ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ಬಹದ್ದೂರ್ ಚೇತನ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಗೀತೆಯು ಲೈಫ್ ನಲ್ಲಿ ಸೋತವರಿಗೊಂದು ಟಾನಿಕ್ ನಂತೆ ಮೂಡಿಬಂದಿದೆ. ಎಂದಿನಂತೆ ತಮ್ಮ ಪಂಚಿಂಗ್ ಪದಗಳೊಂದಿಗೆ ಚೇತನ್ ಅವರೇ ಗೀತ ಸಾಹಿತ್ಯವನ್ನು ಬರೆದಿದ್ದು, ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಲಿರಿಕಲ್ ವಿಡಿಯೋ ಇದೀಗ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ನೂರಾರು ಡಾನ್ಸರ್ ಗಳ ಮಧ್ಯೆ ಕಲರ್ ಫುಲ್ ಸೆಟ್ ನಲ್ಲಿ ಈ ಸಾಂಗನ್ನು ಚಿತ್ರೀಕರಿಸಲಾಗಿದ್ದು, ನಾಯಕ ಶ್ರೀಮುರಳಿ ಮತ್ತು ತಂಡ ಭರ ಭರ.. ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇನ್ನು ಸದ್ಯ ಬಿಡುಗಡೆಯಾಗಿರುವ ಲಿರಿಕಲ್ ವಿಡಿಯೋ ಮೂಲಕ ಕಾಮಿಡಿ ಕಿಂಗ್ ಸಾಧುಕೋಕಿಲ ಕೂಡ ಚಿತ್ರದಲ್ಲಿರುವುದು ರಿವೀಲ್ ಆಗಿದೆ.  ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಜೀವನದ ಕನ್​ಫ್ಯೂಸನ್ನು ಮರೆತು..ಹುಟ್ಟಿಸಿದ ದೇವರು ಹುಲ್ಲು ಮೇಯಿಸಲ್ಲ ಎಂಬ ನಂಬಿಕೆಯೊಂದಿಗೆ ಭರ ಭರ ಭರ ಭರಾಟೆ.. ಸಾಂಗು ಮೂಡಿಬಂದಿದೆ.

ಇನ್ನು ಚಿತ್ರದಲ್ಲಿ ನಾಯಕಿಯಾಗಿ ಶ್ರೀಲೀಲಾ ಕಾಣಿಸಲಿದ್ದು, ಹಾಗೆಯೇ ವಿಶೇಷ ಪಾತ್ರದೊಂದಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಎಂಟ್ರಿಯಾಗಲಿದ್ದಾರೆ. ಈಗಾಗಲೇ ರೋರಿಂಗ್ ಸ್ಟಾರ್ ಅಭಿಮಾನಿಗಳು ‘ಭರಾಟೆ’ಯ ಸೌಂಡ್​ಗೆ ಫಿದಾ ಆಗಿದ್ದು, ‘ಉಗ್ರಂ’, ‘ರಥಾವರ’ ಮತ್ತು ‘ಮಫ್ತಿ’ ಚಿತ್ರದಂತೆ ಮತ್ತೊಂದು ಆ್ಯಕ್ಷನ್ ಪ್ಯಾಕ್ಡ್​​ ಸಿನಿಮಾದ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಭರಾಟೆ ಆರ್ಭಟ ಸೆಪ್ಟೆಂಬರ್ 27 ರಂದು ಶುರುವಾಗಲಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಭಾರತದಲ್ಲಿ ಸೆನ್ಸಾರ್ ಕಟ್ ಆದ ಫೋಟೋ ಅಮೆರಿಕಾದಲ್ಲಿ ಲೀಕ್!

Previous article

ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ಸನ್ನಿಲಿಯೋನ್ 2 ಕೋಟಿ ನೆರವು!

Next article

You may also like

Comments

Leave a reply

Your email address will not be published. Required fields are marked *