ಹೆಸರು ಕೇಳಿದರೆ ಇದೊಂದು ಪಕ್ಕಾ ಆಕ್ಷನ್ ಚಿತ್ರ ಎಂದನಿಸಬಹುದು. ಆದರೆ, ‘ಬೆಂಕಿ’ ಬರೀ ಆಕ್ಷನ್ ಚಿತ್ರವಷ್ಟೇ ಅಲ್ಲ, ಅದೊಂದು ಸೆಂಟಿಮೆಂಟ್ ಕಥೆ ಎನ್ನುತ್ತಾರೆ ಆ ಚಿತ್ರದ ನಿರ್ಮಾಪಕ ಮತ್ತು ನಾಯಕ ಅನೀಶ್ ತೇಜೇಶ್ವರ್. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಹಾರರ್, ಥ್ರಿಲ್ ಮತ್ತು ಕಾಮಿಡಿ ಅಂಶಗಳೂ ಇವೆಯಂತೆ. ಎಲ್ಲಕ್ಕಿಂತ ಹೆಚ್ಚಾಗಿ ಇದೊಂದು ಅಣ್ಣ-ತಂಗಿಯ ಕಥೆ ಎಂದು ಒತ್ತಿಒತ್ತಿ ಹೇಳುವ ಮೂಲಕ, ಪ್ರೇಕ್ಷಕರನ್ನು ತಯಾರು ಮಾಡುತ್ತಾರೆ ಅನೀಶ್.

‘ಬೆಂಕಿ’ ಕುರಿತು ಮಾತನಾಡುವ ಅವರು, ‘ನಾವು ಪ್ರತಿ ಚಿತ್ರವನ್ನೂ ಖುಷಿಯಿಂದಲೇ ಮಾಡುತ್ತೇವೆ. ಈ ಚಿತ್ರ ಇನ್ನಷ್ಟು ಖುಷಿ ಕೊಟ್ಟಿದೆ. ಅದಕ್ಕೆ ಕಾರಣ, ಇದು ನಮ್ಮ ಸೊಗಡಿನ ಚಿತ್ರ. ಇದಕ್ಕೂ ಮುನ್ನ 9 ಚಿತ್ರಗಳಲ್ಲಿ ನಟಿಸಿದ್ದರೂ, ನಾನು ಈ ತರಹದ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಎಲ್ಲ ಚಿತ್ರಗಳಲ್ಲೂ ಸಿಟಿ ಯುವಕನಾಗಿಯೇ ಕಾಣಿಸಿಕೊಂಡಿದ್ದೇನೆ.. ಇದೇ ಮೊದಲ ಬಾರಿಗೆ ನಾನು ಹಳ್ಳಿ ಯುವಕನಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ನನ್ನ ಬಾಡಿ ಲಾಂಗ್ವೇಜ್ ಮತ್ತು ಡೈಲಾಗ್ ಡೆಲಿವಿರಿಯನ್ನು ಸಹ ಬದಲಾಯಿಸಿಕೊಂಡಿದ್ದೇನೆ’ ಎನ್ನುತ್ತಾರೆ ಅನೀಶ್.

