ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. ಚಿತ್ರದ ಜಿಂದಾ ಸಾಂಗ್ ಇತ್ತೀಚಿಗೆ ರಿಲೀಸ್ ಆಗಿದ್ದು, ಸಿನಿಮಾದ ಪ್ರಮುಖ ಹಾಡೇ ಇದಾಗಿರುವುದು ವಿಶೇಷ. ಇನ್ನು ಚಿತ್ರದ ಮುಖ್ಯ ದೃಶ್ಯಗಳು ಹಾಡಿನಲ್ಲಿ ಬಂದು ಹೋಗುತ್ತವೆ. ಹಾಡು ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 5 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಸ್ಲೋ ಮೋಷನ್ ಹಾಡು ಹಿಟ್ ಆಗಿದ್ದು, ಈ ಹಾಡು ಕೂಡ ಅದೇ ಹಾದಿಯಲ್ಲಿ ಸಾಗಿದೆ. ‘ಭಾರತ್’ ಸಲ್ಲು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುವ ಸೂಚನೆ ನೀಡಿದೆ.
ಚಿತ್ರದಲ್ಲಿ ಸಲ್ಮಾನ್ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಯಸ್ಸಾದ ಸಲ್ಲು ಲುಕ್ ಗಮನ ಸೆಳೆದಿದೆ. 1964 ರಿಂದ ಪ್ರಾರಂಭವಾಗುವ ಈ ಕತೆ 2010ರಲ್ಲಿ ಮುಕ್ತಾಯವಾಗುತ್ತೆ. ಈ ಎಲ್ಲಾ ಕಾಲಘಟ್ಟಕ್ಕೂ ಹೊಂದಿಕೊಳ್ಳವ ಹಾಗೆ ಸಲ್ಮಾನ್ ಗೆಟಪ್ ಬದಲಾಯಿಸಿಕೊಂಡಿದ್ದಾರೆ. ದಿಶಾ ಪಟಾನಿ ಹಾಗೂ ಕತ್ರೀನಾ ಕೈಫ್ ಸಿನಿಮಾದ ನಾಯಕಿಯರಾಗಿದ್ದಾರೆ. ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಚಿತ್ರದ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಜೂನ್ 5 ರಂದು ರಿಲೀಸ್ ಆಗಲಿದೆ.
No Comment! Be the first one.