ಯೋಗರಾಜ್ ಭಟ್ಟರು ಬರೆದಿರುವ ಏತಕೇ ಬೊಗಸೆ ತುಂಬ ಆಸೆ ನೀಡುವೆ ಹಾಡಿನ ಬಿಡುಗಡೆ ಸಮಯದಲ್ಲಿ ಚಿತ್ರತಂಡದ ಕಡೆಯಿಂದ ಹೊಸ ವಿಷಯವೊಂದು ಬಹಿರಂಗವಾಗಿದೆ. ಚೆನ್ನೈನಲ್ಲಿ ತಾಂತ್ರಿಕ ಕೆಲಸಗಳು ಮನಡೆಯುತ್ತಿರುವ ಸ್ಟುಡಿಯೋದಲ್ಲಿ ಚಿತ್ರವನ್ನು ನೋಡಿದ ತಮಿಳಿನ ದೊಡ್ಡ ನಿರ್ಮಾಪಕರೊಬ್ಬರು ಚಿತ್ರದ ಕಥೆಯ ರಿಮೇಕ್ ಹಕ್ಕುಗಳನ್ನು ಕೇಳಿದ್ದಾರೆ. ತಮಿಳು ತೆಲುಗಿನಿಂದ ರಿಮೇಕ್ ಹಕ್ಕುಗಳನ್ನು ತಂದು ಇಲ್ಲಿನ ನೇಟಿವಿಟಿ ಬೆರೆಸಿ ರಿಮೇಕ್ ಚಿತ್ರಗಳನ್ನು ಮಾಡುವ ಸಂದರ್ಭದಲ್ಲಿ ಕನ್ನಡದ ಚಿತ್ರವೊಂದರ ಕಂಟೆಂಟ್ ಮತ್ತು ಮೇಕಿಂಗ್ ಸ್ಟೈಲ್ ಮೆಚ್ಚಿ ತಮಿಳಿನ ನಿರ್ಮಾಪಕರು ಬೆಲ್ಬಾಟಂ ಚಿತ್ರದ ರಿಮೇಕ್ ಹಕ್ಕುಗಳನ್ನು ಕೇಳಿರುವುದು ಪಾಸಿಟಿವ್ ಬೆಳವಣಿಗೆ. ಜನವರಿ ತಿಂಗಳಿನಲ್ಲಿ ತೆರೆಗೆ ಬರಲು ಸಜ್ಜಾಗಿರುವ ಬೆಲ್ಬಾಟಂ ಚಿತ್ರ ಹೊಸ ತಲೆಮಾರಿನ ಫ್ರೆಶ್ ವಸ್ತುವಿಷಯದೊಂದಿಗೆ ಇತ್ತ ಸ್ಯಾಂಡಲ್ವುಡ್ನಲ್ಲೂ ಅತ್ತ ಪ್ರೇಕ್ಷಕ ವಲಯದಲ್ಲೂ ವಿಪರಿತ ಕ್ರೇಜ್ ಹುಟ್ಟಿಸಿ ಕುತೂಹಲಕ್ಕೆ ಕಾರಣವಾಗಿದೆ.
#