ಭಜರಂಗಿ-೨ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಜಯಣ್ಣ ಫಿಲಂಸ್‌ ನಲ್ಲಿ ಜಯಣ್ಣ ಮತ್ತು ಭೋಗೇಂದ್ರ ಸೇರಿ ನಿರ್ಮಿಸಿರುವ ಈ ಚಿತ್ರ 2021ರಲ್ಲಿ ಅಗಾಧವಾದ ಸೌಂಡು ಮಾಡುವ ಸೂಚನೆಯನ್ನು ಈ ಮೋಷನ್‌ ಪೋಸ್ಟರ್‌ ನೀಡಿದೆ. ನಿರ್ದೇಶಕ ಎ. ಹರ್ಷ ಈ ವರೆಗೆ ರೂಪಿಸಿರುವ ಎಲ್ಲ ಸಿನಿಮಾಗಳೂ, ತಾಂತ್ರಿಕತೆಯಲ್ಲಿ ಮತ್ತು ಕಂಟೆಂಟ್‌ ವಿಚಾರದಲ್ಲಿ ಸ್ಟ್ರಾಂಗ್‌ ಆಗೇ ಮೂಡಿಬಂದಿದೆ. ಈ ಸಲ ಹಾಲಿವುಡ್‌ ರೇಂಜಿಗೆ ಚಿತ್ರ ತಯಾರಾಗಿದೆ ಅನ್ನೋದನ್ನು ಸ್ವತಃ ಮೋಷನ್‌ ಪೋಸ್ಟರ್‌ ಎತ್ತಿ ಹಿಡಿಯುತ್ತಿದೆ. ಕೆಲ ತಿಂಗಳ ಹಿಂದೆ ಶಿವಣ್ಣ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಟೀಸರ್‌ ಕೂಡಾ ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆದಿತ್ತು. ಈ ಸಲ ಮೋಷನ್‌ ಪೋಸ್ಟರ್‌ ನೋಡಿದವರೆಲ್ಲಾ ನಿಜಕ್ಕೂ ದಂಗಾಗಿದ್ದಾರೆ.

ಜಾಗರ್ವ ಎನ್ನುವ ಹೆಸರು ಕೂಡಾ ಈ ಪೋಸ್ಟರಿನಲ್ಲಿ ಅನಾವರಣಗೊಂಡಿದ್ದು, ದಟ್ಟ ಅಡವಿ, ಬುರುಡೆಗಳ ಸಾಮ್ರಾಜ್ಯ, ದೇವಿ ಸೇರಿದಂತೆ ಅಲ್ಲಿನ ಕ್ರೌರ್ಯವನ್ನು ಅನಾವರಣಗೊಳಿಸಿದೆ. ರವಿ ಸಂತೇಹಕ್ಲು ಕಲಾ ನಿರ್ದೇಶನ, ಸ್ವಾಮಿ ಛಾಯಾಗ್ರಹಣ ಮತ್ತು ಅರ್ಜುನ್‌ ಜನ್ಯ ಸಂಗೀತ, ದೀಪು ಎಸ್‌ ಕುಮಾರ್‌ ಸಂಕಲನ ಈ ಚಿತ್ರಕ್ಕಿದೆ.

ಈ ಹಿಂದೆ ತೆರೆಗೆ ಬಂದಿದ್ದ ಭಜರಂಗಿ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ನಟ ಲೋಕಿಗೆ ವಿಲನ್‌ ಆಗಿ ಬ್ರೇಕ್‌ ನೀಡಿತ್ತು. ಈ ಸಲ ಭಜರಂಗಿ -೨ ಸಿನಿಮಾದಲ್ಲಿ ಶಿವರಾಜ್‌ ಕುಮಾರ್‌ ಅವರ ಲುಕ್ಕು, ಖದರ್ರೇ ಬೇರೆ ಇದೆಯಂತೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಭಜರಂಗಿ-೨ ಮುಖ್ಯವಾಗಿದ್ದು ಇಷ್ಟರಲ್ಲೇ ತೆರೆಗೆ ಬರಲಿದೆ..!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ತಲೆ ಮಾಂಸ-ನೂರು ಕುರಿ ಕೇಳಿದ್ದು ಯಾರು ಅಂತಾ ಹೇಳ್ತೀರಾ ಸ್ವಾಮಿ?

Previous article

ಕನ್ನಡದ ಸೇರಿ ಹಿಂದಿ ಕಲಾವಿದರು ಮತ್ತು ತಂತ್ರಜ್ಞರು ಭಾಗಿ

Next article

You may also like

Comments

Leave a reply

Your email address will not be published. Required fields are marked *