‘ಇದೊಂದು ಅಣ್ಣ-ತಂಗಿ ಸೆಂಟಿಮೆಂಟ್ನ ಚಿತ್ರ. ಇಲ್ಲಿ ಹಾರರ್ ಅಂಶಗಳೂ ಇವೆ. ಟ್ರೇಲರ್ ನೋಡಿದವರೆಲ್ಲರೂ ಇದೊಂದು ಪಕ್ಕಾ ಪೈಸಾ ವಸೂಲ್ ಸಿನಿಮಾ ಎನ್ನುತ್ತಿದ್ದಾರೆ. ಇಲ್ಲಿ ನಾಯಕನೇ ಬೆಂಕಿ. ತಂಗಿಯ ವಿಷಯ ಬಂದಾಗ ಅವನು ಬೆಂಕಿ ಆಗುತ್ತಾನೆ. ಯಾಕೆ ಅವನಿಗೆ ಬೆಂಕಿ ಎಂಬ ಹೆಸರು ಬಂತು ಎಂಬುದಕ್ಕೆ ಒಂದು ಕಥೆ ಇದೆ. ಅದನ್ನು ಚಿತ್ರಮಂದಿರಗಳಲ್ಲೇ ನೋಡಬೇಕು. ಇಲ್ಲಿ ಅವನ ಮತ್ತು ಅವನ ತಂಗಿಯ ಬಂಧ ಅದ್ಭುತ. ತಂಗಿಗೆ ತೊಂದರೆ ಆದರೆ, ರೆಬೆಲ್ ಆಗುತ್ತಿರುತ್ತಾನೆ. ಎಲ್ಲ ಮನೆಯಲ್ಲೂ ತಂಗಿ ವಿಷಯದಲ್ಲಿ ಏನಾದರೂ ಸಮಸ್ಯೆ ಆದರೆ ಅಣ್ಣಂದಿರು ರೆಬೆಲ್ಗಳಾಗುತ್ತಾರೆ. ಯಾರಾದರೂ ಕೆಟ್ಟದಾಗಿ ಮಾತನಾಡಿದರೆ, ಅಣ್ಣನ ಇನ್ನೊಂದು ಮುಖ ನೋಡಬೇಕಾಗುತ್ತದೆ. ಅದೇ ಪಾತ್ರವನ್ನು ನಾನು ಈ ಚಿತ್ರದಲ್ಲಿ ಮಾಡಿದ್ದೇನೆ’ ಎನ್ನುತ್ತಾರೆ ಅನೀಶ್.

ಈ ಚಿತ್ರದಲ್ಲಿ ಒಳ್ಳೆಯ ಫೈಟ್ಗಳಿವೆ ಎನ್ನುವ ಅವರು, ‘ಸಾಮಾನ್ಯವಾಗಿ ನಾನು ಫೈಟ್ಗಳಿಗೆ ಕಡಿಮೆ ತಯಾರಿ ಮಾಡಿಕೊಳ್ಳುತ್ತೇನೆ. ಕಾರಣ ವಿಕ್ರಮ್ ಮಾಸ್ಟರ್. ಏಕೆಂದರೆ, ಪ್ರತಿ ಫೈಟ್ನ್ನು ಸಹ ಅವರು ಬಹಳ ಚೆನ್ನಾಗಿ ಪ್ಲಾನ್ ಮಾಡಿಕೊಂಡು ಬರುತ್ತಾರೆ ಅವರು. ಮುಂಚೆ ನನಗೆ ಫೈಟ್ ಎಂದರೆ ಭಯವಾಗುತ್ತಿತ್ತು. ಆದರೆ, ವಿಕ್ರಮ್ ಮಾಸ್ಟರ್ ಫೈಟ್ಗಳೆಂದರೆ, ಈಸಿ ಆಯಿತು’ ಎಂದು ಸಂತೋಷದಿಂದಲೇ ಹೇಳಿಕೊಳ್ಳುತ್ತಾರೆ.

‘ಬೆಂಕಿ’ ಚಿತ್ರದಲ್ಲಿ ಅನೀಶ್ಗೆ  ನಾಯಕಿಯಾಗಿ ಸಂಪದ ಹುಲಿವಾನ ನಟಿಸಿದ್ದು, ಮಿಕ್ಕಂತೆ ಶ್ರುತಿ ಪಾಟೀಲ್, ಅಚ್ಯುತ್ ಕುಮಾರ್, ಹರಿಣಿ, ‘ಉಗ್ರಂ’ ಮಂಜು ಮುಂತಾದವರು ನಟಿಸಿದ್ದಾರೆ. ಈ ಹಿಂದೆ, ‘ಸಪ್ನೋಂ ಕೀ ರಾಣಿ’ ಎಂಬ ಚಿತ್ರ ನಿರ್ದೇಶಿಸಿದ್ದ ಶಾನ್, ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಗೆಲುವಿನ ಖುಷಿ ʻಗಿರ್ಕಿʼ ಹೊಡೆಸುತ್ತಿದೆ!

Previous article

ಬೆಂಕಿ ಮೂಲಕ ಹೊಸ ಟ್ರೆಂಡ್‌ ಹುಟ್ಟುಹಾಕಿದ ಅನೀಶ್!

Next article

You may also like

Comments

Comments are closed.