ದೇವ್ರು ತುಂಬಾ ಜನಕ್ಕೆ ಅವ್ರನ್ನ ಕಾಪಾಡಿಕೊಳ್ಳೋ ಶಕ್ತಿ ಕೊಟ್ಟಿರ್ತಾನೆ. ಇನ್ನೂ ತುಂಬಾ ಜನಕ್ಕೆ ಅವರ ಕುಟುಂಬವನ್ನು ಕಪಾಡಿಕೊಳ್ಳುವ ಶಕ್ತಿ ಕೊಟ್ಟಿರ್ತಾನೆ. ಆದರೆ, ಕೆಲವೊಬ್ಬರಿಗೆ ಮಾತ್ರ ಇಡೀ ಸಮಾಜವನ್ನೇ ಕಾಪಾಡುವ ಶಕ್ತಿ ನೀಡಿರ್ತಾನೆ…
– ಇದು ಭರಾಟೆ ಸಿನಿಮಾದ ಥಿಯೇಟ್ರಿಕಲ್ ಟ್ರೇಲರಿನಲ್ಲಿ ಬರುವ ಆರಂಭಿಕ ಮಾತುಗಳು. ಟ್ರೇಲರಿನ ತುಂಬಾ ಬೆಂಕಿಯಂತಾ ಡೈಲಾಗುಗಳು ತುಂಬಿಕೊಂಡಿವೆ. ಇನ್ನು ಸಿನಿಮಾದಲ್ಲಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವ ಅದೆಷ್ಟು ಮಾತುಗಳಿವೆಯೋ?
ಅಕ್ಟೋಬರ್ 18ರ ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಭರಾಟೆ ಚಿತ್ರತಂಡ ರಿಲೀಸು ಮಾಡಿರುವ ಪೋಸ್ಟರುಗಳಿಂದ ಹಿಡಿದು, ಟೀಸರು, ಹಾಡುಗಳು, ಈಗ ಥಿಯೇಟ್ರಿಕಲ್ ಟ್ರೇಲರ್ ಸೇರಿದಂತೆ ಒಂದೊಂದೂ ಪ್ರೇಕ್ಷಕರ ಸೆಳೆತವನ್ನು ಹೆಚ್ಚಿಸುವ ರೀತಿಯಲ್ಲೇ ಇವೆ.
https://www.youtube.com/watch?v=386gvMkjcRc
ಭರಾಟೆಗಾಗಿ ಶ್ರೀಮುರಳಿಯವರ ಅಭಿಮಾನಿಗಳು ಮಾತ್ರವಲ್ಲದೆ, ಕನ್ನಡದ ಪ್ರತಿಯೊಬ್ಬ ಸಿನಿಮಾಸಕ್ತರೂ ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕೆ ಕಾರಣಗಳು ಸಾಕಷ್ಟಿವೆ. ದೊಡ್ಡ ಗ್ಯಾಪ್ ನಂತರ ತೆರೆಗೆ ಬರುತ್ತಿರುವ ಶ್ರೀಮುರಳಿ ನಟನೆಯ ಸಿನಿಮಾ, ಕಿಸ್ ಬೆಡಗಿ ಶ್ರೀಲೀಲಾ ಎರಡನೇ ಚಿತ್ರ, ಹದಿಮೂರು ಜನ ದಿಗ್ಗಜ ಖಳನಟರು ಪಾತ್ರ ನಿರ್ವಹಿಸಿರೋದು, ಬಹದ್ದೂರ್ ಮತ್ತು ಭರ್ಜರಿಯ ನಂತರ ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದ ಮೂರನೇ ಸಿನಿಮಾ, ರಾಜಾಸ್ಥಾನದಲ್ಲಿ ಚಿತ್ರೀಕರಣಗೊಂಡಿರುವುದು… ಹೀಗೆ ಭರಾಟೆಯನ್ನು ನೋಡಲು ಜನ ಕಾದಿರುವುದಕ್ಕೆ ಬಗೆಬಗೆಯ ಕಾರಣಗಳಿವೆ. ಈಗ ಟ್ರೇಲರು ನೋಡಿದವರು ಈ ಚಿತ್ರವನ್ನು ನೋಡಲೇಬೇಕು ಅಂತಾ ಶಪಥ ಮಾಡೋದು ಗ್ಯಾರೆಂಟಿ. ಯಾಕೆಂದರೆ ಈ ಸಿನಿಮಾದಲ್ಲಿ ಈ ವರೆಗೂ ಯಾರೂ ಮುಟ್ಟದ ಕಥೆ ಕೂಡಾ ಇದೆ ಅನ್ನೋದು ಗೋಚರಿಸಿದೆ.
ಟ್ರೇಲರಿನಲ್ಲಿರುವ ಒಂದೊಂದು ದೃಶ್ಯ ಕೂಡಾ ಅದ್ಭುತ ಶ್ರೀಮಂತಿಕೆಯಿಂದ ಮೂಡಿಬಂದಿದೆ. ನೋಡಲೆರಡು ಕಣ್ಣು ಸಾಲದೆನ್ನುವಂತೆ ಶೃಂಗಾರಗೊಂಡಿರುವ ಹಾಡುಗಳು, ಮೈ ಜುಮ್ಮೆನಿಸುವ ಸಾಹಸ… ಒಂದಾ ಎರಡಾ? ನೀವು ಕೂಡಾ ಭರಾಟೆಯನ್ನು ನೋಡಲು ಬೇಗ ಟಿಕೇಟ್ ಬುಕ್ ಮಾಡಿ..!
CG ARUN

ಗಂಟುಮೂಟೆ ಬಗ್ಗೆ ಕಿಚ್ಚ ಹೇಳಿದ್ದೇನು?

Previous article

ಸವರ್ಣದೀರ್ಘ ಸಂಧಿಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಕೃಷ್ಣಾ!

Next article

You may also like

Comments

Leave a reply

Your email address will not be published. Required fields are marked *