ನಿರ್ದೇಶಕನಾಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದ ರಿಷಬ್ ಶೆಟ್ಟಿ ನಾಯಕನಾಗಿಯೂ ನಟಿಸಿ ಸೈ ಎನ್ನಿಸಿಕೊಂಡ ಬ್ಲಾಕ್ ಬಸ್ಟರ್ ಸಿನಿಮಾ ಬೆಲ್ ಬಾಟಂ. ಪತ್ತೇದಾರಿ ಕಥೆಯಾಧಾರಿತ ಈ ಸಿನಿಮಾದಲ್ಲಿ ರೆಟ್ರೋ ಲುಕ್ ನಲ್ಲಿ ಡಿಟೆಕ್ಟೀವ್ ದಿವಾಕರನಾಗಿ ರಿಷಬ್ ಶೆಟ್ಟಿ ಕಮಾಲು ಮಾಡಿದ್ದರು. ಬೆಲ್ ಬಾಟಂ ರಿಷಬ್ ಶೆಟ್ಟಿಗೆ ಒಳ್ಳೆಯ ಇಮೇಜ್ ತಂದುಕೊಟ್ಟದಲ್ಲದೇ ನಿರ್ಮಾಪಕರಿಗೆ ಒಳ್ಳೆ ಕಮಾಯಿಯಾಗುವಂತೆಯೂ ಮಾಡಿತ್ತು. ಈ ಚಿತ್ರವನ್ನು ಒಲವೇ ಮಂದಾರ ಖ್ಯಾತಿಯ ನಿರ್ದೇಶಕ ಜಯತೀರ್ಥ ನಿರ್ದೇಶಿಸಿದ್ದರು.
ಬೆಲ್ ಬಾಟಂ ಸಕ್ಸಸ್ ನ ನಂತರ ಬೆಲ್ ಬಾಟಂ ಸೀಕ್ವೆಲ್ ನ ಮತ್ತೊಂದು ಚಿತ್ರ ಬರಲೆಂದು ಆಶಯದಲ್ಲಿದ್ದ ಕನ್ನಡಿಗರಿಗೆ ಸಿಹಿಸುದ್ದಿಯೊಂದು ದೊರಕಿದೆ. ಯೆಸ್.. ಬೆಲ್ ಬಾಟಂನ ಸಕ್ಸಸ್ ಬಳಿಕ ಸದ್ದಿಲ್ಲದೇ ಬೆಲ್ ಬಾಟಂ ಪಾರ್ಟ್ 2 ಮಾಡಲು ತಯಾರಿ ನಡೆಸುತ್ತಿದೆ. ಈಗಾಗಲೇ ಫಸ್ಟ್ ಹಾಫ್ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಸದ್ಯದಲ್ಲಿಯೇ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿಯಲಿದೆ. ಎಲ್ಲವೂ ಅಂದುಕೊಂಡಂತಾದರೆ ವರ್ಷಾಂತ್ಯಕ್ಕೆ ಇಲ್ಲವೇ ಮುಂದಿನ ವರ್ಷ ಬೆಲ್ ಬಾಟಂ 2 ಸೆಟ್ಟೇರುವ ಸಾಧ್ಯತೆಯೂ ಇದೆ. ಬೆಲ್ ಬಾಟಂ ನಲ್ಲಿ ಕಾರ್ಯನಿರ್ವಹಿಸಿದ್ದ ತಂಡವೇ ಇಲ್ಲಿಯೂ ಕಾರ್ಯನಿರ್ವಹಿಸಲಿದ್ದು, ಯಾರ್ಯಾರು ಇರಬಹುದೆಂಬ ಮಾಹಿತಿ ಸದ್ಯಕ್ಕಿಲ್ಲ.
No Comment! Be the first one.