ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ನಟಿ ಭಾನುಪ್ರಿಯಾ. ಇದೀಗ ಕಿಉರುತೆರೆ ಧಾರಾವಾಹಿಗಳ ಮುಖ್ಯ ಪಾತ್ರಗಳಲ್ಲಿಯೂ ಮಿಂಚುತ್ತಿರೋ ಈಕೆಯ ಮೇಲೆ ಘನ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಮನೆಗೆಲಸಕ್ಕೆ ಅಪ್ರಾಪ್ತ ಬಾಲಕಿಯನ್ನಿಟ್ಟುಕೊಂಡು ಸಂಬಳ ಕೊಡದೆ ಸತಾಯಿಸಿದ ಆರೋಪ ಒಂದೆಡೆಯಾದರೆ, ಭಾನು ಪ್ರಿಯಾ ಸಹೋದರ ಆಕೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆಂಬ ಬಗ್ಗೆಯೂ ಬಾಲಕಿಯ ತಾಯಿ ದೂರು ದಾಖಲಿಸಿದ್ದಾಳೆ. ಈ ಪ್ರಕರಣದ ಗಂಭೀರ ಸ್ವರೂಪವನ್ನು ಗಮನಿಸಿದರೆ ಚೆನೈನಲ್ಲಿ ಬೀಡು ಬಿಟ್ಟಿರೋ ಭಾನುಪ್ರಿಯಾ ಆಂಧ್ರಪ್ರದೇಶದ ಜೈಲು ಪಾಲಾಗೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ಭಾನುಪ್ರಿಯಾ ವಿರುದ್ಧ ಆಂಧ್ರಪ್ರದೇಶದ ಸಮಲ್ರಕೊಟ್ಟಾಯಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಭಾನುಪ್ರಿಯಾ ಮನೆಗೆಲಸ ಮಾಡುತ್ತಿದ್ದ ಹುಡುಗಿ ಸಂಧ್ಯಾ ತಾಯಿ ಪ್ರಭಾವತಿ ಈ ಕೇಸು ದಾಖಲಿಸಿದ್ದಾಳೆ.
ಪ್ರಭಾವತಿ ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಸೇರಿದವಳು. ಮನೆಯ ಬಡತನ ತಾಳಲಾದರೆ ತನ್ನ ಅಪ್ರಾಪ್ತ ಮಗಳು ಸಂಧ್ಯಾಳನ್ನ ಮನೆಗೆಲಸಕ್ಕೆ ಕಳಿಸೋದು ಆಕೆಗೆ ಅನಿವಾರ್ಯವಾಗಿತ್ತು. ಆದ್ದರಿಂದಲೇ ವರ್ಷಗಳ ಹಿಂದೆ ಮಗಳನ್ನು ಭಾನುಪ್ರಿಯಾ ಮನೆಯ ಕೆಲಸಕ್ಕೆ ಸೇರಿಸಿದ್ದಳು. ಈ ಸಂದರ್ಭದಲ್ಲಿ ಪ್ರತೀ ತಿಂಗಳು ಹತ್ತು ಸಾವಿರ ಸಂಬಳ ಕೊಡೋದಾಗಿಯೂ ಭಾನುಪ್ರಿಯಾ ಒಪ್ಪಿಕೊಂಡಿದ್ದರಂತೆ. ಆದರೆ ಈಗ್ಗೆ ಹದಿನೆಂಟು ತಿಂಗಳಿಂದ ಈ ಅಪ್ರಾಪ್ತ ಬಾಲಕಿಯನ್ನು ದುಡಿಸಿಕೊಂಡು ಸಂಬಳವನ್ನೇ ಕೊಟ್ಟಿಲ್ಲ ಅನ್ನೋದು ಭಾನುಪ್ರಿಯಾ ಮೇಲಿರೋ ಆರೋಪ.
ಇದಕ್ಕಿಂತಲೂ ಭಯಾನಕವಾದ ಮತ್ತೊಂದು ವಿಚಾರವನ್ನೂ ಬಾಲಕಿಯ ತಾಯಿ ಪೊಲೀಸ್ ದೂರಿನಲ್ಲಿ ನಮೂದಿಸಿದ್ದಾಳೆ. ಸಂಬಳ ಬಾಕಿ ಉಳಿಸಿಕೊಂಡಿದ್ದರೂ ಭಾನುಪ್ರಿಯಾ ಅದನ್ನು ಕೊಡಬಹುದೆಂಬ ಆಸೆಯಿಂದ ಪ್ರಭಾವತಿ ಮಗಳನ್ನು ಮನೆಗೆಲಸದಲ್ಲಿಯೇ ಇರಿಸಿದ್ದಳು. ಆದರೆ ಇತ್ತೀಚೆಗೆ ಮಗಳು ಸಂಧ್ಯಾ ಅಮ್ಮನ ಬಳಿ ಭಯಾನಕ ವಿಚಾರವೊಂದನ್ನ ಹೇಳಿಕೊಂಡಿದ್ದಳಂತೆ. ಭಾನುಪ್ರಿಯಾಳ ಸಹೋದರ ಗೋಪಾಲಕೃಷ್ಣನ್ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆಂಬುದು ಅದರ ಸಾರಾಂಶ. ಈ ವಿಚಾರ ಗೊತ್ತಾದೇಟಿಗೆ ಪ್ರಭಾವತಿ ಇದೇ ತಿಂಗಳ ಹದಿನೆಂಟನೇ ತಾರೀಕಿನಂದು ಮಗಳನ್ನು ಭಾನುಪ್ರಿಯಾ ಮನೆಯಿಂದ ಬಿಡಿಸಿಕೊಂಡು ಬಂದಿದ್ದಾಳೆ.
ಹೀಗೊಂದು ಕೇಸು ದಾಖಲಿಸಿಕೊಂಡಿರೋ ಪೊಲೀಸರು ಚೆನೈಗೆ ತೆರಳಿ ಭಾನುಪ್ರಿಯಾ ಮತ್ತಾಕೆಯ ಸಹೋದರ ಗೋಪಾಲಕೃಷ್ಣನ್ನನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ. ಅಪ್ರಾಪ್ತೆಯನ್ನು ಮನೆಗೆಲಸಕ್ಕಿಟ್ಟುಕೊಂಡಿದ್ದೇ ಅಪರಾಧ. ಆಕೆಯನ್ನು ದುಡಿಸಿಕೊಂಡು ಹಣ ಕೊಡದೇ ಸತಾಯಿಸಿದ್ದ ಅಮಾನುಷ ವರ್ತನೆ. ಇದಲ್ಲದೇ ಆ ಬಡಪಾಯಿ ಹುಡುಗಿಗೆ ಭಾನುಪ್ರಿಯಾ ಸಹೋದರ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆಂಬ ಆರೋಪವೂ ಇದೆ. ಇದೆಲ್ಲವೂ ಒಂದು ಕಾಲಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಟಿಯಾಗಿ ಮೆರೆದಿದ್ದ ಭಾನುಮತಿಗೆ ಜೈಲಿನ ದಿಕ್ಕು ತೋರಿಸುತ್ತಿವೆ!
No Comment! Be the first one.