ಶ್ರೀ ಮುರುಳಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಭರಾಟೆ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಭರ್ಜರಿ ಬಹದ್ದೂರ್ ಖ್ಯಾತಿಯ ಚೇತನ್‌ಕುಮಾರ್ ನಿರ್ದೇಶನದ ೩ನೇ ಸಿನಿಮಾ ಇದಾಗಿದ್ದು, ಹಲವಾರು ವಿಶೇಷತೆಗಳ ಮೂಲಕ ಸದಾ ಸುದ್ದಿಯಲ್ಲಿದೆ. ಕಿಸ್ ಖ್ಯಾತಿಯ ನಟಿ ಶ್ರೀಲೀಲಾ ಈ ಚಿತ್ರ ನಾಯಕಿ ತ್ರಿವಳಿ ಸಹೋದರರಾದ ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಈ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ.

ಮೊನ್ನೆ ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿ ನಡೆಯಿತು. ನಾಯಕ ಶ್ರೀಮುರುಳಿ, ನಾಯಕಿ ಶ್ರೀಲೀಲಾ, ತಾರಾ ಹಾಗೂ ಸಾಯಿಕುಮಾರ್ ಜೊತೆಗೆ ನಿರ್ದೇಶಕ ಚೇತನ್, ನಿರ್ಮಾಪಕ ಸುಪ್ರೀತ್ ಕೂಡ ಹಾಜರಿದ್ದು ಚಿತ್ರದ ಕುರಿತಂತೆ ಮಾತನಾಡಿದರು. ೩೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಈ ಚಿತ್ರದ ಕುರಿತಂತೆ ನಿರ್ದೇಶಕ ಚೇತನ್ ಮಾತನಾಡಿ, ಭರ್ಜರಿ ಚಿತ್ರದ ನಂತರ ಮುರುಳಿ ಅವರೇ ನನ್ನನ್ನು ಈ ಸಿನಿಮಾ ಮಾಡಲು ಧೈರ್ಯ ತುಂಬಿದರು. ಒಂದೇ ಸಿನಿಮಾದಲ್ಲಿ ಇಷ್ಟೊಂದು ಜನ ಕಲಾವಿದರನ್ನು ಸೇರಿಸಲು ಪ್ರತಿಯೊಬ್ಬರೂ ನೀಡಿದ ಸಹಕಾರವೇ ಕಾರಣ. ಸೋಷಿಯಲ್ ರೀಸನ್ ಇರುವಂಥ ಸಿನಿಮಾ. ಹಾಡುಗಳು, ಫೈಟ್ಸ್, ಎಮೋಷನ್ಸ್ ಎಲ್ಲಾ ಥರದ ಭರಾಟೆ ಈ ಚಿತ್ರದಲ್ಲಿದೆ. ಇಡೀ ಚಿತ್ರವನ್ನು ೯೭ ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಆಯುರ್ವೇದದ ಎಳೆ ಕೂಡ ಈ ಚಿತ್ರದಲ್ಲಿದೆ ಎಂದು ಹೇಳಿದರು.

ನಾಯಕ ನಟ ಶ್ರೀಮುರುಳಿ ಮಾತನಾಡಿ, ಉಗ್ರಂ ಚಿತ್ರದ ನಂತರ ನಾನು ಅತಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾ ಇದು. ಈಗ ಕನ್ನಡದಲ್ಲಿ ಒಂದಷ್ಟು ರೆಕಾರ್ಡ್ ಬ್ರೇಕಿಂಗ್ ಸಿನಿಮಾಗಳು ಬಂದಿವೆ. ಅದೇ ರೀತಿ ಭರಾಟೆ ಕೂಡ ಮತ್ತೊಂದು ಬ್ರೇಕಿಂಗ್ ಸಿನಿಮಾ ಆಗಲಿದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
ನಟಿ ತಾರಾ ಮಾತನಾಡಿ, ನಿರ್ದೇಶಕ ಚೇತನ ಜೊತೆ ನನ್ನ ೨ನೇ ಸಿನಿಮಾ ಇದು. ನಾಯಕ ಶ್ರೀಮುರುಳಿ ಎಲ್ಲದರಲ್ಲೂ ಪಾಸಿಟಿವ್ ಹುಡುಕುವಂಥ ಗುಣವುಳ್ಳವನು. ನಾಯಕನಾಗಿ ಇಡೀ ಟೀಮ್‌ನ್ನು ಕ್ಯಾರಿ ಮಾಡುತ್ತಾನೆ. ನಾಯಕಿ ಶ್ರೀಲೀಲಾ ಈಗಷ್ಟೇ ಅರಳಿದ ಕಮಲದಂತೆ ಕಾಣಿಸ್ತಾಳೆ. ಆಕೆ ಒಂದು ಸೀನ್‌ನಲ್ಲಿ ಗ್ಲಿಸರಿನ್ ಇಲ್ಲದೆಯೇ ಅತ್ತುಬಿಟ್ಟಳು ಎಂದು ಹೇಳಿದರು.

CG ARUN

ನನಗೂ ಕುಟುಂಬ ಇದೆ… ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ!

Previous article

ಇದು ಕನ್ನಡ ಚಿತ್ರರಂಗಕ್ಕೆ ಸಿಕ್ಕ ಗೌರವ!

Next article

You may also like

Comments

Leave a reply

Your email address will not be published. Required fields are marked *