ಸಿಫಲ್ ಸುನಿ ನಿರ್ದೇಶನದ ಬಜ಼ಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಪಾರಿವಾಳ ರೇಸ್ ಜೊತೆಗೆ ಪ್ರೀತಿ, ಅಂಡರ್ವರ್ಲ್ಡ್ ಕಥೆಯನ್ನೂ ಹೊಂದಿರೋ ಬಜ಼ಾರ್ ಮುಂದಿನ ವಾರ ಬಿಡುಗಡೆಯಾಗಬೇಕಿತ್ತು. ಟ್ರೈಲರ್ ನೋಡಿ ಥ್ರಿಲ್ ಆದ ಪ್ರೇಕ್ಷಕರೂ ಕೂಡಾ ಅದಕ್ಕಾಗಿ ಕಾಯುತ್ತಿದ್ದರು. ಆದರೀಗ ಬಜ಼ಾರ್ ಬಿಡುಗಡೆ ದಿಢೀರನೆ ಮುಂದೂಡಲ್ಪಟ್ಟಿದೆ!
ಸುನಿ ಬೆಂಗಳೂರಿನಲ್ಲಿ ಈಗಲೂ ಒಳಗೊಳಗೇ ನಡೆಯುತ್ತಿರುವ ಪಾರಿವಾಳ ರೇಸಿನ ಬಗ್ಗೆ ಹೊಸೆದಿರೋ ರೋಚಕ ಕಥೆಯನ್ನು ಬಜ಼ಾರ್ ಚಿತ್ರ ಹೊಂದಿರೋದು ಗೊತ್ತೇ ಇದೆ. ಇದೀಗ ತಾನೇ ಬಿಡುಗಡೆಯಾಗಿರೋ ಟ್ರೈಲರ್ ಅಂತೂ ಬಜ಼ಾರ್ ಬಗ್ಗೆ ಭಾರೀ ನಿರಿಕ್ಷೆ ಮೂಡಿಕೊಂಡಿರುವಗಲೇ ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿದೆ. ಈ ವಿಚಾರವನ್ನು ಖುದ್ದು ಸಿಂಪಲ್ ಸುನಿ ಖಚಿತಪಡಿಸಿದ್ದಾರೆ.
ಈ ನಿರ್ಧಾರಕ್ಕೆ ಕಾರಣ ಥೇಟರ್ ಸಮಸ್ಯೆ. ಮುಂದಿನ ವಾರದಿಂದ ಒಂದಷ್ಟು ತಮಿಳು ಮತ್ತು ತೆಲುಗು ಸಿನಿಮಾಗಳು ಬಿಡುಗಡೆಯಾಗಲು ತಯಾರಾಗಿವೆ. ಇಂಥಾ ಪರಭಾಷಾ ಚಿತ್ರಗಳು ಬಂದಾಗ ಕನ್ನಡ ಚಿತ್ರಗಳಿಗೆ ದೋಖಾ ಮಾಡೋ ಕೆಲಸ ನಡೆದೇ ತೀರುತ್ತದೆ. ಕಷ್ಟಪಟ್ಟು ರೂಪಿಸಿದ ಚಿತ್ರ ಈ ಹಾವಳಿಯಲ್ಲಿ ಮಂಕಾಗೋದು ಬೇಡ ಎಂಬ ಕಾರಣದಿಂದಲೇ ಬಜ಼ಾರ್ ಅನ್ನು ಫೆಬ್ರವರಿಯಿಂದ ಆರಂಭಿಸಲು ನಿರ್ಧರಿಸಲಾಗಿದೆಯಂತೆ. ಅಂತೂ ಫೆಬ್ರವರಿಯಲ್ಲಿ ಬಜ಼ಾರ್ ಶುರುವಾಗೋದು ಖಚಿತ. ಸುನಿ ಪಾಲಿಗೂ ಇದು ಮುಖ್ಯವಾದ ಸಿನಿಮಾ. ಅವರು ತಮ್ಮ ಈ ವರೆಗಿನ ಶೈಲಿಯಿಂದ ಸಂಪೂರ್ಣವಾಗಿ ಹೊರ ಬಂದು ಬಜ಼ಾರ್ ಅನ್ನು ರೂಪಿಸಿದ್ದಾರೆ. ಈ ವಿಚಾರ ಟ್ರೈಲರ್ ಮೂಲಕವೇ ಸಾಬೀತಾಗಿದೆ.
#
No Comment! Be the first one.