ನಿರ್ದೇಶಕ ಜಯತೀರ್ಥ ಇದುವರೆಗೂ ವಿಶಿಷ್ಟವಾದ ಕಥೆಗಳಿಗೇ ದೃಷ್ಯ ಸ್ಪರ್ಶ ನೀಡುತ್ತಾ ಬಂದಿದ್ದಾರೆ. ಪ್ರತೀ ಸಿನಿಮಾವೂ ಒಂದಕ್ಕಿಂತ ಒಂದು ಭಿನ್ನವಾಗಿರ ಬೇಕೆಂಬ ಅಭಿಲಾಶೆ ಹೊಂದಿರೋ ಜಯತೀರ್ಥ ಪಾಲಿಗೆ ಬೆಲ್ ಬಾಟಮ್ ಎಂಬುದು ಹೊಸಾ ಅನುಭವ ಕೊಟ್ಟಿದೆ. ಪಕ್ಕಾ ಆಧುನಿಕ ಜಗತ್ತಿನಲ್ಲಿ ನಿಂತು ರೆಟ್ರೋ ಲೋಕವೊಂದನ್ನು ಮರು ಸೃಷ್ಟಿ ಮಾಡೋದೇನು ಸಾಮಾನ್ಯ ಸಂಗತಿಯಲ್ಲ. ಬೆಲ್ ಬಾಟಮ್ ಚಿತ್ರತಂಡ ಅದನ್ನು ಎಲ್ಲರೂ ತಲೆದೂಗುವಂತೆ ಮಾಡಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಏತಕೆ… ಎಂಬ ಹಾಡು ರೆಟ್ರೋ ಸ್ಟೈಲಿನಲ್ಲಿಯೇ ಎಲ್ಲರ ಮನ ಗೆದ್ದಿತ್ತು. ಇದೀಗ ಬೆಲ್ ಬಾಟಮ್ನ ಟ್ರೈಲರ್ ಬಿಡುಗಡೆಯಾಗಿದೆ. ಇದು ಹೊರ ಬಂದು ಕೆಲವೇ ಘಂಟೆ ಕಳೆಯೋದರೊಳಗೆ ವ್ಯಾಪಕವಾಗಿ ಹರಿದಾಡುತ್ತಾ ಎಲ್ಲರ ಪ್ರಶಂಸೆಗೂ ಪಾತ್ರವಾಗಿದೆ. ಈ ಟ್ರೈಲರ್ ಬೆಲ್ ಬಾಟಮ್ನಲ್ಲಿ ಎಲ್ಲರನ್ನೂ ಖುಷಿಗೊಳಿಸುವ ರೆಟ್ರೋ ಹಬ್ಬವೇ ಇದೆ ಎಂಬುದನ್ನು ಸ್ಪಷ್ಟೀಕರಿಸಿದೆ.
ಈ ಕಾಲದಲ್ಲಿ ನಿಂತು ಎಂಭತ್ತರ ದಶಕದ ಕಥೆಗೆ ದೃಷ್ಯ ಕಟ್ಟುವಾಗ ಸೂಕ್ಷ್ಮ ವಿಚಾರಗಳಿಗೂ ಆಧ್ಯತೆ ಕೊಡ ಬೇಕಾಗುತ್ತದೆ. ಒಂದೇ ಒಂದು ಸಣ್ಣ ವಿಚಾರದೆಲ್ಲಿ ಎಚ್ಚರ ತಪ್ಪಿದರೂ ಎಡವಟ್ಟಾಗುತ್ತೆ. ಆದರೆ ಬೆಲ್ ಬಾಟಮ್ ಚಿತ್ರತಂಡ ಚಿತ್ರೀಕರಣ ಆರಂಭವಾಗೋದಕ್ಕೂ ಮುಂಚೆಯೇ ಇದಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಬೆಲ್ ಬಾಟಮ್ ಕಾಲದಲ್ಲಿ ಬರುತ್ತಿದ್ದ ಪತ್ರಿಕಾ ಜಾಹೀರಾತಿಂದ ಮೊದಲ್ಗೊಂಡು ಎಲ್ಲವನ್ನೂ ಇಲ್ಲಿ ನೈಜವಾಗಿಯೇ ಮರು ಸೃಷ್ಟಿಸಲಾಗಿದೆಯಂತೆ.
ನಿರ್ದೇಶಕ ಜಯತೀರ್ಥ ಅವರೇ ಹೇಳೋ ಪ್ರಕಾರ ಹೀಗೆ ರೆಟ್ರೋ ಕಾಲದ ಪ್ರತೀ ಸೂಕ್ಷ್ಮಗಳನ್ನು ಹೆಕ್ಕಿದವರು ಈ ಸಿನಿಮಾ ಕಥೆಗಾರರೂ ಆಗಿರುವ ಟಿ.ಕೆ ದಯಾನಂದ್. ಈಗ ಪೋಸ್ಟರುಗಳಲ್ಲಿ ಎಲ್ಲರನ್ನೂ ಸೆಳೆದಿರೋ ಇಯಾಮಿ, ಲವಂಗದೆಣ್ಣೆ ಮುಂತಾದ ಈ ತಲೆಮಾರಿಗೆ ಅಪರಿಚಿತವಾದ ಜಾಹೀರಾತುಗಳ ಹಿಂದೆ ದಯಾನಂದ್ ಅವರ ಶ್ರಮವಿದೆ. ಕಾಸ್ಟ್ಯೂಮಿನಿಂದ ಮೊದಲ್ಗೊಂಡು ಎಲ್ಲ ಪರಿಕರಗಳ ವರೆಗೂ ಇಲ್ಲಿ ರೆಟ್ರೋ ಜಾತ್ರೆಯೇ ನೆರೆದಿದೆ. ಅದಕ್ಕೆ ಈಗ ಬಿಡುಗಡೆಯಾಗಿರೋ ಟ್ರೈಲರ್ ಸಾಕ್ಷಿಯಾಗಿದೆ.
https://www.youtube.com/watch?v=0_W_PhKaQaY #
No Comment! Be the first one.