ಬಿಗ್ ಸ್ಕ್ರೀನ್ ನಲ್ಲಿ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ಕಾಮನ್ನಾಗಿ ಸ್ಮಾಲ್ ಸ್ಕ್ರೀನ್ ಗೆ ದಾಂಗುಡಿ ಇಡುವ ಸೆಲೆಬ್ರೆಟಿಗಳಿಗೇನು ಬರವಿಲ್ಲ. ಅದೇ ರೀತಿ ಸ್ಮಾಲ್ ಸ್ಕ್ರೀನ್ ನಲ್ಲಿ ಕೊಂಚ ಫ್ರೇಮಸ್ ಆದ ತಕ್ಷಣವೇ ಬಿಗ್ ಸ್ಕ್ರೀನ್ ಗೆ ಹಾರುವ ಮಂದಿಗೂ ಲೆಕ್ಕವಿಲ್ಲ. ಸದ್ಯ ಇಲ್ಲಿಯವರೆವಿಗೂ ಬಿಗ್ ಸ್ಕ್ರೀನ್ ನಲ್ಲಿ ಮಿಂಚುತ್ತಿದ್ದ ಭಾವನ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿಯಾಗಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಸದ್ಯ ಪ್ರಸಾರವಾಗುತ್ತಿರುವ ಪದ್ಮಾವತಿ ಧಾರಾವಾಹಿಯಲ್ಲಿ ನಟಿ ಭಾವನ ನಟಿಸುತ್ತಿದ್ದಾರೆ. ಪದ್ಮಾವತಿ ಧಾರವಾಹಿ ಮುಗಿಯುತ್ತಿದೆ ಎಂಬ ಸುದ್ದಿಯ ಬೆನ್ನಲ್ಲೆ ಪದ್ಮಾವತಿ ಧಾರವಾಹಿಗೆ ಅಂತ್ಯ ಹಾಡಲು ನಟಿ ಭಾವನಾ ಬಂದಿರುವುದು ವಿಶೇಷವಾಗಿದೆ. ಪದ್ಮಾವತಿಯ ಮುತ್ಯಾಲನ ಪಾತ್ರವನ್ನು ಕೊಂದು ಜಗದ್ದೋದ್ದಾರ ಮಾಡುವ ಹೊಣೆ ಹೊತ್ತಿರುವ ಭಾವನ, ಕಾಳಿ ಅವತಾರವೆತ್ತಿ ಮುತ್ಯಾಲನನ್ನು ಕೊಲ್ಲುವ ಜತೆಗೆ ಅಭಿಮಾನಿಗಳಿಗೂ ದರ್ಶನ ಭಾಗ್ಯ ನೀಡಲು ರೆಡಿಯಾಗಿದ್ದಾರೆ.
No Comment! Be the first one.