ಎರಡು ವರ್ಷಗಳ ಹಿಂದೆ ನಾಗರಹಾವು ಚಿತ್ರ ಭಾರೀ ಅಬ್ಬರದೊಂದಿಗೆ ತೆರೆ ಕಂಡಿತ್ತಲ್ಲಾ? ಆ ಚಿತ್ರದ ನಿರ್ಮಾಣ ವಿಭಾಗದಲ್ಲಿ ನಿರ್ಣಾಯಕವಾಗಿ ಕಾರ್ಯ ನಿರ್ವಹಿಸಿದ್ದ ಎಂ ಯೋಗೇಶ್ ಪೂರ್ಣಪ್ರಮಾಣದ ನಿರ್ಮಾಪಕರಾಗಿದ್ದಾರೆ. ಇವರು ನಿರ್ಮಾಪಕರಾಗಿರೋ ಭರಣಿ ಚಿತ್ರದ ಮುಹೂರ್ತ ಇಂದು ನೆರವೇರಿದೆ.
ಇದರ ಮೋಷನ್ ಪೋಸ್ಟರ್ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿ ದಿನ ಕಳೆಯುವಷ್ಟರಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಭರಣಿ ಚಿತ್ರಕ್ಕೆ ಪಾರ್ವತಮ್ಮನ ಮಗ ಎಂಬ ಟ್ಯಾಗ್ ಲೈನ್ ಕೂಡಾ ಇದೆ. ರಾಜ್ ಕುಮಾರ್ ಅವರ ಸಿನಿಮಾಗಳನ್ನೇ ನೆನಪಿಸುವಂಥಾ ಹಳ್ಳಿ ಘಮ ಬೀರುವಂತಿರೋ ಈ ಮೋಷನ್ ಪೋಸ್ಟರ್ ನಿಜಕ್ಕೂ ಅದ್ಭುತವಾಗಿಯೇ ಮೂಡಿ ಬಂದಿದೆ.
ಅಂದಹಾಗೆ ಈ ಚಿತ್ರದ ಮೂಲಕ ಮಾಧವ ಎಂಬ ಹೊಸಾ ಹುಡುಗ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾನೆ. ಸ್ವಾತಿ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ಹಿಂದೆ ರಮ್ಯಾ ನಾಯಕಿಯಾಗಿ ನಟಿಸಿದ್ದ ನಾಗರಹಾವು ಚಿತ್ರದ ನಿರ್ಮಾಪಕ ಸಾಜಿದ್ ಖುರೇಷಿಯವರ ಆಪ್ತ ವಲಯದಲ್ಲಿದ್ದವರು ಯೋಗೇಶ್. ಕನ್ನಡ ಚಿತ್ರರಂಗಕ್ಕೆ ಅದ್ದೂರಿಯಾದ, ಒಳ್ಳೆ ಹೂರಣ ಹೊಂದಿರೋ ಚಿತ್ರ ಕೊಡಬೇಕೆಂಬ ಆಸೆ ಹೊಂದಿರುವವರು ಸಾಜಿದ್ ಖುರೇಶಿ. ಅವರ ಗರಡಿಯಲ್ಲಿ ಪಳಗಿಕೊಂಡಿದ್ದ ಯೋಗೇಶ್ ಇದೀಗ ಭರಣಿ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಗ್ರಾಫಿಕ್ಸ್ನಲ್ಲಿಯೇ ವಿಷ್ಣುವರ್ಧನ್ ಅವರನ್ನು ಮರು ಸೃಷ್ಟಿ ಮಾಡೋ ಮೂಲಕ ಗಮನ ಸೆಳೆದಿದ್ದ ನಾಗರಹಾವು ಚಿತ್ರವನ್ನು ಸಾಜಿದ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದರು. ಇದೀಗ ಯೋಗೇಶ್ ನಿರ್ಮಾಣ ಮಾಡುತ್ತಿರೋ ಈ ಚಿತ್ರದ ಮೋಷನ್ ಪೋಸ್ಟರ್ ಕೂಡಾ ಅಂತಾದ್ದೇ ಅದ್ದೂರತಿತನದ ಸೂಚನೆ ನೀಡುವಂತಿದೆ. ದೊಡ್ಡ ಗಣೇಶ ದೇವಸ್ಥಾನದಲ್ಲಿಂದು ಪೂಜೆ ನಡೆಸುವ ಮೂಲಕ ಚನಾನಿರಾಜ ನಿರ್ದೇಶನದ ‘ಭರಣಿಯ’ ಚಿತ್ರೀಕರಣ ಆರಂಭವಾಗಿದೆ.
#
No Comment! Be the first one.