ತಮಗಿಂತ ಕಿರಿಯರನ್ನೂ ಕೈ ಹಿಡಿದು ಮುನ್ನಡೆಸುವ ಸ್ನೇಹಶೀಲ ಸ್ವಭಾವದಿಂದಲೇ ಹೆಸರಾಗಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರು ಪ್ರಜ್ವಲ್ ದೇವರಾಜ್ ನಾಯಕರಾಗಿರೋ ಇನ್ಸ್‌ಪೆಕ್ಟರ್ ವಿಕ್ರಂ ಚಿತ್ರದ ಅತಿಥಿ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆಂಬ ಬಗ್ಗೆ ಸುದ್ದಿಯಾಗಿತ್ತು. ಇದೀಗ ಚಿತ್ರತಂಡ ಆ ಭಾಗದ ಚಿತ್ರೀಕರಣವನ್ನೂ ಪೂರೈಸಿಕೊಂಡಿದೆ. ದರ್ಶನ್ ಕೊಟ್ಟ ಮಾತಿಗೆ ತಕ್ಕುದಾಗಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ.

ದರ್ಶನ್ ಅವರು ಈ ಚಿತ್ರದಲ್ಲಿ ಯಾವ ಪಾತ್ರ ಮಾಡಿದ್ದಾರೆಂಬ ಬಗ್ಗೆ ಅಭಿಮಾನಿಗಳೆಲ್ಲ ಕಾತರರಾಗಿದ್ದಾರೆ. ಹೀಗಿರುವಾಗಲೇ ಚಿತ್ರತಂಡ ಈ ಬಗ್ಗೆ ವಿವರವೊಂದನ್ನು ಬಿಟ್ಟು ಕೊಟ್ಟಿದೆ. ಅದನ್ನಾಧರಿಸಿ ಹೇಳೋದಾದರೆ ದರ್ಶನ್ ಅವರು ಈ ಚಿತ್ರದಲ್ಲಿ ಭಗತ್ ಸಿಂಗ್ ಪಾತ್ರದಲ್ಲಿ ಮಿಂಚಿದ್ದಾರೆ!

ಭಾರತದ ಸ್ವಾತಂತ್ರಸ್ಯ ಸೇನಾನಿಗಳಲ್ಲಿ ಕ್ರಾಂತಿ ಪಥದ ಮೂಲಕವೇ ಆದರ್ಶವಾಗಿ ಉಳಿದವನು ಭಗತ್ ಸಿಂಗ್. ಈವತ್ತಿಗೂ ಕೆಚ್ಚಿಗೆ, ರೋಷಾವೇಶಕ್ಕೆ ಭಗತ್ ಸಿಂಗ್ ಸ್ಫೂರ್ತಿ. ಇಂಥಾ ಪಾತ್ರವನ್ನು ಈ ವರೆಗೂ ಅನೇಕ ಭಾರತೀಯ ಚಿತ್ರಗಳಲ್ಲಿ ಪಾತ್ರವಾಗಿಸಿದ್ದಿದೆ. ಆದರೆ ಇದೇ ಮೊದಲ ಬಾರಿ ಆರಡಿಯ ನಟರೋರ್ವರು ಭಗತ್ ಪಾತ್ರ ನಿರ್ವಹಿಸಿದ್ದಾರೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರದಲ್ಲಿ ಭಗತ್ ಸಿಂಗ್ ಪಾತ್ರಕ್ಕೆ ಜೀವ ತುಂಬಿರೋದು ಸತ್ಯ. ಅವರು ಬಹಳಷ್ಟು ಇಷ್ಟಪಟ್ಟು ಈ ಪಾತ್ರದಲ್ಲಿ ಅಭಿನಯಿಸಿದ್ದಾರಂತೆ. ಈ ಹಿಂದೆ ಪುಷ್ಪಕ ವಿಮಾನದಲ್ಲಿ ಕೋ ಡೈರೆಕ್ಟರ್ ಆಗಿದ್ದ ಶ್ರೀ ನರಸಿಂಹ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ದರ್ಶನ್ ಅವರನ್ನು ಭಿನ್ನವಾದ ಪಾತ್ರದಲ್ಲಿ ನಟಿಸುವಂತೆ ಮಾಡುವ ಮೂಲಕ ಅವರು ಒಂದು ಸಾರ್ವಕಾಲಿಕ ದಾಖಲೆಯನ್ನೇ ಮಾಡಿದ್ದಾರೆ.

ಭಗತ್ ಸಿಂಗ್ ಬದುಕಿದ ರೀತಿ, ಆತನ ಧೈರ್ಯಗಳೆಲ್ಲವನ್ನೂ ತಮ್ಮ ವ್ಯಕ್ತಿತ್ವದಲ್ಲಿಯೇ ಹುದುಗಿಸಿಕೊಂಡಿರುವಂಥಾ ನಟ ದರ್ಶನ್. ಅವರು ಅದೇ ಪಾತ್ರವನ್ನು ಮಾಡಿದ್ದಾರೆಂದ ಮೇಲೆ ಇನ್ಸ್‌ಪೆಕ್ಟರ್ ವಿಕ್ರಂ ಚಿತ್ರದತ್ತ ಅಭಿಮಾನಿಗಳ ಗಮನ ಹೊರಳಿಕೊಳ್ಳದಿರಲು ಸಾಧ್ಯವೇ ಇಲ್ಲ. ಈ ಹಿಂದೆ ಚೌಕ ಚಿತ್ರದಲ್ಲಿ ಖೈದಿಯೊಬ್ಬನ ಪಾತ್ರದ ಮೂಲಕ ದರ್ಶನ್ ಪ್ರಜ್ವಲ್ ದೇವರಾಜ್ ಮತ್ತು ಮಿಕ್ಕ ಹೀರೋಗಳಿಗೂ ಸಾಥ್ ನೀಡಿದ್ದರು. ಆ ಚಿತ್ರವೂ ಗೆದ್ದಿತ್ತು. ಇದೀಗ ದರ್ಶನ್ ಅವರು ಮತ್ತೊಮ್ಮೆ ಪ್ರಜ್ವಲ್ ಚಿತ್ರದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರೋದರಿಂದ ಇತಿಹಾಸ ಮತ್ತಷ್ಟು ರಂಗು ತುಂಬಿಕೊಂಡು ಮರುಕಳಿಸುವ ಎಲ್ಲ ಲಕ್ಷಣಗಳೂ ಇವೆ!

#

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ದಮಯಂತಿಯಾಗಲಿದ್ದಾರಾ ರಾಧಿಕಾ?

Previous article

ರಾಹುಲ್ ಐನಾಪುರ ಈಗ ತ್ರಾಟಕ!

Next article

You may also like

Comments

Leave a reply

Your email address will not be published. Required fields are marked *