ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ, ಬಹುನಿರೀಕ್ಷಿತ “ಭಜರಂಗಿ 2” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ನಿರ್ಮಿಸಿರುವ ಈ ಚಿತ್ರವನ್ನು ಎ.ಹರ್ಷ ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ರವಿವರ್ಮ, ವಿಕ್ರಂ ಸಾಹಸ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಹಾಗೂ ಯೋಗಿ ಜಿ ರಾಜ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ.

ಶಿವರಾಜಕುಮಾರ್, ಭಾವನ ಮೆನನ್, ಶೃತಿ, ಕುರಿ ಪ್ರತಾಪ್, ಶಿವರಾಜ್ ಕೆ ಆರ್ ಪೇಟೆ, ಭಜರಂಗಿ ಲೋಕಿ, ಚೆಲುವರಾಜು, ಶಿವಮಣಿ, ಬಾಬು ಹಿರಣ್ಣಯ್ಯ, ವಿಜಯಲಕ್ಷ್ಮಿ ಪಂಡಿತ್, ಪ್ರಸನ್ನ, ಗಿರೀಶ್, ಎಂ.ಕೆ ಮಠ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ಎಲ್ಲರನ್ನೂ ಬೆರಗುಗೊಳಿಸಿದೆ. ಭುವನ ಗಾತ್ರ, ಜ್ವಲನ ನೇತ್ರ, ಗಹನ ಪಾತ್ರ, ಘನವನ ಧೀರ…ದಹನ ಗೋಲ, ದಮನ ಕಾಲ, ಧರಣಿ ಲೀಲ, ಜಯ ಜಯ ಶೂರ…. ಓಂಕಾರ, ಕ್ರೀಂಕಾರ, ಬೀಜಾಕ್ಷರಾಯ,  ನೀ ಬಂದರೆ, ಕಂಟಕ ಮಂಗಮಾಯ…. ಭಜರಂಗಿ-೨ ಚಿತ್ರಕ್ಕಾಗಿ ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿನ ಆರಂಭದ ಸಾಲುಗಳಿವು. ಇಂಥ ಪವರ್ ಫುಲ್ ಸಾಹಿತ್ಯಕ್ಕೆ ಅರ್ಜುನ್ ಜನ್ಯಾ ನೀಡಿರುವ ಟ್ಯೂನು ಸೇರಿಕೊಂಡು ಕೇಳಿದವರ ನರನಾಡಿಗಳಲ್ಲಿ ಮಿಂಚಿನ ಸಂಚಾರವಾಗಿ, ಅಕ್ಷರಶಃ ರೋಮಾಂಚನದ ಅನುಭವ ನೀಡುತ್ತಿದೆ.

ನಿರ್ದೇಶಕ ಎ. ಹರ್ಷ ಈವರೆಗೆ ರೂಪಿಸಿರುವ ಎಲ್ಲ ಸಿನಿಮಾಗಳೂ, ತಾಂತ್ರಿಕತೆಯಲ್ಲಿ ಮತ್ತು ಕಂಟೆಂಟ್ ವಿಚಾರದಲ್ಲಿ ಸ್ಟ್ರಾಂಗ್ ಆಗೇ ಮೂಡಿಬಂದಿದೆ. ಈ ಸಲ ಹಾಲಿವುಡ್ ರೇಂಜಿಗೆ ಚಿತ್ರ ತಯಾರಾಗಿದೆ ಅನ್ನೋದನ್ನು ಸ್ವತಃ ಟ್ರೇಲರ್‌ ಎತ್ತಿ ಹಿಡಿಯುತ್ತಿದೆ.  ಸಿನಿಮಾ ಕೂಡಾ ಎಲ್ಲರನ್ನೂ ಸೆಳೆಯಬಹುದು…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಪ್ರಮೋದ ಹೆಸರಲ್ಲಿ ಪ್ರಮಾದ!

Previous article

ಅಪ್ಪು ಅದೃಷ್ಟ ಕಂಡು ವಿಧಿಗೂ ಹೊಟ್ಟೆಕಿಚ್ಚಾಯ್ತಾ?

Next article

You may also like

Comments

Leave a reply

Your email address will not be published. Required fields are marked *