ ಸ್ನೇಹಿತರಾಗಿದ್ದ ಹೇಮಂತ್ರೆಡ್ಡಿ ಬಳಿ ಸಾಲ ಪಡೆದು ಸಿನಿಮಾ ಮಾಡಲು ಮುಂದಾದರು. ಆಗ ಹುಟ್ಟಿದ್ದೇ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ! ಈಗ ಸುನಿ ವರ್ಷಕ್ಕೊಂದು ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೊಸ ಹುಡುಗರನ್ನೂ ತೆರೆ೩ಗೆ ಪರಿಚಯಿಸಿ, ಗೆಲ್ಲಿಸುವ ಮೂಲಕ ಸ್ಟಾರ್ ಮೇಕರ್ ಆಗಿದ್ದಾರೆ. ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶಿಸಿ ಸ್ಟಾರ್ ಡೈರೆಕ್ಟರ್ ಅಂತಲೂ ಕರೆಸಿಕೊಳ್ಳುತ್ತಿದ್ದಾರೆ. ಅದೆಲ್ಲ ಏನೇ ಆಗಲಿ ಸಿಂಪಲ್ ಸುನಿ ಅವರ ಸ್ಟಾರು ಯಾವತ್ತಿಗೂ ಮಿನುಗುತ್ತಲೇ ಇರಲಿ.
#
No Comment! Be the first one.