ಒಲವೇ ಮಂದಾರ ಚಿತ್ರದಿಂದ ಇಲ್ಲಿಯವರೆಗೆ ನಾನು ನಿರ್ದೇಶಿಸಿದ ಚಿತ್ರಗಳಲ್ಲಿ ಒಂದರ ನೆರಳು ಇನ್ನೊಂದು ಚಿತ್ರದ ಮೇಲೆ ಬೀಳದಂತೆ ಎಚ್ಚರಿಕೆಯಿಂದ ಚಿತ್ರಗಳನ್ನು ನಿರ್ದೇಶಿಸಿಕೊಂಡು ಬಂದಿದ್ದೇನೆ, ಬೆಲ್ಬಾಟಂ ಚಿತ್ರ ನನ್ನ ಹಿಂದಿನ ಚಿತ್ರವೆಲ್ಲವುಗಳಿಗಿಂದ ಬೇರೆಯದೇ ಜಾನರ್ ಚಿತ್ರ. ಇದೊಂದು ಎಂಟರ್ಟೈನರ್ ಥ್ರಿಲ್ಲರ್ ಚಿತ್ರ. ೮೦ರ ದಶಕದಲ್ಲಿಯೇ ಇಡೀ ಕತೆ ನಡೆಯುವುದರಿಂದ ಮೇಕಿಂಗ್ನಲ್ಲಿ ನಾವು ವಿಪರೀತ ಎಚ್ಚರಿಕೆ ವಹಿಸಬೇಕಿತ್ತು. ಅದಕ್ಕೆಂದು ಈ ಚಿತ್ರದ ಶೂಟಿಂಗ್ ಶುರುವಾಗುವುದಕ್ಕೂ ಮೊದಲು ಮೊದಲು ೬ ತಿಂಗಳ ಕಾಲ ರಿಸರ್ಚ್ ಮಾಡಿದ್ದೇವೆ. ಹಳೆಯ ಫಿಲ್ಮ್ ಮ್ಯಾಗಜೀನ್ಗಳು, ಪತ್ತೇದಾರಿ ಕಾದಂಬರಿಗಳು, ಪ್ರಾಪರ್ಟೀಸ್ ಕಲೆಕ್ಷನ್, ಪೊಲೀಸ್ ಕೇಸ್ ವರ್ಕಿಂಗ್ ಸ್ಟೈಲ್ ಇವೆಲ್ಲವುಗಳ ವಿವರಗಳನ್ನು ಸಂಗ್ರಹಿಸಿ ಅವೆಲ್ಲವುಗಳನ್ನು ಬೆಲ್ ಬಾಟಂ ಚಿತ್ರದಲ್ಲಿ ಬಳಸಿದ್ದೇವೆ. ಒಂದು ಲೆಕ್ಕದಲ್ಲಿ ಹೇಳಬೇಕೆಂದರೆ ನಿರ್ದೇಶಕನಾಗಿ ನನಗೆ ಅತಿಹೆಚ್ಚು ಎಕ್ಸೈಟ್ಮೆಂಟ್ ಖುಷಿ ಕೊಟ್ಟ ಚಿತ್ರ ಬೆಲ್ಬಾಟಂ. ಸಂತೋಷ್ರಂತಹ ಗೆಳೆಯ, ಮಗು ಮನಸ್ಸಿನ ವ್ಯಕ್ತಿ ಈ ಅಪರೂಪದ ಚಿತ್ರದ ಬೆನ್ನುಲುಬಾಗಿ ನಿಂತುಕೊಂಡರು. ನಾನೊಬ್ಬ ನಿರ್ದೇಶಕನಾಗಿ ಹಲವಾರು ನಿರ್ದೇಶಕರನ್ನು ಪಾತ್ರಗಳಾಗಿ ಒಟ್ಟುಸೇರಿಸಿ ಶೂಟಿಂಗ್ ನಡೆಸಿದ್ದು ನಿಜಕ್ಕೂ ಮರೆಯಲಾಗದ ಅನುಭವ. ಎಲ್ಲರೂ ಒಟ್ಟುಸೇರಿ ಒಂದೊಳ್ಳೆಯ ಚಿತ್ರ ರೂಪಿಸಿದ್ದೇವೆ. ಪ್ರೇಕ್ಷಕದೊರೆಗಳು ಕೈ ಹಿಡಿಯುತ್ತಾರೆಂಬ ಎಲ್ಲ ನಂಬಿಕೆಯೊಡನೆ ಇದೇ ಜನವರಿಯಲ್ಲಿ ಬೆಲ್ ಬಾಟಂ ಚಿತ್ರ ತೆರೆಗೆ ಬರುತ್ತಿದೆ.
ಜಯತೀರ್ಥ – ನಿರ್ದೇಶಕರು
#