ರಾಜಣ್ಣನವರ ಬಾಂಡ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದ ನನಗೆ ಬೆಲ್ಬಾಟಂ ಚಿತ್ರ ಇಷ್ಟವಾಗಿದ್ದು ಅದರ ಕಥೆಯ ಕಾರಣಕ್ಕೆ. ನಟನಾಗಲೆಂದೇ ಚಿತ್ರರಂಗಕ್ಕೆ ಬಂದು ಅಸೋಷಿಯೇಟ್ ಡೈರೆಕ್ಟರಾಗಿ ಗುರುತಿಸಿಕೊಂಡು ಸಣ್ಣಪುಟ್ಟ ಪಾತ್ರ ನಿರ್ವಹಿಸುತ್ತಿದ್ದ ನಾನು ಇದೀಗ ಪೂರ್ಣಪ್ರಮಾಣದ ನಾಯಕನಾಗಿ ಬೆಲ್ಬಾಟಂ ಚಿತ್ರದಲ್ಲಿ ನಟಿಸಿದ್ದೇನೆ. ಇದು ಬೇರೆಯದೇ ಜಾನರ್ ಚಿತ್ರ. ಪಕ್ಕಾ ಇದು ಮಜಾ ಕೊಡೋ ಸಿನಿಮ. ಅಜನೀಶ್ ಲೋಕನಾಥ್ ಹಾಡು-ಸಂಗೀತ, ಅರವಿಂದ್ ಕಶ್ಯಪ್ ಸಿನೆಮಟೋಗ್ರಫಿ, ಜಯತೀರ್ಥರ ನಿರ್ದೇಶನ, ಪ್ರಗತಿಶೆಟ್ಟಿ ಕಾಸ್ಟೂಂ ಡಿಸೈನ್, ಒಂದೊಳ್ಳೆಯ ಕಥೆ ಎಲ್ಲವೂ ಸೇರಿ ಬೆಲ್ಬಾಟಂ ಒಂದೊಳ್ಳೆಯ ಎಂಟರ್ಟೈನರ್ ಥ್ರಿಲ್ಲರ್ ಆಗಿ ರೂಪುಗೊಂಡಿದೆ. ಚಿತ್ರದ ಟೀಸರ್, ಹಾಡುಗಳಿಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ನಾನಂತೂ ಈ ಚಿತ್ರವನ್ನು ಪ್ರೇಕ್ಷಕರು ಹೇಗೆ ರಿಸೀವ್ ಮಾಡಿಕೊಳ್ಳುತ್ತಾರೆಂಬ ಬಗ್ಗೆ ಎಕ್ಸೈಟ್ ಆಗಿದ್ದೇನೆ. ಬಹಳಕಾಲದ ನಂತರ ಪತ್ತೇದಾರಿ ಚಿತ್ರವೊಂದು ೮೦ರ ದಶಕದ ಸ್ಟೈಲಿನಲ್ಲಿಯೇ ರೂಪುಗೊಂಡಿದೆ. ಡಿಟೆಕ್ಟೀವ್ ದಿವಾಕರ ನಿಮಗೆ ೧೦೦ ಪರ್ಸೆಂಟ್ ಮಜಾ ಕೊಡ್ತಾನೆ.
ರಿಷಭ್ ಶೆಟ್ಟಿ – ನಾಯಕನಟ #
No Comment! Be the first one.