ನದೀಂ ಧೀಂ ತನ ಹಾಡಿಗೆ ಹೆಜ್ಜೆ ಹಾಕಿ ಕನ್ನಡಿಗರ ಮನಸೂರೆಗೊಳಿಸಿದ್ದ ನಟಿ ಗಾಳಿಪಟ ಭಾವನ. ಆ ಚಿತ್ರದ ಯಶಸ್ಸಿನ ನಂತರ ತಮಿಳು ರಂಗಕ್ಕೂ ಪದಾರ್ಪಣೆ ಮಾಡಿ ಕೊಲ ಕೋಲಾಯ ಮುದ್ರಿಕಾ, ವಿನ್ಮೀಂಗಲ್, ವನ ಯುದ್ದಂ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಕನ್ನಡದಲ್ಲೂ ವಾರೆವ್ಹಾ, ಅಟ್ಟಹಾಸ, ಬಹುಪರಾಕ್, ಪರಪಂಚ, ಸತ್ಯಹರಿಶ್ಚಂದ್ರ, ದಯವಿಟ್ಟು ಗಮನಿಸಿಯಲ್ಲಿಯೂ ಅಭಿನಯಿಸಿದ್ದಾರೆ.

Actress Bhavana Rao New Photoshoot Stills

ಸದ್ಯ ಪ್ರೇಮ್ ನಾಯಕತ್ವದ ಗಾಂಧಿಗಿರಿಯಲ್ಲಿ ನಾಯಕಿಯಾಗಿ ಭಾವನ ನಟಿಸುತ್ತಿದ್ದು, ಜತೆ ಜತೆಗೆ ನೃತ್ಯ ನಿರ್ದೇಶಕಿಯಾಗಿಯೂ ಕೆಲಸ ಮಾಡುವ ಹಂಬಲದಲ್ಲಿದ್ದಾರೆ. ನಟನೆಯ ಜತೆಗೆ ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ಭಾವನಾ ರಾವ್, ಯಾನ ಸಿನಿಮಾದ ಮೂಲಕ ನೃತ್ಯ ನಿರ್ದೇಶಕಿಯಾಗಿಯೂ ಬಡ್ತಿ ಪಡೆದಿದ್ದಾರೆ. ಹೌದು ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ ಹಾಗೂ ಅವರ ಮಕ್ಕಳೇ ನಟಿಸಿರುವ ಯಾನ ಚಿತ್ರದ ಹಾಡೊಂದಕ್ಕೆ ಭಾವನ ರಾವ್ ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ಆ ಹಾಡನ್ನು ಮಡಿಕೇರಿ ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಚಿತ್ರಕ್ಕೆ ಜೋಶ್ವಾ ಶ್ರೀಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

 

CG ARUN

ಕಮಾರ್ ಫಿಲಂ ಫ್ಯಾಕ್ಟರಿ ವತಿಯಿಂದ ವುಮೆನ್ಸ್ ಡೇ ಔಟ್ ವಿಥ್ ಫ್ಯಾಷನ್ಸ್ ಕಾರ್ಯಕ್ರಮ!

Previous article

ದಂಗಲ್ ಹುಡುಗಿ ನಟನೆಯ ಗುಡ್ ಬೈ!

Next article

You may also like

Comments

Leave a reply

Your email address will not be published. Required fields are marked *