ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನದ, ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಸಿನಿಮಾ ಭರಾಟೆ.

ಯಾವತ್ತು ಈ ಚಿತ್ರದ ಪೋಸ್ಟರ್ ರಿಲೀಸ್ ಆಯ್ತೋ, ಆವತ್ತಿಂದಲೇ ಕ್ರೇಜ಼ು ಹುಟ್ಟಿಸಿತ್ತು. ಈಗ ಚಂದನ್ ಶೆಟ್ಟಿ ಹಾಡಿರುವ ರೋರಿಸ಼ಂ ಹಾಡು ಲೋಕಾರ್ಪಣೆಗೊಂಡಿದೆ. ನಿರ್ದೇಶಕರಾದ ಮಫ್ತಿ ನರ್ತನ್, ತರುಣ್ ಸುಧೀರ್ ಮತ್ತು ಅಯೋಗ್ಯ ಮಹೇಶ್ ಈ ಹಾಡನ್ನು ರಿಲೀಸ್ ಮಾಡಿದರು. ಇದು ಭರ್ಜರಿ ತಂಡ ರಿಲೀಸ್ ಮಾಡಿರುವ ಮೂರನೇ ಹಾಡಾಗಿದೆ.

ಮುರಳಿ ನಾನು ತುಂಬಾ ವರ್ಷದ ಗೆಳೆಯರು. ಟಾಪ್ ಟೆನ್ ಅನ್ನೋ ಸಿನಿಮಾಗೆ ತರುಣ್ ಆಡಿಷನ್ ಕೊಡಲು ಹೋಗಿದ್ದೆ. ಅಲ್ಲಿ ಹೋದ ಮೇಲೆ ಗೊತ್ತಾಯಿತು ಅದಾಗಲೇ ಆ ಚಿತ್ರಕ್ಕೆ ವಿಜಯ ರಾಘವೇಂದ್ರ ಮುರಳಿ ಆಯ್ಕೆಯಾಗಿದ್ದಾರೆ ಅಂತಾ. ಆ ನಂತರದ ದಿನಗಳಲ್ಲಿ ಮುರಳಿ ನನಗೆ ಆತ್ಮೀಯರೂ ಆದರೂ, ಚಿತ್ರರಂಗದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡು ಈಗ ಒಂದೊಳ್ಳೆ ಸ್ಥಾನದಲ್ಲಿದ್ದಾರೆ. ಅವರಿಗೆ ಒಳಿತಾಗಲಿ” ಎಂದು ನಿರ್ದೇಶಕ ತರುಣ್ ಹರಿಸಿದರು.
ರಾಜಾಸ್ತಾನದ ಮರುಭೂಮಿಯಲ್ಲಿ ಚಿತ್ರೀಕರಣಗೊಂಡಿರುವ ಕಲರ್ ಫುಲ್ rap ಹಾಡನ್ನು ಚಂದನ್ ಶೆಟ್ಟಿ ಹಾಡಿದ್ದಾರೆ.

ಈ ಹಾಡು ಇಷ್ಟು ಚೆಂದಗೆ ಬರೋಕೆ ನನ್ನ ಟೀಂ ಕಾರಣ. ಸಿನಿಮಾ ಕೂಡಾ ಅಷ್ಟೇ ಪವರ್ ಫುಲ್ ಆಗಿದೆ ಅಂದರು ಶ್ರೀಮರಳಿ. ವಿದ್ಯಾ ಶ್ರೀಮುರಳಿ ಮೇಡಂ ಅದ್ಭುತವಾದ ಕಾಸ್ಟೂಮ್ ಡಿಸೈನ್ ಮಾಡಿದರು. ಭುವನ್ ಗೌಡ ಅವರು ಈ ಹಾಡಿಗೆ ಮಾತ್ರ ಕ್ಯಾಮೆರಾ ಕೆಲಸ ಮಾಡಿಕೊಟ್ಟರು. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಹೀರೋ ಶ್ರೀಮುರಳಿ ಅವರು 42% ಬಿಸಿಲಿನಲ್ಲೂ ಯಾವ ಬೇಸರ ತೋರದೆ ನೂರಾರು ಜನ ಡ್ಯಾನ್ಸರ್ ಗಳ ಜೊತೆ ಚಿತ್ರೀಕರಣದಲ್ಲಿ ತೊಡಗಿಕೊಂಡರು. ಎಲ್ಲಾ ಅಂದುಕೊಂಡಂತೇ ಆದರೆ ಅಕ್ಟೋಬರ್ 18 ಕ್ಕೆ ತೆರೆಗೆ ತರುವ ಪ್ರಯತ್ನದಲ್ಲಿದ್ದೇವೆ ಎಂದು ನಿರ್ದೇಶಕ ಚೇತನ್ ಕುಮಾರ್ ಹೇಳಿದರು. ಇನ್ನು ನಿರ್ಮಾಪಕ ಸುಪ್ರಿತ್ ಮಾತನಾಡಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಕೊರಿಯೋಗ್ರಫರ್ ಮುರಳಿ ಸೇರಿದಂತೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

CG ARUN

ಗೋಲ್ಡನ್ ಸ್ಟಾರ್ ವಾರ್ನಿಂಗ್!

Previous article

ಅಮೆರಿಕಾ ಅಧ್ಯಕ್ಷನ ಹಾಡು!

Next article

You may also like

Comments

Leave a reply

Your email address will not be published. Required fields are marked *

More in cbn