ಟಗರು ಚಿತ್ರದ ಪಾತ್ರವೊಂದರ ಮೂಲಕ ಡಾಲಿ ಎಂದೇ ಪ್ರಸಿದ್ಧಿ ಪಡೆದವರು ನಟ ಧನಂಜಯ್. ಹೀಗೆ ಪಾತ್ರವೊಂದರ ಮೂಲಕವೇ ಜನರಿಗೆ ಹತ್ತಿರಾಗೋ ವಿರಳ ಅವಕಾಶವೊಂದನ್ನು ತಮ್ಮದಾಗಿಸಿಕೊಂಡ ಖುಷಿ ಅವರದ್ದು. ಹೀಗೆ ಡಾಲಿ ಎಂದೇ ಫೇಮಸ್ ಆಗಿರೋ ಧನಂಜಯ್ ಭೈರವನಾಗಿ ಅವತರಿಸಲು ಕೆಲವೇ ಕೆಲ ದಿನಗಳಷ್ಟೇ ಬಾಕಿ ಉಳಿದುಕೊಂಡಿವೆ.
ಖುದ್ದು ಧನಂಜಯ್ ಈ ಚಿತ್ರ ತನ್ನ ಪಾಲಿಗೆ ಮತ್ತೊಂದು ತೆರನಾದ ಇಮೇಜ್ ಕಟ್ಟಿ ಕೊಡುತ್ತದೆಂಬ ಭರವಸೆ ಹೊಂದಿದ್ದಾರೆ. ಈ ಹಿಂದೆ ಟಗರು ಚಿತ್ರ ತೆರೆ ಕಂಡ ನಂತರ ಜನ ಡಾಲಿ ಎಂದೇ ಗುರುತಿಸಲಾರಂಭಿಸಿದ್ದರಲ್ಲಾ? ಭೈರವ ಗೀತಾ ತೆರೆ ಕಂಡ ನಂತರ ಪ್ರೇಕ್ಷಕರೆಲ್ಲ ಭೈರವ ಎಂದೇ ಸಂಬೋಧಿಸುವಷ್ಟು ಪರಿಣಾಮಕಾರಿಯಾಗಿ ಈ ಪಾತ್ರ ಮೂಡಿ ಬಂದಿದೆ ಎಂಬುದು ಧನಂಜಯ್ ಅಭಿಪ್ರಾಯ.
ರಾಮ್ ಗೋಪಾಲ್ ವರ್ಮಾ ನಿರ್ಮಾಣ ಮಾಡಿರುವ ಈ ಚಿತ್ರ ತೆಲುಗು ಕಥೆ ಹೊಂದಿದೆ ಅಂತಲೇ ಬಹುತೇಕರು ಭಾವಿಸಿದ್ದರೆ ಅಚ್ಚರಿಯೇನಿಲ್ಲ. ಆದರೆ ಈ ಚಿತ್ರದ ಕಥೆ ಈ ನೆಲದ್ದೇ. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ನಡೆಯೋ ಹೋರಾಟ ಮತ್ತು ಪ್ರೀತಿಯ ರೋಚಕ ಕಥನವೊಂದನ್ನು ಈ ಚಿತ್ರ ಹೊಂದಿದೆಯಂತೆ. ತೆಲುಗಿನಲ್ಲಿಯೂ ಬಿಡುಗಡೆಯಾಗಲಿರೋ ಭೈರವ ಗೀತಾ ಅಲ್ಲಿಯೂ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ.
#
No Comment! Be the first one.