ಪ್ರತಿಷ್ಟಿತ ಸಂಸ್ಥೆ ಲಹರಿ ಕಂಪೆನಿಯಲ್ಲಿ ಭಾವಗೀತೆ, ಚಿತ್ರಗೀತೆ, ಜನಪದ ಗೀತೆಗಳು ಲಭ್ಯವಿದೆ. ಸದ್ಯ ಐವತ್ತು ಲಕ್ಷ ಚಂದದಾರರು ಆಗ್ತಾ ಇದ್ದಾರೆಂದು ಲಹರಿವೇಲು ಸಂತಸವನ್ನು ಹಂಚಿಕೊಂಡರು. ’ಬೆಕ್ಕಿಗೊಂದು ಮೂಗುತಿ’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಸದರಿ ವಿಷಯವನ್ನು ಮಾದ್ಯಮದವರಿಗೆ ತಿಳಿಸಿದರು. ಮಾತು ಮುಂದುವರೆಸುತ್ತಾ ಮೂರು ದಶಕಗಳಿಂದ ಗಂದದ ಪೆಟ್ಟಿಗೆಯಲ್ಲಿ ಕ್ಯಾಸೆಟ್, ಸಿಡಿಯನ್ನು ಬಿಡುಗಡೆ ಮಾಡಲಾಗುತ್ತಿತ್ತು. ಡಾ.ಭೀಮಸೇನ್ಜೋಷಿ, ಡಾ.ರಾಜ್ಕುಮಾರ್, ಇಳಯರಾಜ ಮುಂತಾದವರು ಮುಟ್ಟಿದ ಪೆಟ್ಟಿಗೆಯನ್ನು ಸುರಕ್ಷಿತವಾಗಿ ಇಡಲಾಗಿದೆ. ಅರ್ಧ ಲಕ್ಷ ಚಂದದಾರರು ಬಂದಿರುವ ಕಾರಣ ಇನ್ನು ಮುಂದೆ ಚಿನ್ನದ ಕೋಟ್ ಇರುವ
ಬಾಕ್ಸ್ದಲ್ಲಿ ಸಿಡಿಯನ್ನು ಬಿಡುಗಡೆ ಮಾಡಲಾಗುವುದೆಂದು ಸಂಗೀತ ನಿರ್ದೇಶಕರ ಸಾಧನೆಯನ್ನು ಶ್ಲಾಘನೆ ಮಾಡಿದರು.ಪ್ರೀತಿ, ನಂಬಿಕೆ, ವಿಶ್ವಾಸ ಎಲ್ಲವು ಬಕವಾಸ್ ಅಂತ ತಿಳಿದುಕೊಂಡಿದ್ದು, ಪ್ರಾಣಿ ರೂಪದಲ್ಲಿ ಭೂಮಿಗೆ ಬಂದು ಮನುಷ್ಯಳಾಗಿ ರೂಪುಗೊಳ್ಳುತ್ತೇನೆ. ನಂತರ ಪ್ರೀತಿ ಆಯುಧ ಅಲ್ಲ. ಭಾವನೆಗಳು ತುಂಬಿಕೊಂಡಿರುತ್ತದೆಂದು ನಾಯಕ ಅರಿವು ಮೂಡಿಸುತ್ತಾನೆ. ಇದರಿಂದ ಜೀವನದಲ್ಲಿ ಬದಲಾವಣೆಗೊಳ್ಳುವ ಪಾತ್ರವಾಗಿದೆ. ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದರು ಶಿವಮೂಗ್ಗ ಮೂಲದ ನಾಯಕಿ ಸುಷ್ಮರಾಜ್.
ಸೇನಾ ಅಧಿಕಾರಿಯಾಗಿ, ಏಲಿಯನ್ ಗುಣವನ್ನು ಬದಲಿಸುತ್ತೇನೆ. ಭೂಮಿಗೆ ಬರುವ ಆಕೆಗೂ ತನಗೂ ಯಾವ ರೀತಿಯಲ್ಲಿ ಸಂಬಂದ ಎನ್ನುವುದನ್ನು ತಿಳಿಯಲು ಸಿನಿಮಾ ನೋಡಬೇಕೆಂದು ತಿಲಕ್ ಕೋರಿಕೊಂಡರು.
ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಲೆಸ್ಲೀ ಚಿತ್ರೀಕರಣ ಮುಗಿಸಿದ ಬೆನ್ನಲ್ಲೆ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದೆ. ತರುವಾಯ ಮುಂದಿನ ಕೆಲಸವನ್ನು ಖುದ್ದು ಜವಬ್ದಾರಿ ತೆಗೆದುಕೊಂಡು ಬಿಡುಗಡೆ ಹಂತಕ್ಕೆ ತರಲಾಗಿದೆ. ಐವತ್ತು ವರ್ಷಗಳಿಂದ ನಿರ್ಮಾಣ ಮಾಡುವ ಬಯಕೆ ಇತ್ತು. ಅದು ಈಗ ಈಡೇರಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಯು ಪ್ರಮಾಣ ಪತ್ರ ಪಡೆದುಕೊಂಡಿರುವ ಚಿತ್ರವನ್ನು ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ. ಆಗದಿದ್ದ ಪಕ್ಷದಲ್ಲಿ ಜನರಿಗೆ ತೋರಿಸಲು ಯೋಜನೆ ರೂಪಿಸಲಾಗುವುದು ಅಂತ ಏರ್ ಕ್ರಾಫ್ಟ್ ಇಂಜನಿಯರ್ ಆಗಿರುವ ನಿರ್ಮಾಪಕಿಯ ಪತಿ ಉಮೇಶ್ಗುರ್ಪುರ್ ಮಾಹಿತಿ ನೀಡಿದರು.
ತಂಡದೊಂದಿಗೆ ಸೇರಿಕೊಂಡು ನಾಲ್ಕು ಹಾಡುಗಳಿಗೆ ಸಾಹಿತ್ಯ, ಮೂರಕ್ಕೆ ಕಂಠದಾನ ಮಾಡಿ, ರಾಗ ಒದಗಿಸಿರುವ ವಿಕಾಸ್ವಸಿಷ್ಟ ಅವರಿಗೆ ಎರಡನೆ ಪ್ರಯತ್ನ. ಈ ಪೈಕಿ ಒಂದು ಡಾಬಾ ಹಾಡು ಇದೆಯಂತೆ.ನಿರ್ಮಾಪಕಿ ಬಿ.ಕೆ.ಮಾಧುರಿಉಮೇಶ್ ಪತಿಯ ಮಾತಿಗೆ ದಸ್ಕತ್ ಹಾಕಿದರು. ಇದಕ್ಕೂ ಮುನ್ನ ಚಿತ್ರದ ಎರಡು ಹಾಡುಗಳು, ಟ್ರೈಲರ್ ಪ್ರದರ್ಶನಗೊಂಡಿತು.
No Comment! Be the first one.