ನಾನು ಸಿನಿಮಾದಲ್ಲಿ ಲಾಂಚ್ ಆಗಬೇಕು ಅಂತಾ ತೀರ್ಮಾನಿಸಿದ ಮೇಲೆ ಒಂದೊಳ್ಳೆ ಕಥೆಗಾಗಿ ಹುಡುಕಾಡುತ್ತಿದ್ದೆ. ನನಗೆ ಮಾಸ್ ಅಪೀಲ್ ಇದ್ದು ಅದರ ಜೊತೆಗೆ ಲವ್ವು, ಸೆಂಟಿಮೆಂಟು, ಫ್ಯಾಮಿಲಿ ಓರಿಯಂಟೆಂಡ್ ಸಬ್ಜೆಕ್ಟ್ ಬೇಕಿತ್ತು. ಸುನಿ ಸರ್ ಹತ್ರ ಪ್ರೋಚ್ ಮಾಡಿದಾಗ ನನಗೆ ಬೇಕಿದ್ದ ಕಥೆ ಅವರ ಬಳಿಯಿತ್ತು. ಬಹುಮುಖ್ಯವಾಗಿ ಆ ಕಥೆಗೆ ನಾನು ಸೂಟ್ ಆಗುತ್ತಿದ್ದೆ. ಈ ಕಾರಣದಿಂದ ‘ಬಜ಼ಾರ್’ ಶುರು ಮಾಡಿದ್ವಿ. ನಾನು ಸಿನಿಮಾ ಶುರು ಆಗೋಕೆ ಮುಂಚೆ ಸಹಾ ಜಿಮ್ ಮಾಡಿ ಬಾಡಿ ಬಿಲ್ಡ್ ಮಾಡಿದ್ದೆ. ಈ ಸಂದರ್ಭದಲ್ಲಿ ಬಜ಼ಾರ್ ಹಾಡಿಗಾಗಿ ಥಾಯ್ಲೆಂಡ್ಗೆ ಹೋಗಬೇಕಿತ್ತು. ಆಗ ಸುನಿ ಸರ್ ‘ಇಷ್ಟೆಲ್ಲಾ ಕಷ್ಟಪಟ್ಟು ಬಾಡಿ ಬಿಲ್ಡ್ ಮಾಡಿದ್ದೀಯ. ನೀನ್ಯಾಕೆ ಅದನ್ನು ಎಕ್ಸ್ಪೋಸ್ ಮಾಡಬಾರದು’ ಅಂದ್ರು.. ಆಗ ಮತ್ತೆ ಇಪ್ಪತ್ತೇಳು ದಿನ ಸಮಯ ತೆಗೆದುಕೊಂಡು ಸಿಕ್ಸ್ ಪ್ಯಾಕ್ ಬಿಲ್ಡ್ ಮಾಡಿದೆ. ಕಷ್ಟ ಪಟ್ಟಿದ್ದು ಸಾರ್ಥಕವಾಯಿತು ಅನ್ನಿಸ್ತಿದೆ. ಯಾಕಂದ್ರೆ ‘ಏಕೋ ಏನೋ’ ಅನ್ನೋ ಆ ಹಾಡು ತುಂಬಾನೇ ಚನ್ನಾಗಿ ಕಾಣಿಸ್ತಿದೆ!
ಇದು ಔಟ್ ಅಂಡ್ ಔಟ್ ಮಾಸ್ ಸಬ್ಜೆಕ್ಟು. ಐಧಾರು ಫೈಟುಗಳಿವೆ. ಪಾರಿವಾಳಗಳಿಂದ ಶುರುವಾಗೋ ಕಥೆಯಿಂದ ಹುಡುಗರು ಹೇಗೆ ರೌಡಿಸಂಗೆ ಎಂಟ್ರಿ ಕೊಡುತ್ತಾರೆ ಅನ್ನೋದು ಈ ಸಿನಿಮಾದ ಪ್ರಧಾನ ಎಳೆ.
ನನಗೆ ಡಿ ಬಾಸ್ ದರ್ಶನ್ ಸರ್ ಅಂದ್ರೆ ಪ್ರಾಣ. ನನಗೆ ಸಿನಿಮಾರಂಗದಲ್ಲಿ ಯಾರಾದರೂ ಮಾದರಿ ಅಂದರೆ ಅದು ಅವರೇ. ದರ್ಶನ್ ಸರ್ ನನ್ನನ್ನು ಕರೆದು ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದೀಯ. ಇದನ್ನು ಹೀಗೆ ಬೆಳೆಸಿಕೊ ಒಳ್ಳೇದಾಗತ್ತೆ ಅಂತಾ ಕಿವಿಮಾತು ಹೇಳಿದ್ದಾರೆ.
ಇನ್ನು ಸುನಿ ಸರ್ ಬಗ್ಗೆ ಹೇಳಬೇಕು ಅಂದ್ರೆ ಅವರು ಡೈರೆಕ್ಟರ್ರು ನಾನು ಆರ್ಟಿಸ್ಟು ಅನ್ನುವಂತೆ ನಡೆದುಕೊಳ್ಳಲೇ ಇಲ್ಲ. ಒಡಹುಟ್ಟಿದ ಸಹೋದರನಂತೆ ಟ್ರೀಟ್ ಮಾಡುವ ಅವರ್ ಗುಣ ನಿಜಕ್ಕೂ ದೊಡ್ಡದು.
#
No Comment! Be the first one.