ತಮಿಳಿನಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಶಾ ನಟಿಸಿದ್ದ ಸೂಪರ್ ಹಿಟ್ ಚಿತ್ರ 96. ಭಾವನಾತ್ಮಕವಾಗಿ ಕಾಡುತ್ತಲೇ ಎಲ್ಲರಿಗೂ ಇಷ್ಟವಾಗಿದ್ದ ಈ ಸಿನಿಮಾ ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ 99 ಆಗಿ ಕನ್ನಡಕ್ಕೆ ಬರುತ್ತಿರೋದು ಗೊತ್ತೇ ಇದೆ. ಇದರಲ್ಲಿ ಜಾಕಿ ಭಾವನಾ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿದ್ದಾರೆ. ಇದೀಗ 99 ಚಿತ್ರದಲ್ಲಿನ ಭಾವನಾಳ ಲುಕ್ ಹೇಗಿದೆ ಎಂಬುದು ಜಾಹೀರಾಗಿದೆ!
ಮೂಲ ತಮಿಳು ಚಿತ್ರದಲ್ಲಿ ತುಂಬಾ ಗಮನ ಸೆಳೆದಿದ್ದದ್ದು, ಎಲ್ಲರನ್ನೂ ಕಾಡಿದ್ದು ತ್ರಿಶಾ ಸರಳ ಕಸ್ಟ್ಯೂಮ್ ಮತ್ತು ಅಂಥಾದ್ದೇ ನಟನೆ. ಇಂಥಾ ಚಿತ್ರ ಕನ್ನಡಕ್ಕೆ ರೀಮೇಕ್ ಆಗುತ್ತದೆ ಎಂದರೆ ಕುತೂಹಲ ಹುಟ್ಟೋದರಲ್ಲಿ ಅಚ್ಚರಿಯೇನಿಲ್ಲ. ಕನ್ನಡದಲ್ಲಿ ಭಾವನಾ ತ್ರಿಶಾ ಅಭಿನಯಿಸಿದ್ದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದೇಟಿಗೆ ಅಭಿಮಾನಿಗಳು ಥ್ರಿಲ್ ಆಗಿದ್ದರು. ಇದೀಗ ಅವರ ಲುಕ್ ಅನ್ನು ಚಿತ್ರತಂಡ ಹೊರ ಬಿಟ್ಟಿದೆ.
ಜಾಕಿ ಭಾವನಾ ಕಪ್ಪು ಬಣ್ಣದ ಕುರ್ತಾದಲ್ಲಿ ಕಂಗೊಳಿಸಿದ್ದಾರೆ. ಇಡೀ ಚಿತ್ರದ ತುಂಬಾ ಇಂಥಾ ಸರಳವಾದ ಡ್ರೆಸ್ಸಿನಲ್ಲಿಯೇ ಆಕೆ ಕಾಣಿಸಿಕೊಳ್ಳಲಿದ್ದಾರೆ. ತ್ರಿಶಾ ಅವರ ಕಾಸ್ಟ್ಯೂಮ್ ಹುಡುಗೀರ ಜಗತ್ತಿನಲ್ಲಿ ಹೊಸಾ ಅಲೆಯೆಬ್ಬಿಸಿತ್ತು. ಅನೇಕರು ಮತ್ತೆ ಇಂಥಾದ್ದೇ ಡ್ರೆಸ್ಸಿನತ್ತ ವಾಲಿಕೊಂಡಿದ್ದರು. ಈಗ ಭಾವನಾ ಕೂಡಾ ಅಮಥಾದ್ದೇ ಒಂದು ಟ್ರೆಂಡ್ ಅನ್ನು ಕನ್ನಡದಲ್ಲಿಯೂ ಹುಟ್ಟು ಹಾಕೋ ಲಕ್ಷಣಗಳೇ ದಟ್ಟವಾಗಿವೆ.
#